21ನೇ ಶತಮಾನಕ್ಕೆ 12ನೇ ಶತಮಾನ ಮಾದರಿ!!

21ನೇ ಶತಮಾನಕ್ಕೆ 12ನೇ ಶತಮಾನ ಮಾದರಿ!!

ಮಾನವನು ಹಕ್ಕಿಯ ಹಾಗೇ ಹಾರಾಡಲು ಕಲಿತ, ….ಮೀನಿನ ಹಾಗೆ ಈಜಲು ಸಹ ಕಲಿತನು. ಗಗನಕ್ಕೆ ಏಣಿ ಹಾಕಿದ. ದೊಡ್ಡ ಮಟ್ಟದ ಅವಿಷ್ಕಾರಗಳೂ ಮಾಡಿ ಸೃಷ್ಠಿಗೆ ಸವಾಲು ಹಾಕಿದ ಎನ್ನುವಷ್ಟು ಸಾಧಿಸಿದನು. ತಂತ್ರಜ್ಞಾನದ ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದಾನೆ.ಅದ್ಭುತವಾದ ಜಗತ್ತೇ ನನ್ನ ಕೈ ವಶ ಎಂದು ಬಿಗಿದ್ದಾನೆ.
ಇಷ್ಟೇಲ್ಲಾ ಮಾಡಿದ ಮನುಷ್ಯನ ಮನಸು ಮತ್ತು ಬುದ್ಧಿಯ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಆದ್ರೆ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವ ವಿಷಯ ಬಂದಾಗ ಎಲ್ಲರೂ ಹೇಗೆ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವವರು ಎಂಬುವದು ಗಮನಾರ್ಹವಾಗಿ ಕಾಡುವ ಪ್ರಶ್ನೆ!!!
ಮನಸೆಂಬ ಬಣ್ಣದ ಹಕ್ಕಿ ಹಾರಡುತ್ತಲೇ ಇರುತ್ತದೆ ಅದಕ್ಕೆ ಕುಳಿತುಕೊಳ್ಳಲು ಎಲ್ಲೂ ಮನಸ್ಸು ಬರುವುದಿಲ್ಲ. ಆದ್ರೆ ಎಲ್ಲೂ ಹಾರದೆ ಇರುವದು ಸಾಧ್ಯವೆ ಇಲ್ಲ. ಆಸರೆ ಅಂತ ಗೂಡು ಕಟ್ಟಿ ವಾಸ ಮಾಡಲು ಅನುಕೂಲವಾಗುವಂತೆ, ಧರ್ಮ ಹಾಗೂ ಅದರ ಜೊತೆಗೆ ಸಂಸ್ಕಾರ ಮುಖ್ಯ ಆಗುತ್ತದೆ. ಅಪ್ಪ ಬಸವಣ್ಣನವರ ವಚನ ನೋಡೋಣ….

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ,
ಶಿವ ಶಿವಾ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು,
ಕೂಡಲಸಂಗಮದೇವಾ
ಬಸವಣ್ಣನವರ ಈ ವಚನದಲ್ಲಿ ನಮಗೆ ಗೊತ್ತಾಗುತ್ತದೆ ಈ ಇಡೀ ಭೂ ಮಂಡಲ ಮನುಷ್ಯರು ವಾಸ ಮಾಡುವ ಕಾಡಿಗೆ ಹೋಲಿಸಿದರು. ಅಂಟಿಗ ಕಾಡ ಇದ್ದರೂ ಸಹ ಭಕ್ತಿಯ ಪಂಜರ ಇದ್ದರೆ ಮಾತ್ರ ಯಾವದೇ ದುಷ್ಟ ಶಕ್ತಿಗಳ ವಶ ಆಗಲು ಸಾಧ್ಯ ಇಲ್ಲ ಎಂದು ಹೇಳುತ್ತಾರೆ.

ಒಬ್ಬ ವ್ಯಕ್ತಿಯ ಮನಸು ಹಲವಾರು ರೀತಿಯ ಬದಲಾವಣೆ ಹೊಂದುತ್ತದೆ. ಒಮ್ಮೆ ಯೋಚಿಸಿ ನೋಡಿ…..
ಮನಸು ವಜ್ರದ ಹಾಗೇಕಠಿಣ ,ಹೂವಿನ ದಳ ದಷ್ಟು ಕೋಮಲ. ಒಮ್ಮೆ ಪಾರದರ್ಶಕ ಮತ್ತೋಮ್ಮೆ ನಿಗೂಢತೆ ,ಒಮ್ಮೆ ನೋವಿನ ಕಡಲು ಒಮೊಮ್ಮೆ ನಲಿವಿನ ಆಗರ. ಇದೆಲ್ಲಾ ಒಬ್ಬ ವ್ಯಕ್ತಿಯ ಅನೇಕ ರೀತಿಯ ಮನಸಿನ ಮುಖಗಳು. ಹೀಗಾಗಿ ಮನಸ್ಸುಗಳ ಅರಿಯುವದು ಹಾಗೂ ಅದನ್ನೂ ನಿಯಂತ್ರಣ ಇಡುವದು ಮತ್ತು ನೆಮ್ಮದಿಯ ಜೀವನ ನಡೆಸಲು ಕಷ್ಟಕರ!!
ಚೆನ್ನ ಬಸವಣ್ಣನವರ ವಚನ ನೋಡೋಣ….

ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು;
ವಸ್ತ್ರ ಮಾಸಿದಡೆ ಮಡಿವಾಳರಿಗಿಕ್ಕುವುದು;
ಮನದ ಮೈಲಿಗೆಯ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು
–ಚೆನ್ನ ಬಸವಣ್ಣನವರು

ಮನಸು ಕಸದ ಬುಟ್ಟಿ ಅಲ್ಲ ಎಂಬುದನ್ನು ಗಮನಿಸಬೇಕು. ಅದಕ್ಕೇ ದಿನ ದಿನವೂ ಸ್ವಚ್ಛ ಮಾಡಲೇಬೇಕು.
ಎನ್ನುವದು ಏಷ್ಟು ಅದ್ಭುತವಾದ ವಿಚಾರ. ತಲೆ ನೀರಿನಿಂದ ಸ್ನಾನ ಮಾಡುವುದರಿಂದ ಸ್ವಚ್ಚ ಆಗುತದೆ.ಅದೇ ರೀತಿಯಲ್ಲಿ
ಬಟ್ಟೆ ಮಾಸಿದರೆ ದೋಬಿಗೆ ಕೋಡಬೇಕು. ಅಲ್ಲದೆ ಮನಸ್ಸು ಮೈಲಿಗೆ ಆದಾಗ ಸಜ್ಜನರ ಸಂಗ ಹಾಗೂ ಅನುಭಾವಿಗಳ ಒಡನಾಟ ಇರಬೇಕು ಎಂಬುದು ಈ ವಚನ ಸಾದರ ಪಡಿಸುತ್ತದೆ.
ಸತ್ಯ ಸಂಗತಿ ಏನೆಂದರೆ, ಪ್ರತಿಯೊಂದು ಹಂತದಲ್ಲೂ ಮನಸು ಕೂಗಿಕೂಗಿ ಹೇಳಿದ್ರೂ ಬೇಡವಾದ ಬೇಕಾದ ಎಲ್ಲವೂ ಅಲ್ಲಿ ತುಂಬಿ ಕೊನೆಗೆ ಅದು ನಿಯಂತ್ರಣ ತಪ್ಪುತ್ತದೆ. ಹಾಗಾಗಿ ದಿನಾ ದಿನವೂ ಪರಮಾತ್ಮ ನೆನಹು ಹಾಗೂ ಶರಣರ ವಚನಗಳು ಹಾಗೂ ಶರಣರ ಸಂಗ ಸೇರುವದು ತುಂಬ ಮುಖ್ಯ.
ಕಾಮ,ಕ್ರೋಧ ,ಮೋಹ ವಿಷಯಗಳ ಆಗರ ಈ ಮನಸು. ಬೇಡ ಬೇಡ ಎನ್ನುವ ವಿಷ್ಯಕ್ಕೆ ಮತ್ತೇ ಮತ್ತೇ ಕುತೂಹಲದಿಂದ ಸಾಗುತ್ತದೆ .ಮನಸನ್ನು ಅರಿತು ಅದರೊಂದಿಗೆ ಹೋರಾಡಿ ಕೊನೆಗೆ ಬುದ್ಧಿ ಹಾಗೂ ಭಕ್ತಿಯ ನೆಲಗಟ್ಟು ಮದುಕೊಳ್ಳುವದೇ ನಿಜ
ಜೀವನದ ಸಾಹಸದ ಕತೆ!!!

ಶರಣೆ ಅಕ್ಕ ಮಹಾದೇವಿ ವಚನ ನೋಡೋಣ

ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ.
ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ,
ಆನು ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.

ಅನುಭವ ಮಂಟಪದಲ್ಲಿ ಸರ್ವ ಶರಣರ ಕಂಡು ಏಷ್ಟು ಮಾರ್ಮಿಕವಾಗಿ ಹೇಳಿರುವರು.

✍️ *ಕವಿತಾ ಮಳಗಿ, ಕಲಬುರ್ಗಿ

Don`t copy text!