ಅವ್ವ
ನನ್ನ ತಂದೆಗೆ ಬೆನ್ನೆಲಬು ಆದವಳು ನನ್ನ ತಾಯಿ
ಹೆಜ್ಜೆ ಹೆಜ್ಜೆಗೂ ಜೋತೆಗೆ
ನಡೆದು ಸುಖಃ ದು:ಖದಿ
ಸಮಪಾಲು ಉಂಡವಳು//
ಗಂಡನಿಗಾಗಿ ತನ್ನ ಆಸೆ
ಆಕಾಂಕ್ಷೆ ತೊರೆದವಳು
ಬಯಕೆ ಬಚ್ಚಿಟ್ಟವಳು
ಮಕ್ಕಳಿಗಾಗಿ ತನ್ನ
ಸುಖವ ಮರೆತವಳು//
ಮರೆಯಲ್ಲೆ ಅತ್ತವಳು
ನಗುವ ಮುಖವ ತೋರುವವಳು
ಎಲ್ಲರ ಏಳಿಗೆಗೆ ದುಡಿದವಳು
ತನ್ನತನವನ್ನೆ ಕಳೆದುಕೊಂಡವಳು//
ಇಂತಹ ಸೌಭಾಗ್ಯವತಿ ಹೆಣ್ಣಿರದೆ
ಬದುಕಬಹುದೆ ಪುರುಷ ಕ್ಷೇಮದಿ
ಮಕ್ಕಳಿರಬಹುದೆ ಸೌಖ್ಯದಿ
ಎನ್ನ ತವನಿಧಿ ವಿಜಯಮಹಾಂತೇಶ//
-ಸವಿತಾ ಮಾಟೂರು, ಇಲಕಲ್ಲ