ಆರೈಕೆ ಕೇಂದ್ರಕ್ಕೆ ಸೋಂಕಿತರ ಸ್ಥಳಾಂತರ
ಮಸ್ಕಿ ಮೂರು ದಿನ ಸಂಪೂರ್ಣ ಲಾಕ್ ಡೌನ್-ಕಟ್ಟಿಮನಿ
e-ಸುದ್ದಿ, ಮಸ್ಕಿ
ಮಸ್ಕಿ: ಜಿಲ್ಲಾಡಳಿತದ ಆದೇಶದಂತೆ ಕರೊನಾ ನಿಯಂತ್ರಣದ ಸಲುವಾಗಿ ಭಾನುವಾರದಿಂದ ಮೂರು ದಿನ ಮಸ್ಕಿಯನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚತೊಡಗಿವೆ, ಮಸ್ಕಿ ತಾಲ್ಲೂಕಿನಲ್ಲಿಯೂ ಪ್ರಕರಣ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಈ ಬೀಗಿ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆ, ಔಷಧ ಅಂಗಡಿ ಹಾಗೂ ಪೆಟ್ರೂಲ್ ಬಂಕ್ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡುವಂತೆ ಈಗಾಗಲೇ ಪುರಸಭೆಯಿಂದ ಹಾಗೂ ಆಯಾ ಗ್ರಾಮ ಪಂಚಾಯಿತಿಗಳಿಂದ ಸಾರ್ವಜನಿಕರಿಗೆ ಮಾಹಿತಿ ಮಾಡಲಾಗಿದೆ ಎಂದರು.
ಬುಧವಾರ ಎಂದಿನಂತೆ ಬೆಳಿಗ್ಗೆ 6 ರಿಂದ 10 ರವರೆಗೆ ದಿನ ನಿತ್ಯದ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆರೈಕೆ ತೆರಳುವಂತೆ ಮನವೋಲಿಕೆ ಯತ್ನ : ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಆರಂಭಿಸಲಾಗಿರುವ ಕೊವಿಡ್ ಆರೈಕೆ ಕೇಂದ್ರಕ್ಕೆ ಹೋಗುವಂತೆ ತಾಲ್ಲೂಕಿನಲ್ಲಿ ಸೋಂಕು ಹೊಂದಿರುವ ವ್ಯಕ್ತಿಗಳ ಮನವೋಲಿಸಲಾಗುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಢ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ವೈದ್ಯಾಧಿಕಾರಿ ಡಾ. ಮೌನೇಶ, ಡಾ. ಮಲ್ಲಿಕಾರ್ಜುನ ಇತ್ಲಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದರು.
ಶನಿವಾರದಿಂದ ಆರೈಕೆ ಕೇಂದ್ರ ಆರಂಭವಾಗಿದ್ದು 15 ಜನ ಸೋಂಕಿತರನ್ನು ಸೇರಿಸಲಾಗಿದೆ ಎಂದರು. ಅವರಿಗೆ ಗುಣಮಟ್ಟದ ಊಟ, ಹಣ್ಣುಗಳು ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಪೂರೈಸಲಾವುದು ಹಾಗೂ ಸೂಕ್ತ ಚಿಕಿತ್ಸೆ ಕೂಡಾ ಕೊಡಲಾಗುವುದು ಎಂದರು.
7 ಜನರಿಗೆ ಕೊರೊನಾ ಸೋಂಕು; ಶನಿವಾರ ಕೂಡಾ ಪಟ್ಟಣದಲ್ಲಿ 7 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದೆ ಎಂದು ವೈದ್ಯಾಧಿಕಾರಿ ಡಾ. ಮೌನೇಶ ತಿಳಿಸಿದ್ದಾರೆ. ಸೋಂಕಿತರಿಗೆ ಕೊವಿಡ್ ಆರೈಕೆ ಕೇಂದ್ರಕ್ಕೆ ಕಳಿಸಲಾಗುವುದು ಎಂದು ತಿಳಿಸಿದರು.