ಸಿಂಗಾರಗೊಂಡ ಶಾಸಕರ ಸರ್ಕಾರಿ ಕಚೇರಿ

ಸಿಂಗಾರಗೊಂಡ ಶಾಸಕರ ಸರ್ಕಾರಿ ಕಚೇರಿ-ಇಂದು ಸಾಂಕೇತಿಕ ಚಾಲನೆ

ನೂತನ ಶಾಸಕರ ಪ್ರಮಾಣ ವಚನ ಮಹೂರ್ತಕ್ಕೆ ಕೊವಿಡ್ ಅಡ್ಡಿ..!

e-ಸುದ್ದಿ, ಮಸ್ಕಿ

ಮಸ್ಕಿ :   ನೂತನ ಶಾಸಕರಾಗಿ ಆಯ್ಕೆಯಾಗಿರುವ ಆರ್. ಬಸನಗೌಡ ತುರ್ವಿಹಾಳ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಸಭಾಧ್ಯಕ್ಷರು ಮಹೂರ್ತ ಗೊತ್ತು ಮಾಡದ ಕಾರಣ ಶಾಸಕರಿಗೆ ಸಿಗಬೇಕಾದ ಸಂವಿಧಾನ ಬದ್ಧ ಅಧಿಕಾರ ಶಾಸಕರಾಗಿ 12 ದಿನಗಳ ಕಳೆದರೂ ಇಲ್ಲದಂತಾಗಿದೆ.

ಸತತ ಮೂರು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಪರಭಾವಗೊಳಿಸಿ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಆರ್. ಬಸನಗೌಡ ತುರ್ವಿಹಾಳ ಅವರ ಪ್ರಮಾಣವಚನಕ್ಕೆ ಮೂಹೂರ್ತ ಗೊತ್ತುಪಡಿಸುವಂತೆ ಕಾಂಗ್ರೆಸ್ ವರಿಷ್ಠರು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಆದರೆ. ಕೊವಿಡ್ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಹಾಗೂ ಉಪಾಧ್ಯಕ್ಷರು ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಲು ನಿರಾಕರಿಸುತ್ತಿದ್ದರಿಂದ ಪ್ರಮಾಣ ವಚನ ಬೋಧನೆ ವಿಳಂಭವಾಗಲು ಕಾರಣವಾಗಿದೆ.

ಶಾಸಕರಾಗಿ ಆಯ್ಕೆಯಾದವರಿಗೆ ಸಂವಿಧಾನ ಬದ್ಧ ಅಧಿಕಾರ ದೊರೆಯದ ಕಾರಣ ಶಾಸಕರ ಕೈ ಕಟ್ಟಿ ಹಾಕಿದಂತಾಗಿದೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸದ ಕಾರಣ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಅಡ್ಡಿಯಾಗಿದೆ

—————————————————————————

ಸಿಂಗಾರಗೊಂಡ ಶಾಸಕರ ಕಚೇರಿ

ಶಾಸಕರ ಅಧಿಕೃತ ಸರ್ಕಾರಿ ಕಚೇರಿಯನ್ನು‌ ಬಸವ ಜಯಂತಿ ದಿನವಾದ 14 ರಿಂದ ಮಾಡಲು ಸಿದ್ದತೆ ನಡೆದಿದೆ.
ಪಟ್ಟಣದಲ್ಲಿ ಹಿಂದೆ  ಇದ್ದ ಪುರಸಭೆಗೆ ಸೇರಿದ ಕಟ್ಟಡವೇ  (ಹಿಂದಿನ ಶಾಸಕರ ಭವನ)  ನೂತನ ಶಾಸಕರ ಭವನವಾಗಲಿದೆ.
ಕಚೇರಿಗೆ ಸುಣ್ಣ ಬಣ್ಣ ಬಡಿದು ಸಿಂಗಾರ ಮಾಡಲಾಗಿದೆ‌‌‌. ಶಾಸಕರ ಭವನದ ಒಳಗೆ ಹೊಸ ವಿದ್ಯುತ್ ಉಪ ಕರಣಗಳು, ಹವಾ ನಿಯಂತ್ರಿತ ವ್ಯಯಕ್ತಿಕ ಕೊಠಡಿ ಸಿದ್ಧವಾಗಿದೆ. ಕಚೇರಿಗೆ ಹೊಸದಾಗಿ ಪೀಠೋಪಕರಣಗಳು ಖರೀದಿಸಲಾಗಿದೆ.
ಕೊರೊನಾ ಲಾಕ್ ಡೌನ್ ಇದ್ದ ಕಾರಣ ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿ ಸರಳವಾಗಿ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಶಾಸಕರ ಅಪ್ತಮೂಲಗಳು ತಿಳಿಸಿವೆ.

 

Don`t copy text!