ಬಸವಣ್ಣನವರನ್ನು ಮುಟ್ಟಬೇಕಾದರೆ…..

ಅಣ್ಣ ಬಸವಣ್ಣನ ಜಯಂತಿಗೆ ಇದಕ್ಕಿಂತ ಉತ್ತಮ ಸಂದೇಶ ಮತ್ತೊಂದಿರಲಾರದು….

ಬಸವಣ್ಣನವರನ್ನು ಮುಟ್ಟಬೇಕಾದರೆ…

ದಿನಾಲು ಬೆಳಿಗ್ಗೆ ಎಡಬದಿಯಲ್ಲಿ ಎದ್ದೇಳಬೇಕು. ತಾಕತ್ತಿದೆಯಾ?
ಬೆಕ್ಕನ್ನು ದಾಟಿ ಬರಬೇಕು. ತಾಕತ್ತಿದೆಯಾ?

ಕಾಗೆಯನ್ನು ಹೆದರಿಸಿ ಬರಬೇಕು. ತಾಕತ್ತಿದೆಯಾ? Atleast
ಬನಿಯನ್ ಉಲ್ಟಾ ಉಟ್ಟುಕೊಳ್ಳುವ ದೈರ್ಯವಾದರೂ ಇದೆಯಾ.?

ಹೊಸ್ತಿಲ ಮೇಲೆ ಕೂಡುವ ತಾಕತ್ತಿದೆಯಾ.?

ನಿನಗೇ ಹುಟ್ಟಿದ ಮಗುವಿನ ಮುಖವ ಯಾರನ್ನೂ ಕೇಳದೆ ನೋಡುವ ಗುಂಡಿಗೆ ಇದೆಯಾ.?

ಎಡಗಾಲಿಟ್ಟು ಒಳಗೆ ಹೋಗುವ ಧಿಮ್ ಇದೆಯಾ.?

ಜಾತ್ರೆಯಲ್ಲಿ ತೆರಿಗೆ ಉತ್ತುತ್ತಿ, ಬಾಳೆಹಣ್ಣು ಎಸೆಯದೆ ಭಕ್ತಿಯಿಂದ ನಿಲ್ಲುವ ದೃಢ ಮನಸ್ಸು ಇದೆಯಾ.?

ಪೂಜಾರೀ ತಟ್ಟೆಗೆ ಕಾಸು ಹಾಕದೇ ಮುಂದೆ ಹೋಗುವ ದೈರ್ಯ ಇದೆಯಾ.?

ದಕ್ಷಿಣ ದಿಕ್ಕಿಗೆ ಕಾಲು ಹಾಕಿ ಮಲಗುವ ದೈರ್ಯ ಇದೆಯಾ.?

ಘಾತುವಾರದಂದು ಕ್ಷೌರ ಮಾಡಿಸಿಕೊಳ್ಳುವ ಗುಂಡಿಗೆ ಇದೆಯಾ.?

ಖಾಲಿ ಕೊಡ ವಾಪಸ್ ಒಯ್ಯುವ ತಾಕತ್ತಿದೆಯಾ?

ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಗಟ್ಟಿ ದೈರ್ಯ ಇದೆಯಾ.?

ರಾತ್ರಿ ಹೊತ್ತು ಕಸ ಗುಡಿಸುವ ಧಿಮ್ ಇದೆಯಾ.?

ಉಪವಾಸ ಅಂತೇಳಿ ಮೂರು ಹೊತ್ತು ಹಣ್ಣು ಹಂಪಲ ನಾಷ್ಟಾ ಇತ್ಯಾದಿ ತೆಗೆದುಕೊಳ್ಳದೆ ಇರುವ ಗುಂಡಿಗೆ ಇದೆಯಾ.?

ಸಮಸಂಖ್ಯೆಯ ದುಡ್ಡನ್ನು ಮದುವೆ ಆಯೇರಿ (ಮುಯ್ಯಿ) ಪಟ್ಟಿಯಲ್ಲಿ ಬರೆಸುವ ತಾಕತ್ತಿದೆಯಾ?

ಸರ್ವ ಸಮಾನತೆಯಿಂದ ಬಾಳುವೆ ಮಾಡುವವರನ್ನು ಒಪ್ಪಿಕೊಳ್ಳುವ ದೈರ್ಯ ಇದೆಯಾ?

ಕಲಬುರಗಿ ಶರಣನ ಗದ್ದುಗೆಗೆ ಬರುವ ಮುಸಲ್ಮಾರನ್ನು ಒಪ್ಪಿಕೊಳ್ಳುವ ಸಹಿಷ್ಣುತೆ ಇದೆಯಾ.?

ಬಂದೇ ನವಾಜ್ ದರ್ಗಾಕ್ಕೆ ಹೋಗುವ ಮುಸ್ಲಿಮೆತರರನ್ನು ಒಪ್ಪಿಕೊಳ್ಳುವ ಸಹಿಷ್ಣುತೆ ಇದೆಯಾ.?

