ಮಸ್ಕಿಯಲ್ಲಿ ಮಳೆ- ರಸ್ತೆಗಳ ಮೇಲೆ ಹರಿದ ನೀರು
e-ಸುದ್ದಿ, ಮಸ್ಕಿ
ಮಸ್ಕಿ: ಭಾರಿ ಮಳೆ ಮತ್ತು ಗಾಳಿಯಿಂದಾಗಿ ರಸ್ತೆಗಳು ತುಂಬಿ ಹರಿದ ಘಟನೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸುಮಾರು 1 ಗಂಟೆಗಳ ಮಳೆ ಸುರಿಯಿತು. ಮಳೆಯಿಂದಾಗಿ ಮುಖ್ಯ ಬಜಾರ, ಅಂಚೆಕಚೇರಿ ರಸ್ತೆ, ವಾಲ್ಮೀಕಿ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳು ತುಂಬಿ ಹರಿದಿವೆ. ಕಟ್ಟೆ ದುರ್ಗಮ್ಮ ದೇವಸ್ಥಾನದ ಮುಂಭಾಗ ಚರಂಡಿ ಬಂದ್ ಆಗಿದ್ದರಿಂದ ಮಳೆ ನೀರಿನ ಜೊತೆಗೆ ಚರಂಡಿ ನೀರು ತುಂಬಿ ಹರಿದ ಪರಿಣಾಮ ಅಲ್ಲಿಯ ನಿವಾಸಿಗಳು ಪರದಾಡುವಂತಾಯಿತು.
ಸ್ಥಳೀಯ ನಿವಾಸಿಗಳು ಚರಂಡಿ ಸ್ವಚ್ಛ ಮಾಡಿದ ನೀರು ಹೊರ ಹಾಕಲು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ವಾಲ್ಮೀಕಿ ನಗರ, ಸೋಮನಾಥ ನಗರ, ರಾಮಕೃಷ್ಣ ಕಾಲೂನಿ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ಸಂಗ್ರಹವಾಗಿದ್ದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆಯಿತು. ಹೆದ್ದಾರಿ 150 (ಎ) ಮೇಲೆ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರು ಪರದಾಡುವಂತಾಯಿತು.
ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಚರಂಡಿಯಲ್ಲಿನ ಕಸದ ರಾಶಿ ರಸ್ತೆ ಮೇಲೆ ಬಿದ್ದಿದ್ದು ಪುರಸಭೆ ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಕಸದ ರಾಶಿ ತೆರವು ಮಾಡಿ ರಸ್ತೆ ಸ್ವಚ್ಛ ಮಾಡಿದರು. ಮಸ್ಕಿ ಪಟ್ಟಣದ ಕಟ್ಟೆ ದುರ್ಗಮ್ಮ ದೇವಸ್ಥಾನದ ಮುಂಭಾಗದ ರಸ್ತೆ ಜಲಾವೃತಗೊಂಡಿತ್ತು.