ದೇವರು ಅಪರಾಧಿ
ಹೆ ರಾಮ ಹೆ ಲಕ್ಷ್ಮಣ
ಸೀತೆಗೆ
ಹೊರ ಹೋಗದಂತೆ ಗೇರೆ
ಹಾಕಿದೆ,
ಕೊರನಕ್ಕೂ ಒಂದು ಗೇರೆ ಹಾಕು
ದಾಟಿದರೆ ಸುಟ್ಟು ಭಸ್ಮವಾಗಲಿ
ಅಯ್ಯಾ ಜೋತಿಷಿ ಹುಟ್ಟಿದಾಗ
ಹೆಸರು ಇಡುವಾಗ
ತಲೆ ಬೊಳಿಸುವಾಗ
ಎಲ್ಲವೂ ನೀ ಹೇಳಿದಂತೆ ಮಾಡಿದೆವು
ರಾಹುಕಾಲದ ಭೂತ ಓಡಿಸಿದೆ
ಮನೆಯಲ್ಲಿ ಅಡಗಿದ್ದ ದೆವ್ವವನೂ ಸುಟ್ಟು ಹಾಕಿದೆ
ಕೊರನಕ್ಕೂ ನೀ ಹೇಳಿದಂತೆ ಮಾಡವೆವು
ನೀ ಕೇಳಿದಷ್ಟು ದಕ್ಷಣೆ
ಬೇಡಿದಷ್ಟು ಬೆಳ್ಳಿ ಬಂಗಾರದ
ಕಿರೀಟ ಖಡ್ಗ ಮಾಡಿಸುವೆ
ಮಾಸ್ಕ ಸ್ಯಾನಿಟೈಸರ್ ಹಾಕದೆ
ಕೊರನಾ ಹೊಗಲು ಒಂದೇ ಒಂದು ತಾಯ್ತ ಕಟ್ಟು
ಬ್ರಹ್ಮ ದೇವಾ
ಹುಟ್ಟಿಗೂ ಸಾವಿಗೂ ನೀ ಕಾರಣ
ಭೂಲೋಕದಲ್ಲಿ ಎಲ್ಲವೂ ನಿನ್ನ ಸೃಷ್ಟಿ
ಎಲ್ಲರ ಹಣೆಬರ ಬರೆಯುವನೀ
ಕರೋನದ ಹಣೆ ಬರಹ ಬರಯಲಿಲ್ಲವೇಕೆ
ಜಗದ ಮಕ್ಕಳ ಜೀವ ನುಂಗುವ ರೋಗ
ಜಗದಗಲ ಅರಡಿ
ನೀ ಸೃಷ್ಟಿದ ಮಕ್ಕಳ ಸಾಯುವಾಗ
ಯಾವ ಸೂರಪಾನದ ಮಡುವಿನಲ್ಲಿ ಮುಳುಗಿರುವೆ
ನಿಜವಾಗಿಯೂ ಬದುಕಿದ್ದರೆ
ಎದ್ದು ಬಾ ಬ್ರಹ್ಮ ಮಸಣದಲ್ಲಿ
ಸುಟ್ಟು ಬಿದ್ದ ಬೆಟ್ಟದಂತ ಬೂದಿಯ ನೋಡಲು.
ಆಂಜನೇಯ
ಅಂದು ಒಬ್ಬರಿಗೊಸ್ಕರ
ಸಂಜೀವಿನಿ ಬೆಟ್ಟವನ್ನೆ ಹೊತ್ತು ತಂದೆ
ಅಂದು ಬೆಟ್ಟ ಹೊತ್ತು ತಂದದ್ದು ನಿಜವೇ
ಆಗಿದ್ದರೇ
ಇಂದು ಭಾರತವೇ ಕರೋನಕ್ಕೆ
ಸಂಜೀವಿನಿ ಆಕ್ಸಿಜನ್ ಬೇಡುತ್ತಿದೆ
ಎಲ್ಲಾದರೂ
ಅಡಗಿದ್ದರೆ ಯಾರಿಗೂ ತಿಳಿಯದಂತೆ
ಭಾರತಕ್ಕೆ ತಂದು ಬೀಡು.
ಮುಕ್ಕೋಟಿ ದೇವರುಗಳೇ
ಸಾಕ್ಕಿನ್ನು ಕಣ್ಣಿಗೆ ಕಾಣದೇ
ಕಳ್ಳ ಸುಳ್ಳರ ಹಾಗೆ ಬದುಕಿದ್ದು
ಮತ್ತೊಮ್ಮೆ ನಿಮ್ಮ ಶಕ್ತಿ ಪವಾಡ ತೋರಿಸುವ
ಅವಕಾಶ ಬಂದಿದೆ.
ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿಯೂ ಬರಲಿಲ್ಲ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಕಾಣಲಿಲ್ಲ
ಕೋನೆ ಪಕ್ಷ
ಈಗಲಾದರೂ ಬನ್ನಿ
ನಿಮ್ಮ
ಬೈಬಲ್, ಭಗವದ್ಗೀತೆ, ಖುರಾನ
ಜೋತಿಷ್ಯಗಳಲ್ಲಿ
ಖಾಲಿ ಇರುವ
ಬೆಡ್, ಆಕ್ಸಿಜನ್ ICU ರೂಮಗಳು
ಕಾಣುತ್ತಿಲ್ಲ
ಸಾವಿರಾರು ಜನ ಸಾವನಪ್ಪುತಿರುವರು
ನಿಮ್ಮ ಮೇಲಿನ ನಂಬಿಕೆ ಇನ್ನೂ ಹೋಗಿಲ್ಲ
ಆದರೂ ಜನ
ಬೆಡ ಆಕ್ಸಿಜನಗಾಗಿ ಗೂಗಲ್ ನಲ್ಲಿ
ಹುಡುಕುತ್ತಿದ್ದಾರೆ.
–ಧರ್ಮರಾಜ ಗೋನಾಳ
8970406979