ಕಳೆದು ಹೋಯಿತು ಬಾಲ್ಯ

ಕಳೆದು ಹೋಯಿತು ಬಾಲ್ಯ

ಗೋಲಿ ಗಜುಗ ಕಬಡ್ಡಿ ಆಡಿದ ದಿನಗಳು
ನೆಲದ ಮೇಲೆ ಕೂತು ಓದಿ ಬರೆದ ನೆನಪುಗಳು

ತಿದ್ದಿ ತೀಡಿದರು ಗುರುಹಿರಿಯರಂದು
ಪಾಟಿಪುಸ್ತಕಚೀಲ ಜತೆ ಅಂದು

ನೆಂಟರಿಷ್ಟರು ಬರುವ ಸುದ್ದಿ ತಿಳಿದರೆ ಸಾಕು
ಎದುರು ನೋಡಲು ಮನಕೆ ಬಹು ತವಕು

ಸ್ನೇಹಿತರ ಭರವಸೆ ಮಾತುಗಳು
ತಿರುಗಿ ಬರಲಾಗದ ಆ ಕ್ಷಣಗಳು

ಮನವು ಇಂದು ಒಂಟಿಯಾಗಿದೆ
ಬಾಲ್ಯದ ನೆನಪ ಹೊರಹಾಕಿದೆ

ಶ್ರೀಕಾಂತ ಅಮಾತಿ
ಪಾರಿಜಾತ ಕುಲಗೋಡ
ತಾಲೂಕ ಮೂಡಲಗಿ
ಜಿಲ್ಲಾ ಬೆಳಗಾವಿ
ಮೊಬೈಲ್ 9833791245

Don`t copy text!