ವಿಶ್ವ ಮಾನವ

ವಿಶ್ವ ಮಾನವ

ಇಂಗಳೇಶ್ವರದಿಂದ ಇಳಿದು
ಬಂದ ಬೆಳಕು ನೀನು ..
ಬಾಗೇವಾಡಿಯಿಂದ ಬೆಳೆದು
ಬಂದ ಬೆಳೆಯು ನೀನು.

ಕಲ್ಯಾಣ ಕ್ರಾಂತಿಯ ವೀರ
ಕಹಳೆ ನೀನು..
ಕೂಡಲ ಸಂಗನ ಕೂಡಿದ
ಜ್ಯೋತಿ ನೀನು.

ಕನ್ನಡ ಸಾಹಿತ್ಯ ಯುಗ
ಪ್ರವರ್ತಕ ನೀನು..
ವಚನ ಸಾಹಿತ್ಯ ನುಡಿದ
ನುಡಿಗಾರ ನೀನು.

ಸಕಲ ಶರಣರ ಜೀವಾತ್ಮದ
ಲೇಸು ನೀನು..
ಅನುಭವ ಮಂಟಪದ ಮೂಲ
ದೊರೆಯೇ ನೀನು.

ದೀನ ದಲಿತರಿಗೆ ಧೈರ್ಯ
ತುಂಬಿದವ ನೀನು..
ಜಾತಿ ಧರ್ಮದ ಮೀರಿದ
ಮೇರು ನೀನು.

ಹೆಣ್ಣು ಕೀಳರಿಮೆಯ ತೊಡೆದ
ಅಣ್ಣ ನೀನು..
ಹೆಣ್ಣು ಸಮಾಜದ ಕಣ್ಣೆಂದ
ಮಹಾ ಪುರುಷ ನೀನು.

ಆಚಾರದ ಅರಿವನ್ನು ಅರುಹಿದ
ನಮ್ಮರಿವು ನೀನು..
ಧರೆಗೆ ದಯದ ಮೂಲವ
ಸಾರಿದ ಗುರುವೆ ನೀನು.

ಶುದ್ಧ ಚಾರಿತ್ರ್ಯದ ಮಂತ್ರವ
ನೊರೆದ ಸಪ್ತ ಏಕ ನೀನು..
ಸಮಾನತೆಯ ಸಮರ ಸಾರಿದ
ಏಳ್ಗೆಯ ಹರಿಕಾರ ನೀನು.

ಮಾನವೀಯತೆ ಮೆರೆದ
ವಿಶ್ವಮಾನವ ನೀನು..
ಕರುಣಾ ಮೂರ್ತಿಯೆ ಈ
ಜಗದ ಹೊಂಬೆಳಕು ನೀನು.

ಸರ್ವರ ಉದಯಕೆ ನಾಂದಿ
ಹಾಡಿದ ಮಾದರಿ ನೀನು..
‘ವಿಶ್ವ ಶಾಂತಿ ‘ ಮಂತ್ರಕೆ
ವಿಶ್ವಗುರು ನೀನು.

ಶಾರದಾ ಅಂಬೇಸಂಗೆ
ಮುಂಬಯಿ

Don`t copy text!