ಜಗತ್ತಿಗೊಬ್ಬಳೇ ದೇವತೆ

ಜಗತ್ತಿಗೊಬ್ಬಳೇ ದೇವತೆ

ಅಮ್ಮ ಪ್ರತಿ ಮಗುವಿನ ವಿಶ್ವ
ಅವಳಿಂದಲೇ ಕಾಣುವದು ಪ್ರತಿ ಜೀವ ಈ ಜಗತ್ತು
ಮಕ್ಕಳ ಪಾಲಿನ ಕರಗದ ಸಂಪತ್ತು
ಇವಳ ಬಳಿಯಿದ್ದರೆ ಸನಿಹ ಬಾರದು ಆಪತ್ತು

ಮಲಗಿದ್ದರೂ ಅವಳು ಶರಶಯದಲ್ಲಿ
ಕರುಳಕುಡಿಗೆ ಕರುಣಿಸುವಳು ದೀರ್ಘಾಯುಷ್ಯದ ವರ ಹಂಬಲಿಸಿದವರಿಗೆ ಆಶ್ರಯನೀಡೋ ಆಲದಮರ
ಇವಳೇ ಸ್ವರ್ಗದ ಮಹಾದ್ವಾರ, ಇವಳೇ ಜಗಕಾಧಾರ

ಅಮ್ಮನ ಋಣ ತೀರಿಸುವ ಶಕ್ತಿ ಆ ಬ್ರಹ್ಮನಿಗೂ ಇಲ್ಲ
ಅವಳ ಎದೆಯಾಲ ಸವಿಯ ಸರಿಗಟ್ಟೋ ಶಕ್ತಿ ಆ ಅಮೃತಕ್ಕೂ ಇಲ್ಲ
ಮುಕ್ಕೋಟಿ ದೇವರಿಗೂ ಹೆತ್ತವಳೇ ಅಧಿಪತಿ
ದೇವರಿಲ್ಲ ಎನ್ನೋ ಮೂರ್ಖರಿಗೆ ಅಮ್ಮನ ತೋರಿಸಿ ಮಾರಿಗೊಂದು ಬಾರಿಸಿ.

ಜಗತ್ತಿಗೊಬ್ಬಳೇ ದೇವತೆ ಅಮ್ಮ
ದೇವರನ್ನೇ ಪಕ್ಕದಲ್ಲಿಟ್ಟುಕೊಂಡು ಅದ್ಯಾರು ಮಾಡಿದರೋ ದೇವಲೋಕದ ಕಲ್ಪನೆ
ಅಂತ ಕನಸುಕಂಡವನು ನಿಜಕ್ಕೂ ಅವನು ಅಲ್ಪನೆ
ಪ್ರತಿ ಜೀವದ ಎದೆಬಡಿತ ಅಮ್ಮ ಅಮ್ಮ ಎನ್ನಬೇಕು,ಅದೇ ನನ್ನ ಚಿಂತನೆ.

ಅಮ್ಮ ಎಂಬುದು ಅಲ್ಲ ಸಾಮಾನ್ಯ ಶಬ್ದ
ಅದ ಕೇಳೇ ದುಷ್ಟ ಶಕ್ತಿಗಳೆಲ್ಲ ಸ್ತಬ್ಧ
ಅಮ್ಮ ಎಂಬ ಎರಡುವರೆ ಅಕ್ಷರ
ಅರಿತವನೇ ನಿಜವಾದ ಸಾಕ್ಷರ

ಸುರೇಶ ಬಳಗಾನೂರು, ಉಪನ್ಯಾಸಕರು

Don`t copy text!