ಲಿಂಗಾಯತ ಧರ್ಮದ ಆಚರಣೆಗಳು ಮತ್ತು ಸಂಸ್ಕಾರಗಳು

ಲಿಂಗಾಯತ ಧರ್ಮದ ಆಚರಣೆಗಳು ಮತ್ತು ಸಂಸ್ಕಾರಗಳು ಎನ್ನುವ ವಿಷಯದ ಮೇಲೆ ಸಾಮೂಹಿಕ ಸಂವಾದ ಕಾರ್ಯಕ್ರಮವನ್ನು ಗೂಗಲ್ ಮೀಟ್ 27 ರಲ್ಲಿ ದಿನಾಂಕ 9/5/2021 ರಂದು ಹಮ್ಮಿಕೊಳ್ಳಲಾಗಿತ್ತು…

ಕುಮಾರಿ ಗ್ರೀಷ್ಮವಚನಪ್ರಾರ್ಥನೆ ಹಾಡಿದರು.
ಎಣ್ಣೆ ಬೇರೆ ಬತ್ತಿ ಬೇರೆ ಎರಡೂ ಕೂಡಿ ಸೊಡರಾಯಿತ್ತು ಎನ್ನುವ ಅಲ್ಲಮ ಪ್ರಭುಗಳು ಬರೆದಿರುವ ವಚನವನ್ನು ಹಾಡಿದಳು..

ಶಿವಾನಂದ ಅರಭಾವಿ
ಮೊದಲು ಅವರು ಎಲ್ಲರಿಗೂ ಶರಣು ಸಮರ್ಪಣೆಯನ್ನು ತಿಳಿಸಿ, ಕಡಕೋಳ ಮಡಿವಾಳೇಶ್ವರರು ಬರೆದಂತ,
ಮುಡಿಚಟ್ಟಿನೊಳು ಬಂದು ಮುಟ್ಟಿ ತಟ್ಟಿ ಅಂತೀರಿ, ಮುಡಿ ಚೆಟ್ಟೆಲ್ಲಾದರೆ ಹೇಳಣ್ಣ ಎನ್ನುವ ಅರ್ಥಪೂರ್ಣ ಗೀತೆಯನ್ನು ಪ್ರಾರ್ಥನಾ ರೂಪವಾಗಿ ಹಾಡಿದರು…
ಇಂತಹ ಆಚರಣೆಗಳನ್ನು ಮಾಡಿ ಎಂದು ಬಸವಾದಿ ಶರಣರು ಎಲ್ಲಿಯೂ ಹೇಳಿಲ್ಲ , ವಚನ ಸಾಹಿತ್ಯದ ಆಧಾರದ ಮೇಲೆ ಆಯಾ ವಚನಗಳನ್ನು ಆರಿಸಿಕೊಂಡು ತಯಾರು ಮಾಡಿದ್ದೇವೆ ಇವತ್ತಿನ ಕಲ್ಯಾಣಮಹೋತ್ಸವ ಅತ್ಯಂತ ಆಡಂಬರಕ್ಕೆ ಹೋಗಿದೆ ನಾವು ಶರಣರ ಆಶಯಗಳನ್ನು ಗಾಳಿಗೆ ತೋರಿದ್ದೇವೆ ಎಂದು ಹೇಳಿದರು…
ಮದುವೆ ಮರಣ ಗೃಹಪ್ರವೇಶ ಈ ವಿಷಯಗಳ ಬಗ್ಗೆ ತಿಳಿಸುವುದು ಆದರೆ ಮದುವೆಯು ಅತಿ ಹೆಚ್ಚಿನ ಹಣದ ಅವಶ್ಯಕತೆಯನ್ನು ತೆಗೆದುಕೊಳ್ಳುತ್ತದೆ. ಒಂದು ಮನೆಯ ಗೃಹಪ್ರವೇಶಕ್ಕೂ ಕೂಡ ಹವನ ಹೋಮಗಳನ್ನು ಮಾಡಲು ಅತ್ಯಂತ ಹೆಚ್ಚಿನ ದರವನ್ನು ನಿಗದಿಪಡಿಸಿದ್ದಾರೆ. ಮನೆಯನ್ನು ಕಟ್ಟುವವರನ್ನು ಮನೆಯ ಗೃಹಪ್ರವೇಶಕ್ಕೆ ಕರೆಯುವುದಿಲ್ಲ , ಇಲ್ಲದ ಸಲ್ಲದ ವ್ಯಕ್ತಿಗಳನ್ನು ಕರೆದು ಗೃಹಪ್ರವೇಶ ಮಾಡಿಸುತ್ತಾರೆ ಎಂದು ಹೇಳಿದರು.. ಅರಿವು ಆಚಾರ ಅನುಭವ ದಾಸೋಹವನ್ನು ತಿಳಿಯದೆ ಇರುವವರನ್ನು ನಾವು ಕರೆಯುತ್ತೇವೆ, ಮಂತ್ರವನ್ನು ಹೇಳಿಕೊಂಡು ಮನೆಯ ಒಳಗೆ ಹೋಗುತ್ತೇವೆ, ಇದು ಶರಣ ಧರ್ಮಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದರು…
ಮದುವೆಗಳು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸ್ವರೂಪ ತಾಳುತ್ತಿವೆ ಇದು ಮಡದಿಗಾಗಿ ಮಾಡುವ ದುಂದುವೆಚ್ಚ ಎಂದು ತಿಳಿಸಿ, ಮೂರು ತಾಸಿನ ಕಾರ್ಯವನ್ನು ಮಾಡಲು ತುಂಬಾ ಹಣವನ್ನು ವೆಚ್ಛ ಮಾಡುತ್ತೇವೆ , ಇದರಿಂದ ಬಡವರಿಗೆ ತುಂಬಾ ಕಷ್ಟವಾಗುತ್ತಿದೆ, ಸತ್ಯದ ನೆಲೆಯಲ್ಲಿ ಸರಳ ರೀತಿಯಲ್ಲಿ ಮಾಡಬೇಕು ಎಂದು ಹೇಳಿದರು. ನಾವು ಮಾಡುವ ಕಲ್ಯಾಣವು ಬೇರೆಯವರು ನಮ್ಮನ್ನು ನೋಡಿ ಅನುಸರಿಸಬೇಕು ಎಂದು ತಿಳಿಸಿ ಹೇಳಿದರು…

