ಜನತಾ ಕಫ್ರ್ಯೂ ನಿಯಮ ಉಲ್ಲಂಘನೆ, ವಾಹನ ಸವಾರರಿಗೆ ದಂಡ ಹಾಕಿದ ಪೆÇಲೀಸರು

 


e-ಸುದ್ದಿ, ಮಸ್ಕಿ
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ಹೆಚ್ಚಳವಾಗುತ್ತಿದ್ದ ತಾಲ್ಲೂಕು ಆಡಳಿತ ಜನತಾ ಕಪ್ರ್ಯೂವನ್ನು ಮತ್ತಷ್ಟು ಬೀಗಿಗೊಳಿಸಿದೆ.
ಭಾನುವಾರ ಬೀದಿಗಿಳಿದ ಪಿಎಸ್‍ಐ ಸಿದ್ಧರಾಮ ನೇತೃತ್ವದಲ್ಲಿನ ಪೆÇಲೀಸ್ ತಂಡ ನಿಯಮ ಉಲ್ಲಂಘಿಸಿ ರಸ್ತೆ ಮೇಲೆ ತಿರುಗಾಡುತ್ತಿರುವ ಬೈಕ್‍ಗಳು ಸೇರಿದಂತೆ 50 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ತೆಗೆದುಕೊಂಡರು.
ಮಾಸ್ಕ್ ಇಲ್ಲದೇ ತಿರುಗಾಡುತ್ತಿರುವ ಜನರಿಗೆ ದಂಡ ಹಾಕಿ ಬಿಸಿ ಮುಟ್ಟಿಸಲಾಯಿತು. ಕರೊನಾ ನಿಯಮ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ ಹೊಟೇಲ್, ಕಿರಾಣಿ ಅಂಗಡಿ ಸೇರಿಂತೆ ಇತರ ಅಂಗಡಿಗಳಿಗೆ ಬೀಗ ಹಾಕಿದ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ನೇತೃತ್ವದಲ್ಲಿನ ಪುರಸಭೆ ಸಿಬ್ಬಂದಿ ದಂಡ ವಸೂಲಿ ಮಾಡಿದರು.
ಪುರಸಭೆ ಹಾಗೂ ಪೆÇಲೀಸ್ ಇಲಾಖೆ ಆದೇಶ ಉಲ್ಲಂಘಿಸಿ ತೆರೆದಿದ್ದ ಕಬ್ಬಿಣ ಮಾರುವ ಅಂಗಡಿ, ಮಾಂಸ ಮಾರಾಟದ ಅಂಗಡಿಕಾರರಿಗೆ ಸಬ್ ಇನ್ ಸ್ಪೆಕ್ಟರ್ ಸಿದ್ಧರಾಮ ಲಾಠಿ ರುಚಿ ತೋರಿಸಿದ ಘಟನೆಯು ನಡೆಯಿತು.
ಈ ನಡುವೆ ಪುರಸಭೆ ಕಚೇರಿಯಲ್ಲಿ ತರಕಾರಿ ವ್ಯಾಪಾರಿಗಳ ಹಾಗೂ ಹಣ್ಣಿ ಬಂಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲಿಕರ ಸಭೆ ನಡೆಸಿದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಕರೊನಾ ನಿಯಮದಂತೆ ದೂರ ದೂರ ಅಂಗಡಿಗಳನ್ನು ಹಾಕಿ ಎಂದು ಸೂಚಿಸಿದರು.
ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ವೈದ್ಯಾಧಿಕಾರಿ ಡಾ. ಮೌನೇಶ, ಪುರಸಭೆ ಆರೋಗ್ಯಾಧಿಕಾರಿ ನಾಗರಾಜ ಇತರರು ಇದ್ದರು. 40 ಕ್ಕೂ ಹೆಚ್ಚು ವ್ಯಾಪಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Don`t copy text!