e-ಸುದ್ದಿ, ಮಸ್ಕಿ
ಕರೊನಾ ಹಾವಳಿಯನ್ನು ತಡೆಗಟ್ಟಲು ಸರ್ಕಾರ ಸೋಮವಾರದಿಂದ ಲಾಕ್‍ಡೌನ್ ಜಾರಿ ಮಾಡಿದ್ದರಿಂದ ಪಟ್ಟಣದ ಪ್ರಮುಖ ರಸ್ತೆಗಳನ್ನು ಬ್ಯಾರಿಕೆಡ್ ಹಾಕಿ ಬಂದ್ ಮಾಡಿ ಜನ ಸಂದಣೆಯನ್ನು ಕಡಿಮೆ ಮಾಡಲು ತಾಲೂಕು ಆಡಳಿತ ಮುಂದಾಗಿದೆ.
ಬೆಳಿಗ್ಗೆ ತಹಶಿಲ್ದಾರ ಬಲರಾಮ ಕಟ್ಟಿಮನಿ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‍ಐ ಸಿದ್ದರಾಮ ಬಿದರಾಣಿ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ನೇತೃತ್ವದಲ್ಲಿ ಪುರಸಭೆ ಹಾಗೂ ಪೆÇಲೀಸ್ ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಗ್ರಾಮದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ವಾಹನಗಳು ತಿರುಗಾಡದಂತೆ ಬೀಗಿ ಕ್ರಮ ಕೈಗೊಂಡರು.
ಲಾಕ್ ಡೌನ್ ಇದ್ದರು ಸಹ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ನಡೆಸುತ್ತಿದ್ದ ಕೆಲವು ಅಂಗಡಿಕಾರರ ಮೇಲೆ ಪ್ರಕರಣ ದಾಖಲು ಮಾಡಲಾಯಿತು. ನಿಯಮ ಉಲ್ಲಂಘಿಸಿ ರಸ್ತೆಗೆ ಬಂದ್ ಬೈಕ್‍ಗಳನ್ನು ಪೆÇಲೀಸರು ಜಪ್ತಿ ಮಾಡಿದರು. ಮಾಸ್ಕ್ ಹಾಕದವರಿಗೆ ದಂಡ ಹಾಕಲಾಯಿತು.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಲಾಕ್ ಡೌನ್‍ನ್ನು ಕಠಿಣವಾಗಿ ಜಾರಿಗೆ ತರಲಾಗುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಹಶಿಲ್ದಾರ ಬಲರಾಮ ಕಟ್ಟಮಿನಿ, ಸಿಪಿಐ ದೀಪಕ್ ಬೂಸರೆಡ್ಡಿ ಮನವಿ ಮಾಡಿದ್ದಾರೆ.
—————————–
ಲಸಿಕೆ ಪಡೆಯಲು ನೂಕು ನುಗ್ಗಲು
ಮಸ್ಕಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋ ವ್ಯಾಕ್ಸಿನ್ ಹಾಗೂ ಕೋ ಶೀಲ್ಡ್ ಲಸಿಕೆ ಪಡೆಯಲು ನೂಕು ನುಗ್ಗಲು ಉಂಟಾದ ಘಟನೆ ಸೋಮವಾರ ನಡೆಯಿತು.
ಬೆಳಿಗ್ಗೆ ಆಸ್ಪತ್ರೆ ಮುಂದೆ ಸೇರಿದ್ದ ನೂರಾರು ಜನರು ಕರೊನಾ ನಿಯಮ ಗಾಳಿಗೆ ತೂರಿ ಲಸಿಕೆ ಪಡೆಯಲು ಒಬ್ಬರ ಮೇಲೆ ಒಬ್ಬರು ಬಿದ್ದದ್ದ ದೃಶ್ಯ ಕಂಡು ಬಂತು.
ಆಸ್ಪತ್ರೆ ಸಿಬ್ಬಂದಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಸುದ್ದಿ ತಿಳಿದು ಆಸ್ಪತ್ರೆಗೆ ಅಗಮಿಸಿದ ತಹಶಿಲ್ದಾರ ಬಲರಾಮ ಕಟ್ಟಿಮನಿ, ಸಿಪಿಐ ದೀಪಕ್ ಬೂಸರೆಡ್ಡಿ ಜನರನ್ನು ಚದುರಿಸಿ ಅಂತರದಲ್ಲಿ ನಿಲ್ಲಿಸಿದರು. ನಂತರ ಲಸಿಕೆ ಹಾಕಲಾಯಿತು.
——————-
6 ಜನರಿಗೆ ಕರೊನಾ- ಒಂದು ಸಾವು
ಸೋಮವಾರ ಪಟ್ಟಣದಲ್ಲಿ ಆರು ಜನಕ್ಕೆ ಕೊರೊನಾ ಸೋಂಕು ಕಾಣಸಿÂಕೊಂಡಿದೆ ಎಂದು ವೈದ್ಯಾಧಿಕಾರಿ ಡಾ. ಮೌನೇಶ ತಿಳಿಸಿದ್ದಾರೆ. ಸೋಂಕಿತರ ಮನೆಯ ಸುತ್ತಮುತ್ತ ಪುರಸಭೆಯಿಂದ ಸಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಕರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಒರ್ವ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.
——————-