ಅಂಜೆಲಿನಾ ಗ್ರೆಗರಿ
ಎಲ್ಲರಿಗೂ ಶರಣಾರ್ಥಿಗಳನ್ನು ತಿಳಿಸಿದ ಇವರು, ನಾನು ಈ ವೇದಿಕೆಗೆ ಹೊಸಬಳು,ಈ ಕಾರ್ಯಕ್ರಮದಲ್ಲಿ ಖುಷಿಪಡುವಂತ ಬಹಳಷ್ಟು ವಿಚಾರಗಳು ಇವೆ ಈ ಹಿಂದೆ ಮಾಂಸಾಹಾರದ ಬಗ್ಗೆ ಮಾತನಾಡಿದ್ದೇವೆ. ಇದರಿಂದ ನನ್ನ ಜೀವನದಲ್ಲಿ ಬದಲಾವಣೆ ಆಯಿತು ಎಂದು ತಿಳಿಸಿ,ಒಂದು ಪ್ರಾಣಿಯನ್ನು ತಿಂದು ಜೀರ್ಣ ಮಾಡಿಕೊಳ್ಳುತ್ತೇವೆ ಎಂದರೆ ಇದು ಪಾಪ ಎಂಬ ಅರಿವು ನನಗೆ ಬಂದಿರುವುದರಿಂದ ನಾನು ಒಂದು ವಾರದಿಂದ ಮಾಂಸಾಹಾರವನ್ನು ತಿಂದಿಲ್ಲ ಎಂದು ತಿಳಿಸಿದರು..

