ಹೇಳೇ ಸಖಿ

ಹೇಳೇ ಸಖಿ 

ಆಕಾಶಕ್ಕೆ ಬಲೆಯ
ಬೀಸಿ
ಕಾಮನಬಿಲ್ಲನು
ಕೆಳಗೆ ಇಳಿಸಿ
ಬಣ್ಣಗಳನ್ನು
ನಿನ್ನೊಡಲಿಗೆ ನಾ
ತುಂಬಿಸಲೇ…?
ನೋವಿನ ಛಾಯೆಯು
ಬೀಳದ ಹಾಗೆ
ಪ್ರೀತಿಯ ಕೋಟೆಯನ್ನು
ನಾ ಕಟ್ಟಲೆ….?
ಪ್ರೀತಿಯ ರಂಗನು
ಹಣೆಬೋಟ್ಟಾಗಿಸಿ
ಈ ಬಾಳ ಪಯಣವನ್ನು
ನಿನ್ನೊಂದಿಗೆ ನಾ
ಹಂಚಿಕೊಳ್ಳಲೇ…?
ಕಣ್ಣೀರೇ ನಾಚುವ
ಹಾಗೆ
ವಿಧಿಯೇ ಅಸೂಯೆ
ಪಡುವಷ್ಟು
ನಾ ನಿನ್ನ
ಪ್ರೀತಿಸುವೆ……

ಡಾ. ನಂದಾ ಕೋಟೂರ್

Don`t copy text!