ನಿರೀಕ್ಷೆ 

ನಿರೀಕ್ಷೆ

ಭಾಸವಾಗುತಿದೆ
ಸಮಯ ನಿಂತಂತೆ
ದಿನಗಳು ಅನಿಸುತ್ತಿವೆ
ಯುಗಗಳಂತೆ
ಈ ತಾಯಿಗೆ
ಕರುಳಿನ ಕುಡಿಗಳದೇ ಚಿಂತೆ
ಮಕ್ಕಳೇ ತಾಯಿಗೆ
ಜಗತ್ತಂತೆ..
ನೀನೇಕೆ ನಿಧಾನಿಸುತಿರುವೆ
ಓ ನೇಸರನೇ
ಚಂದ್ರನಿಗೂ ಹೇಳಬಾರದೇ
ನೀನೊಮ್ಮೆ?
ಕೈ ತುತ್ತಿಗಾಗಿ ಕಾದಿರುವುದು
ನನ್ನ ಕಂದ
ಪ್ರತಿ ಕ್ಷಣವೂ ಕಳೆಯುತಿರುವೆ
ಯಾತನೆಯಿಂದ…
ಅರ್ಥವಾಗುತ್ತಿಲ್ಲವೇ
ತಾಯಿಯ ವೇದನೆ
ಹಾಗೇಕೆ ಕುಳಿತಿರುವೆ ನೀ ಸುಮ್ಮನೆ?
ಬೇಗ ಮುಗಿದು ಹೋಗಲಿ
ಈ ಕ್ಷಣಗಳು
ಬಿಟ್ಟಿರಲಾರೆವು ನಾವು
ತಾಯಿ ಮಕ್ಕಳು…….

 

ಡಾ ನಂದಾ ,ಬೆಂಗಳೂರು

Don`t copy text!