ಶಿವಶರಣಪ್ಪಮದ್ದೂರ
ಎಲ್ಲರಿಗೂ ಶರಣು ಶರಣಾರ್ಥಿ ಗಳನ್ನು ತಿಳಿಸಿದ ಇವರು ಲಿಂಗಾಯತ ಧರ್ಮದ ಆಚರಣೆಗಳು ತುಂಬಾ ವಿಶಾಲವಾದವುಗಳು, ದೈನಂದಿನ ಆಚರಣೆಗಳಲ್ಲಿ ತಿಳಿದೋ ತಿಳಿಯದೆಯೋ ತುಂಬಾ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದೇವೆ ಆದರೆ ಇವು ಮೂಲ ಧರ್ಮದ ಆಚರಣೆಗಳಲ್ಲ ಎಂದು ತಿಳಿಸಿ, ಕಾಲಿಗೆ ನಮಸ್ಕಾರ ಮಾಡುವುದನ್ನು ಬಸವಣ್ಣನವರು ಎಂದು ಒಪ್ಪಿಲ್ಲ ಎಂದು ತಿಳಿಸಿ, ಜ್ಞಾನದ ಅರಿವೇ ಪಾದ ಭೌತಿಕ ಆಚರಣೆ ಸಲ್ಲದು ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ತಿಳಿಸಿದರು.. ಬಾಗಿದ ತಲೆ ಮುಗಿದ ತರಹ ನಾವು ಇರಬೇಕು,ಮನೆದೇವರು ಕುಲದೇವರು ಎಂದು ವಚನ ಸಾಹಿತ್ಯದಲ್ಲಿ ಎಲ್ಲೂ ಇಲ್ಲ ಕೂಡಲಸಂಗಮದೇವನೊಬ್ಬನೇ ದೇವರು ಅವನು ನಮ್ಮೊಳಗೇ ಇದ್ದಾನೆ ಎಂದು ತಿಳಿಸಿದರು. ಬೆಳೆಸಿಕೊಳ್ಳಬೇಕು ಅಂಗದ ಮೇಲೆ ಲಿಂಗ ಸಾನಿಧ್ಯ ವಾಗಬೇಕು ಎಂದು ತಿಳಿಸಿ,ಶರಣರ ಕೊರಳಲ್ಲಿ ಎಂದು ಮಣಿ ಮಾಲೆಗಳು ಉಂಗುರಗಳು ಇರುವುದಿಲ್ಲ ಯಾರು ತನ್ನನ್ನು ತಾನು ಅರಿತುಕೊಳ್ಳುತ್ತಾರೆ ಅವನೇ ದೇವರು ಅವನು ಸ್ವಯಂ ಚೈತನ್ಯ ಹೊಂದಿರುತ್ತಾನೆ ಎಂದು ತಿಳಿಸಿದರು..
ಅರ್ಚನೆ ಪೂಜನೆ ಇವುಗಳನ್ನು ಮಾಡಿದರಷ್ಟೇ ಸಾಲದು, ಪರಸ್ತ್ರೀ ಪರಧನವನ್ನು ಎಂದಿಗೂ ಮುಟ್ಟಬಾರದು ಎಂದು ತಿಳಿಸಿ ಹೇಳಿ, ಸನಾತನಧರ್ಮದಲ್ಲಿರುವುದು ಜಾತಕ ಮಾರ್ಗ, ಹುಟ್ಟಿದ ಶಿಶುಗಳಿಗೆ ಕರ್ಮ ಸೂತಕಗಳನ್ನು ಮಾಡುತ್ತಾರೆ,ಈ ಆಚರಣೆಗಳು ಬದಲಾಗಬೇಕು ಲೌಕಿಕ ಆಚರಣೆಗಳು ಬೇಡವೇ ಬೇಡ,ಶರಣರಿಗೆ ಆಸೆಯೂ ಇಲ್ಲ ನಿರಾಸೆಯೂ ಇಲ್ಲ ಎಂದು ತಿಳಿಸಿದರು….
ಲಗ್ನದಲ್ಲಿ ತಾಳಿ ಕಟ್ಟುವುದು ಶರಣ ಧರ್ಮದಲ್ಲಿಲ್ಲ ಸೊಸೆಯನ್ನು ಮನೆ ತುಂಬಿಸಿಕೊಳ್ಳುವಾಗ ಹೊಸ್ತಿಲಿಗೆ ಮೊಳೆ ಹೊಡೆಯುತ್ತಾರೆ, ಅಕ್ಕಿಯನ್ನು ಸೇರಿನಲ್ಲಿ ತುಂಬಿ ಕಾಲಿನಿಂದ ತಳ್ಳಿ ಬರುತ್ತಾರೆ ಇದು ತಪ್ಪು ಎಂದು ತಿಳಿಸಿದರು…
ಕೂಸು ಹುಟ್ಟಿದ ಸಮಯದಲ್ಲಿ ಹೆಸರಿಡುವಾಗ ಅರಿವಿನ ಜ್ಞಾನವನ್ನು ಪಡೆದುಕೊಂಡು ಹೆತ್ತ ತಂದೆ-ತಾಯಿಗಳೇ ಮಗುವಿಗೆ ಹೆಸರು ಇಡಬೇಕು ಅದು ಕರ್ಮಕಾಂಡ ಆಗುವುದಿಲ್ಲ ಎಂದು ತಿಳಿಸಿದರು…
ಗೃಹಪ್ರವೇಶದಲ್ಲಿ ಲಿಂಗಾಯತರು ಯಾವುದೂ ಗೊತ್ತಿಲ್ಲದೆ ಹವನ, ಹೋಮ ಆಕಳನ್ನು ನುಗ್ಗಿಸುವುದು ಮಾಡುವುದು ಸರಿಯಲ್ಲ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ ಎಂದು ತಿಳಿಸಿ ಹೇಳಿ ನಾವುಗಳು ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು, ವಚನಗೀತೆ ವಚನಸಾಹಿತ್ಯವನ್ನು ಮಂಡಿಸಬೇಕು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿ ಪ್ರಸಾದವನ್ನು ಸ್ವೀಕರಿಸಬೇಕು ಎಂದು ತಿಳಿಸಿದರು…
