e-ಸುದ್ದಿ, ಮಸ್ಕಿ
ಜಿಲ್ಲೆಯಲ್ಲಿ ಕರೋನಾ ಹೆಮ್ಮಾರಿ ಕಟ್ಟಿ ಹಾಕಲು ಜಿಲ್ಲಾಡಳಿತ ಜಿಲ್ಲೆಯಲ್ಲಿ ಮೂರು ದಿನ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಯಿಂದ ಅಗತ್ಯ ವಸ್ತು ಗಳ ಖರೀದಿ ಹೊರತು ಪಡಿಸಿ ಬೇರೆ ಯಾವದೆ ರೀತಿಯ ವ್ಯಾಪಾರ, ವಹಿವಾಟು ನಡೆಯದೆ ಮಸ್ಕಿ ಪಟ್ಟಣ ಸಂಪೂರ್ಣ ಸ್ಥಬ್ಧವಾಗಿದ್ದ ಕಾರಣ ಮೊದಲೆರೆಡು ದಿನಗಳ ಲಾಕ್ ಡೌನ್ ಸಕ್ಸಸ್ ಆಯಿತು.
ಪಿಎಸ್‍ಐ ಸಿದ್ರಾಮಪ್ಪ, ಪುರಸಭೆ ಅಧಿಕಾರಿಗಳು ಬೆಳಗ್ಗೆ ಯಿಂದ ಪಟ್ಟಣದ ಮುಖ್ಯ ಮಾರುಕಟ್ಟೆ, ವೃತ್ತಗಳ ಬಳಿ ಸಂಚರಿಸಿ ಜನರ ಓಡಾಟಕ್ಕೆ ಬ್ರೇಕ್ ಹಾಕಿದರು. ಬೈಕ್ ಸವಾರರು ರಸ್ತೆಗಳ ಬಳಿ ಸುಳಿಯಲಿಲ್ಲ ಅಗತ್ಯ ವಸ್ತುಗಳ ಖರೀದಿ ನಂತರ ಕರೋನಾಗೆ ಹೆದರಿದ ಜನ ಮನೆ ಸೇರಿಕೊಂಡರು.
ಮದ್ಯ ಮಾರಾಟ ಬಂದ್ ಆಗಿದ್ದ ಕಾರಣ ಮದ್ಯ ವ್ಯಸನಿಗಳು ಬ್ರ್ಯಾಂಡಿ ಶಾಫ್ ಗಳ ಬಳಿ ನಿಂತು ಕರೊನಾಗೆ ಹಿಡಿ ಶಾಪ ಹಾಕುತ್ತಿದ್ದರು. ಹಳೆ ಬಸ್ ನಿಲ್ದಾಣ, ಕನಕ ವೃತ್ತ, ಅಶೋಕ ವೃತ್ತ, ಡಾ.ಖಲೀಲ್ ವೃತ್ತ ಸೇರಿದಂತೆ ಮುಖ್ಯ ವೃತ್ತಗಳ ಬಳಿ ಜನ ಕಂಡು ಬರಲಿಲ್ಲ. ಜನ ಜಂಗುಳಿಯಿಂದ ತುಂಬಿರುತ್ತಿದ್ದ ಹಳೆ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಲಾಕ್ ಡೌನ್‍ಗೆ ಉತ್ತಮ ಬೆಂಬಲ ವ್ಯಕ್ತ ವಾಯಿತು. ಹೊಬಳಿ ಕೇಂದ್ರಗಳಾದ ಸಂತೆಕೆಲ್ಲೂರು, ಮೆದಕಿನಾಳ, ತೊರಣದಿನ್ನಿ, ಬಳಗಾಣೂರು, ಗುಡುದೂರು, ಇನ್ನಿತರ ಗ್ರಾಮಗಳಲ್ಲಿ ಹೊಟೇಲ್, ದಿನಸಿ ಅಂಗಡಿಗಳು ಬಂದ್ ಆಗಿದ್ದು ಕಂಡು ಬಂತು ಹಸ್ಮಕಲ್ ಖಾನ ಸಾಬ್ ದರ್ಗಾ ಕಟ್ಟೆ ಬಳಿ ಯಾರೂ ಕಂಡು ಬರಲಿಲ್ಲ..