ತಾಯಿಯ ಮಡಿಲಲ್ಲಿ
ದಯಾ ಸಾಗರದ ಅಲೆಯಲ್ಲಿ
ಮಿಂದು ಬಂದವರೇ ನಾವೆಲ್ಲರೂ
ಮುದ್ದು ಅಮ್ಮನ ಮಡಿಲಲ್ಲಿ
ಬೆಚ್ಛೆಗೆ ಮಲಗಿದವರೇ ನಾವೆಲ್ಲ
ಅಮೃತಸವಿಯ ಉಂಡವರೇ ನಾವೆಲ್ಲ
ತೃಪ್ತಿ ಸಿಗದೇ ಅಮ್ಮನ ಕೊಂಡಾಡುವರೇ
ಅನುದಿನವೂ ಭಾವ ಕಾಣುವುದೇ ಅಮ್ಮಾ
ನಿನ್ನ ಮಡಿಲ ಕುಸುಮ ನಾವೆಲ್ಲ
ಸಹನೆಯ ವರಾಧಿ ಪ್ರೀತಿಯ ಶರದಿ
ಮಮತೆಯ ಪ್ರೀತಿಯ ಸಂಕೇತ ಅಮ್ಮ
ಅಮ್ಮನಿಗೆ ಹೆಸರೋ ಅದೇ ದೇವತೆ
ನಿನ್ನ ಮಡಿಲ ಮುದ್ದು ಕುಸುಮ ನಾವೆಲ್ಲ
ಹಾಡಿ ಪಾಡಿ ಏನೇ ಮಾಡಿದರೂ
ಸರಿ ಅಲ್ಲ ನಿನ್ನ ಪ್ರೀತಿಯ ಪರಿಗೆ
ಮೂಕವಿಸ್ಮಯ ಲೋಕ ನಿನ್ನ ಪ್ರೀತಿ
ನಿನ್ನ ಪ್ರೀತಿಯ ಪಡೆದವರೆ ನಾವೆಲ್ಲ
– ಕವಿತಾ ಮಳಗಿ ಕಲಬುರ್ಗಿ