ಲಿಂಗೈಕ್ಯರಾದ ಸಂದರ್ಭದಲ್ಲಿ ಹೆಣವನ್ನು ಶೃಂಗರಿಸಿ ಪೂಜಿಸಿ ಸುಡುತ್ತಾರೆ ನಂತರದ ಶ್ರಾದ್ಧ,ತಿಥಿಗಳನ್ನು ಮಾಡುತ್ತಾರೆ ಗರುಡಪುರಾಣ ಸೃಷ್ಟಿ ಮಾಡುತ್ತಾರೆ ಹಾಗೂ ನಾನಾ ತರದ ಪೂಜೆಗಳನ್ನು ಮಾಡುತ್ತಾರೆ ಇದು ಸಲ್ಲದು ಎಂದು ತಿಳಿಸಿ ,ಲಿಂಗ ಭಕ್ತರಿಗೆ ವಿಭೂತಿಯನ್ನು ಹಚ್ಚಬೇಕೆಂದು ಚೆನ್ನಬಸವಣ್ಣನವರು ಹೇಳುತ್ತಾರೆ ಎಂದು ತಿಳಿಸಿದರು.
ಬಸವಧರ್ಮದಲ್ಲಿ ಸೂತಕಗಳು ಇಲ್ಲ ಎಂದು ತಿಳಿಸಿ, ಗುರು, ಲಿಂಗ, ಜಂಗಮ, ಪಾದೋದಕ ಪ್ರಸಾದಗಳ ಬಗ್ಗೆ ವಿವರಣೆ ಕೊಟ್ಟರು ..
ಅರಿವೇ ಗುರು, ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಆಚಾರವಿರಬೇಕು, ವ್ಯಕ್ತಿ ಚೈತನ್ಯ ವಿಶ್ವಚೈತನ್ಯ ವಾಗಬೇಕೆಂದು ತಿಳಿಸಿದರು..
ಲಿಂಗವೆಂದರೆ ಅರಿವಿನ ಕುರುಹು,ನಾವೇ ಸ್ವಯಂ ಲಿಂಗ ವಾಗಬೇಕು, ತನ್ನ ತಾನು ಅರಿಯದೆ ಪೂಜಿಸಿದರೆ ಅದು ಸ್ಥಾವರವಾಗುತ್ತದೆ ಎಂದು ತಿಳಿಸಿದರು…
ವಚನ ಸಾಹಿತ್ಯದ ಜ್ಞಾನವೇ ಜಂಗಮ, ಭಕ್ತನ ಕಾಯ ಶುದ್ಧವಾದಾಗ ಚೈತನ್ಯವೇ ಜಂಗಮವಾಗುತ್ತದೆ ಭಕ್ತನೇ ಜಂಗಮ ಎಂದು ತಿಳಿಸಿ ಹೇಳಿ,ಕಾವಿ ಕಾಶಾಯ ಧರಿಸಿದವರು ಜಂಗಮರಲ್ಲ ಅವರು ಸನ್ಯಾಸಿಗಳು. ಅರಿವು ಆಚಾರವುಳ್ಳವನು ಜಂಗಮ ಎಂದು ತಿಳಿಸಿದರು..
ಪಂಚಾಚಾರ್ಯರು ಕಾಳ ಮುಖಿ ಸಂಸ್ಕೃತಿಯ ಹೊಂದಿದವರಾಗಿದ್ದರು, ಭಕ್ತರನ್ನು ಬಸವಣ್ಣನಾಗಿ ಮಾಡಿದ ಸ್ವಾಮಿಗಳು ಗುರುಗಳಲ್ಲ ಎಂದು ತಿಳಿಸಿ ಹೇಳಿ, ಬಸವಾದಿ ಶರಣರ ಚೈತನಾತ್ಮಕ ಭಕ್ತನಿರುವ ಮನೆಯೇ ಮಠ ,ಆ ಮನೆಯ ಅಂಗಳವೇ ವಾರಣಾಸಿ,ಇದೇ ಮಹಾಮನೆ ಎಂದು ಬಸವಣ್ಣನವರು ಕರೆದಿದ್ದಾರೆ ಎಂದು ತಿಳಿಸಿದರು..
ಪಾದೋದಕ ಎಂದರೆ ಕಾಲು ತೊಳೆಯುವುದಲ್ಲ, ನಮ್ಮಲ್ಲಿರುವ ಅಜ್ಞಾನವನ್ನು ತೊಳೆಯುವುದೇ ಪಾದೋದಕ ಎಂದು ತಿಳಿಸಿ ಹೇಳಿ,ಆಚರಣೆಗಳು ಅನುಭವದ ಆಧಾರದ ಮೇಲೆ ಇರಬೇಕು ಪೂರ್ವಕ್ಕೆ ಎಂದು ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು. ಮುಂದುವರೆದು ಅವರು ಗರ್ಭ ಲಿಂಗ ಧಾರಣೆ, ಋತುಮತಿ, ಜವಳ ಇವುಗಳು ಶರಣ ಧರ್ಮದಲ್ಲಿ ಇಲ್ಲ ಎಂದು ತಿಳಿಸಿದರು..
ಅದಕ್ಕೆ ಪಟ್ಟಣ ಸರ್ ರವರು ಧರ್ಮಕ್ಕೆ ಎಲ್ಲಿ ಸುಲಿಗೆ ಶೋಷಣೆ ಆಗುತ್ತದೆಯೋ ಅವುಗಳನ್ನು ಬಸವಣ್ಣನವರು ವಿರೋಧಿಸಿದ್ದರು ಎಂದು ತಿಳಿಸಿದರು…