ದಿನದ ಮೊದಲ ಗಿರಾಕಿಗೆ ಉದ್ರಿ ಕೊಡುವ ತಾಕತ್ತಿದೆಯಾ.?
ಸಾಯಂಕಾಲ ಬೇರೆಯವರಿಗೆ ಉಪ್ಪು ಕೊಡುವ ತಾಕತ್ತಿದೆಯಾ.?

ಎಡಗೈಯಿಂದ ಊಟ ನೀಡುವ ತಾಕತ್ತಿದೆಯಾ.?
ಒಂದು ಬಾರಿ ಮಾತ್ರ ಅನ್ನ ನೀಡುವ ತಾಕತ್ತಿದೆಯಾ.?

ರಾಹುಕಾಲ ನೋಡದೇ ಮದುವೆ ನಿಶ್ಚಯ ಮಾಡುವ ತಾಕತ್ತಿದೆಯಾ.?
ಎಡಗಾಲಿಟ್ಟು ಮಧುಮಗಳನ್ನು ಒಳಗೆ ಕರೆಯುವ ತಾಕತ್ತಿದೆಯಾ.?

ಮಂಗಳವಾರ ಗಂಡನ ಮನೆಗೆ ಹೋಗುವ ತಾಕತ್ತಿದೆಯಾ.?
ಶುಕ್ರವಾರ ಸೊಸೆಯನ್ನು ತವರುಮನೆಗೆ ಕಳಿಸಿಕೊಡುವ ತಾಕತ್ತಿದೆಯಾ.?

ಮಕ್ಕಳಿಗೆ ಎಡಗೈಯಿಂದ ಹೊಡೆಯುವ ತಾಕತ್ತಿದೆಯಾ.?
ದೇವರಿಗೆ ಎಡಗೈಯಿಂದ ಹೂ ಏರಿಸುವ ತಾಕತ್ತಿದೆಯಾ.?

ಎಡಬಾಗಕ್ಕೆ ಮುಖ ಮಾಡಿ ಸೀನುವ ತಾಕತ್ತಿದೆಯಾ.?
ಕೊಡುವಾಗ ತೆಗೆದುಕೊಳ್ಳುವಾಗ ಎಡಗೈ ಮುಂದೆ ಮಾಡುವ ತಾಕತ್ತಿದೆಯಾ.?

ದೆವ್ವಕ್ಕೆ ಅಂಜದೇ ಸಾಯಂಕಾಲ ಮಕ್ಕಳನ್ನು ಹೊರಗಡೆ ಕಳುಹಿಸಿಕೊಡುವ ತಾಕತ್ತಿದೆಯಾ.?
“ಮಲಗದಿದ್ದರೇ ದೆವ್ವ ಬರುತ್ತೆ ನೋಡು” ಅಂಥ ಮಗುವಿಗೆ ಹೇಳದಿರುವ ತಾಕತ್ತಿದೆಯಾ.?

ಪಶ್ಚಿಮ ದಿಕ್ಕಿಗೆ ಮುಖಮಾಡಿ ಮನೆಕಟ್ಟುವ ತಾಕತ್ತಿದೆಯಾ.?
ಮನೆಗೆ ಕಟ್ಟಿದ ಬೆದರುಗೊಂಬೆಯನ್ನು ತೆಗೆದು ಬಿಸಾಕುವ ತಾಕತ್ತಿದೆಯಾ.?

ಗ್ರಹಣ ಮುಂಚೆ ಹುಲ್ಲುಕಡ್ಡಿ ಹುಡುಕಿ ಡಬ್ಬಿಯಲ್ಲಿ ಹಾಕದೇ ಇರುವ
ತಾಕತ್ತಿದೆಯಾ.?
ಗ್ರಹಣ ಹಿಡಿದಾಗ ಅಡುಗೆ ಮಾಡಿ ಉಣ್ಣುವ ತಾಕತ್ತಿದೆಯಾ.?

ಗ್ರಹಣ ಹಿಡಿದಾಗ ಮನೆಹೊರಗೆ ಬಂದು ಕೂಡುವ ತಾಕತ್ತಿದೆಯಾ.?

ಗ್ರಹಣ ಮುಗಿದ ಮೇಲೆ ಸ್ನಾನ ಮಾಡದೇ ಇರುವ ತಾಕತ್ತಿದೆಯಾ.?

ಕನಿಷ್ಟ ಮೇಲಿನವುಗಳನ್ನು ಎದುರಿಸಿದವರಿಗೆ ಮಾತ್ರ ಬಸವಣ್ಣನವರ ಬಗ್ಗೆ ಅಲ್ಪಸ್ವಲ್ಪ ತಿಳಿಯಲು ಸಾಧ್ಯವಾಗುತ್ತೆ. ಕನಿಷ್ಟ ಇಷ್ಟು ತಿಳಿದಾಗ ಮಾತ್ರ ಬಸವತತ್ವ ಎಂಬ ವಿಶ್ವವಿದ್ಯಾಲಯಕ್ಕೆ LKG ಗೆ ಪ್ರವೇಶಾತಿ ದೊರೆಯುತ್ತೆ.

~ಶರಣು ಶಿಣ್ಣೂರ್.
Sharanu Sinnur

Don`t copy text!