ರೊಟ್ಟಿಯ ಸಂಗೀತ
ಅವ್ವ
ನೀನು ತಟ್ಟುತ್ತಿದ್ದ ರೊಟ್ಟಿಯ
ಸದ್ದು ಸಂಗೀತದ ನಾದ ಮೀರಿಸುತಿದ್ದಳು
ಅವ್ವ
ನೀನು ಹಸಿದಿದ್ದರು ಮಕ್ಕಳು ಊಣಲಿ ಎಂದು ತಣ್ಣೀರು ಕುಡಿದು ಹೊಟ್ಟೆ ತುಂಬಿಸಿಕೊಂಡವಳು
ಅವ್ವ
ಚಂದನ ಸೀರೆ ತೊಡಲಿಲ್ಲ ಮಕ್ಕಳಿಗೆ ಬಟ್ಟೆ ಕೊಡಿಸಿ ನಕ್ಕು ನಲಿದು ಸಂಭ್ರಮಿಸಿದವಳು
ಅವ್ವ
ಮಕ್ಕಳ ಒಳಿತಿಗಾಗಿ ದೇವರು ದಿಂಡಿರುಗಳಿಗೆ ದಿನವಿಡಿ ತಡಕಾಡಿದವಳು ತಾನೇ ದೇವರಾಗಿ ಇಲ್ಲದ ದೇವರಿಗೆ ಕೈ ಮುಗಿದವಳು
ಅವ್ವ
ಮೈಮೇಲಿದ್ದ ಬಂಗಾರ ತೆಗೆದು
ಬದಕು ಬಂಗಾರ ಮಾಡಿದವಳು
ಅವ್ವ
ನೀನು ಭೂಮಿ ತೂಕದವಳು
ನೀನು ಮುಗಿಲೆತ್ತರದ ಆಕಾಶ ದೀಪವಾದವಳು
ಅವ್ವ ಎಂದರೆ ಅವ್ವ,
ಆಕಿ ನಮ್ಮ ಅವ್ವ ಹೌದು,
ನಿಮ್ಮ ಅವ್ವ ಹೌದು.
– ಸೌವೀ, ಮಸ್ಕಿ