ಚಂದ್ರಶೇಖರ ಗಾಣಿಗೇರ
ಸದ್ಯದ ಪರಿಸ್ಥಿತಿಯಲ್ಲಿ ಈ ಆಚರಣೆಗಳನ್ನು ಹೇಗೆ ತಡೆಯಬೇಕು, ಮುಂದಿನ ಪೀಳಿಗೆಯವರಿಗೆ ನಾವು ಏನು ಹೇಳಬೇಕು ಎಂದು ಕೇಳಿದರು..
ಅದಕ್ಕೆ ಪಟ್ಟಣಸರ್ ರವರು ಉತ್ತರ ಕೊಟ್ಟು, ಅಯ್ಯಾಚಾರ ಮುಂಜಿ ಒಂದೇ, ಅಜ್ಞಾನದಿಂದ ಹೊರ ಬರುವುದೇ ಮುಕ್ತಿ, ಪ್ರಶ್ನೆ ಮಾಡಬೇಕು ಇಲ್ಲ ಬಹಿಷ್ಕರಿಸಬೇಕು ಎಂದು ಹೇಳಿದರು…

ಉಮೇಶ್ ಮಂಟಾಳೆ
ಎಂಟು ನೂರು ವರ್ಷಗಳಿಂದ ನುಸುಳಿಕೊಂಡ ಆಚರಣೆಗಳನ್ನು ಬಿಡಲು ಒಂದೇ ಸಾರಿ ಕಷ್ಟ ಆಗುತ್ತದೆ ಇದಕ್ಕಾಗಿ ನಾವು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿ, ಕಾಲಿಗೆ ಬೀಳುವಾಗ ದೈನ್ಯತೆಯಿರಬೇಕು, ಇಬ್ಬರೂ ಒಬ್ಬರಿಗೊಬ್ಬರು ನಮಸ್ಕಾರ ಮಾಡಿದರೆ ತಪ್ಪಲ್ಲ ಎಂದು ತಿಳಿಸಿದರು..
ಅದಕ್ಕೆ ಅರಭಾವಿ ಸರ್ ಅವರು ನಮ್ಮ ಭಾವನೆಗಳು ಶುದ್ಧವಾಗಿರಬೇಕು ,ಲಿಂಗ ಸಾನಿಧ್ಯವಿರಬೇಕು ಎಂದು ತಿಳಿಸಿದರು…

ಲಿಂಗಪ್ಪ ಕಲ್ಬುರ್ಗಿ
ಓದಿದವರು ಹಾಗೂ ಜ್ಞಾನ ಉಳ್ಳವರು ಎಲ್ಲವನ್ನು ತಿಳಿದುಕೊಳ್ಳಬಹುದು ಆದರೆ ಜನಸಾಮಾನ್ಯರಿಗೆ ಮಾರ್ಗದರ್ಶನವಾಗಲು ಹುಟ್ಟಿನಿಂದ ಸಾವಿನವರೆಗೂ ನಾವು ಹೇಗೆ ಇರಬೇಕೆಂದು ತಿಳಿಸಿ ಬಸವತತ್ವದ ಪುಸ್ತಕಗಳನ್ನು ಬರೆದರೆ ಅವರು ಕೂಡ ತಿಳಿದುಕೊಳ್ಳಬಹುದು ಎಂದು ಹೇಳಿದರು..

ರವಿಶಂಕರ್
ನಮ್ಮ ಹಿರಿಯರು ಕಲಿಸಿರುವುದನ್ನು ನಾವು ಕಲಿತಿದ್ದೇವೆ ಆದರೆ ನಮ್ಮ ಮಕ್ಕಳು ಮೂಢನಂಬಿಕೆಗಳನ್ನು ನಿಲ್ಲಿಸಿ ಎಂದು ಹೇಳುತ್ತಾರೆ ಇವುಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾರೆ , ಇಂದಿನ ಮಕ್ಕಳು ಬದಲಾಗಿದ್ದಾರೆ ಎಂದು ತಿಳಿಸಿದರು…

ಅಶೋಕ್ ಬರಗುಂಡಿ
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಅವರು ಮುಖ್ಯವಾಗಿ ನಾವುಗಳು ಸೃಷ್ಟಿಯ ರಹಸ್ಯವನ್ನು ತಿಳಿದುಕೊಂಡು ಆಚರಣೆಗಳನ್ನು ಮಾಡಬೇಕು ಅವು ನಮ್ಮ ಬದುಕಿನ ಆಚರಣೆಗಳು ಆಗಿರಬೇಕು ಧರ್ಮದ ಮೂಲದ ಆಶಯಕ್ಕೆ ಧಕ್ಕೆಯಾಗದಂತೆ ಇರಬೇಕು ಎಂದು ತಿಳಿಸಿ ಹೇಳಿ,ಅಷ್ಟಾವರ್ಣದ ಅರಿವನ್ನು ತಿಳಿದುಕೊಂಡು ಆಚರಿಸಬೇಕು, ಲಿಂಗಾಯತ ಎನ್ನುವುದು ಧರ್ಮ , ನಾವೆಲ್ಲರೂ ಬಸವರೇ ನಿಜಾಚರಣೆಗಳನ್ನು ನಾವು ರೂಢಿಸಿಕೊಳ್ಳಬೇಕು, ಗುರು ಎನ್ನುವ ತತ್ವ ನಿಗಿನಿಗಿ ಕೆಂಡದಂತೆ ಅದು ಅರಿವಿನ ಸ್ವರೂಪ ಹೊಂದಿರುತ್ತದೆ ಎಂದು ತಿಳಿಸಿ ಹೇಳಿ,ಬಸವಣ್ಣನವರನ್ನು ಬಿಟ್ಟರೆ ಯಾರು ಗುರುಗಳಲ್ಲ, ಉಳಿದವರೆಲ್ಲ ಮಾರ್ಗದರ್ಶಕರು
ಎಂದು ತಿಳಿಸಿದರು…

ಡಾ.ನಾಶಿ
ಅಂತಿಮವಾಗಿ ಲಿಂಗಾಯತ ಧರ್ಮದ ಆಚರಣೆಗಳು ಹೇಗಿರಬೇಕು ಎಂದು ತಿಳಿಸಿ ಹೇಳಿ ಎಂದು ಕೇಳಿದರು..
ಅದಕ್ಕೆ ಬರ್ಗುಂಡಿ ಸರ್ ರವರು ಅಷ್ಟಾವರಣಗಳ ಸಂಸ್ಕಾರಗಳನ್ನು ಮಾಡಿ ತಿಳಿಸಿದರೆ ಸಾಕು ಎಂದು ಹೇಳಿದರು…

ಶಾರದಾ ಅಂಬೆಸಂಗೆ
ಈ ವಿಷಯಗಳು ಮನೆಮನೆಗೂ ಮುಟ್ಟಬೇಕು, ಮಾನವ ಜೀವನದಲ್ಲಿ ಮದುವೆಯೆನ್ನುವುದು ಮುಖ್ಯ ಘಟ್ಟ. ನಾವು ಯಾವ ರೀತಿ ಮಾಡಬೇಕು ಎಂದು ಕೇಳಿದರು.
ಅದಕ್ಕೆ ಶಶಿಕಾಂತ್ ಸಾರ್ ಅವರು ಶರಣ ಮಾರ್ಗದಂತೆ ಸರಳವಾಗಿ ಮಾಡಬೇಕು ಎಂದು ತಿಳಿಸಿದರು…

ಸತ್ಯವತಿ ಮಾತಾಜಿ
ಮಾತಾಜಿ ಅವರಿಗೆ ನಿಮ್ಮ ನುಡಿಗಳನ್ನು ತಿಳಿಸಿ ಎಂದು ಕೇಳಿಕೊಂಡಾಗ, ನಾನು ಮಾತನಾಡುವುದಿಲ್ಲ ಕೇಳಿಸಿಕೊಳ್ಳುತ್ತಿದ್ದೀನಿ ಎಂದು ತಿಳಿಸಿದರು..

ಗೀತಾ ಜಿ ಎಸ್
ಇಂದಿನ ದಿನಗಳಲ್ಲಿ ಪ್ರೇಮ ವಿವಾಹ ಮತ್ತು ಅಂತರ್ಜಾತೀಯ ವಿವಾಹಗಳು ನಡೆಯುತ್ತಿವೆ, ಅವರು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತಿದ್ದಾರೆ, ಹಾಗಾಗಿ ದುಂದು ವೆಚ್ಚ ಆಗುವುದು ತಪ್ಪಿದೆ ಎಂದು ತಿಳಿಸಿದರು..
ಅದಕ್ಕೆ ಪಟ್ಟಣಸರ್ ರವರು ಅದು ಕೂಡ ಒಂದು ರೀತಿಯಲ್ಲಿ ಸರಿ ಎಂದು ತಿಳಿಸಿದರು..

ವಚನ ಮಂಗಳ
ಅಂಜೆಲೀನಾ ಗ್ರೆಗರಿ ಅವರು
ಬಸವ ಬಾಳಿನ ಬೀಜ ಕ್ರಾಂತಿ ರವಿತೇಜ ಎನ್ನುವ ಡಾ.ಶಶಿಕಾಂತ್ ಪಟ್ಟಣ ಅವರು ರಚಿಸಿದ ಕವನವನ್ನು ಹಾಡಿದರು..
ವಿದ್ಯಾ ಮಗದುಮ್
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರದು ಎನ್ನುವ ಅಲ್ಲಮಪ್ರಭು ದೇವರ ವಚನವನ್ನು ಸುಶ್ರಾವ್ಯವಾಗಿ ಹಾಡಿದರು..

ಅಂತಿಮವಾಗಿ ಶುಕ್ರವಾರ 14 ನೇ ತಾರೀಖು ಬಸವ ಜಯಂತಿ ಇರುವುದರಿಂದ ಆ ದಿನವೂ ಗೂಗಲ್ ಮೀಟ್ ಇರುತ್ತದೆ ಎಂದು ತಿಳಿಸಿ,ಸರ್ವರೆಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು..

ವರದಿ –
ಗೀತಾ ಜಿ ಎಸ್
ಹರಮಘಟ್ಟ ಶಿವಮೊಗ್ಗ

Don`t copy text!