ಅಷ್ಟಾವರಣ ಅನುಭಾವ

ಅಷ್ಟಾವರಣ ಅನುಭಾವ

ದಿನಾಂಕ 16/5/2021 ರಂದು ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆಯಲ್ಲಿ *ಅಷ್ಟಾವರಣ ಅನುಭಾವ* ಎಂಬ ವಿಷಯದ ಮೇಲೆ ಸಾಮೂಹಿಕ ಚಿಂತನೆಯನ್ನು ಏರ್ಪಡಿಸಲಾಗಿತ್ತು.
*ವಚನ ಪ್ರಾರ್ಥನೆ* *ಕುಮಾರಿ ಗ್ರೀಷ್ಮ*:-
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು..

*ಸ್ವಾಗತ ಹಾಗೂ ಪ್ರಾಸ್ತಾವಿಕ* :- *ರುದ್ರಮೂರ್ತಿ ಪ್ರಭು*
ಮೊದಲು ಬಸವಣ್ಣನವರನ್ನು ನೆನೆದು ಅಷ್ಟಾವರಣದ ಬಗ್ಗೆ ವಿಷಯವನ್ನು ಮಂಡಿಸಲು ಬಂದಂತ ಇವತ್ತಿನ ವಿಶೇಷ ಅತಿಥಿಗಳಾದ ಶಶಿಧರ ಕರವೀರರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.ಹಾಗೂ ಕಾರ್ಯಕ್ರಮಕ್ಕೆ ಬಂದಂತ ಸರ್ವರೆಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು…

*ವ್ಯಕ್ತಿ ಪರಿಚಯ*:-
*ಡಾ.ಶಶಿಕಾಂತ ಪಟ್ಟಣ*:-
ಶಿಶುಗಳ ಕರವೀರ ಶೆಟ್ಟರು ಸಂಚಾಲಕರು ಶ್ರೀ ಗುರು ಬಸವ ಮಂಟಪ ಟ್ರಸ್ಟ್ ಸಂಸ್ಥೆ ಹುಬ್ಬಳ್ಳಿ
ಇವರು ತುಂಬಾ ಅನುಭವಿಗಳು ಚೆನ್ನಬಸವಣ್ಣ ಎಂದರೆ ತಪ್ಪೇನಿಲ್ಲ, ತುಂಬಾ ಜ್ಞಾನಿಗಳು ಕೂಡ ಹಾಗಾಗಿ ಎಲ್ಲರೂ ಸಮಾಧಾನದಿಂದ ಗಮನವಿಟ್ಟು ವಿಷಯವನ್ನು ಕೇಳಿ ಎಂದು ಹೇಳಿದರು..

*ಶಶಿಧರ ಕರವೀರ ಶೆಟ್ಟರು*
ಗುರು ಬಸವನನ್ನು ಮೊದಲು ನೆನೆದವರು,ಆದಿಯಲ್ಲಿ ನೀನೇ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ ನಿನ್ನಿಂದ ಹುಟ್ಟಿದ್ದು ಜಂಗಮ ನಿನ್ನಿಂದ ಹುಟ್ಟಿತು ಪ್ರಸಾದ, ನಿನ್ನಿಂದ ಹುಟ್ಟಿತ್ತು ಪಾದೋದಕ, ಗುರು ಲಿಂಗ ಜಂಗಮ ಪ್ರಸಾದ ಪಾದೋದಕ್ಕೆ ನೀನೇ ಕಾರಣ ಎನ್ನುವ ವಚನವನ್ನು ಸ್ಮರಿಸುತ್ತಾ…
ಸಮಸ್ತ ಬಸವಾದಿ ಶರಣರು ಮೂಲಭೂತ ತತ್ವಗಳ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಅಷ್ಟಾವರಣಗಳು ಅಂಗ ಪಂಚಾಚಾರಗಳು ಪ್ರಾಣ ಷಟಸ್ಥಲ ವೇ ಆತ್ಮ ಲಿಂಗಾಯತ ಧರ್ಮದ ಪ್ರಧಾನ ತತ್ವಗಳು ಆದ್ದರಿಂದ ಅಷ್ಟಾವರಣಗಳ ಚಿಂತನೆ ಮಾಡುತ್ತಿದ್ಧೇನೆ. ಇವುಗಳನ್ನು ಅನುಸರಿಸುವ ನಿಜವಾದ ಲಿಂಗಾಯತ ಎಂದು ತಿಳಿಸಿದರು.
ಅಷ್ಟಾವರಣ ಎಂದರೆ ಎರಡು ಶಬ್ದಗಳ ಪ್ರಯೋಗ ಅಷ್ಟ+ಆವರಣ=ಅಷ್ಟಾವರಣ
ಅಷ್ಟ ಎಂದರೆ ಎಂಟು ಆವರಣ ಎಂದರೆ ಹೊದಿಕೆ ಅಥವಾ ಕವಚ ಎಂದು ಅರ್ಥ, ಅಂತರಂಗ ಮತ್ತು ಬಹಿರಂಗದ ಆವರಣಗಳನ್ನು ರಕ್ಷಣೆ ಮಾಡುವುದೇ ಅಷ್ಟಾವರಣ ಸಂರಕ್ಷಣೆ ಮಾಡುವ ರಕ್ಷಾಕವಚ ಗಳಾಗಿವೆ ಎಂದು ತಿಳಿಸಿ 8 ತತ್ವಗಳನ್ನು ಏಕೆ ಮಾಡಿದರೆಂದರೆ ಈ ಅಖಂಡ ಬ್ರಹ್ಮಾಂಡವು ಅಷ್ಟಾವರಣದಿಂದಲೇ ಹುಟ್ಟಿರುವುದು.ಪೃಥ್ವಿ ,ಅಪ್ಪು, ತೇಜ, ವಾಯು, ಆಕಾಶ ,ಆತ್ಮ, ಸೂರ್ಯ ಹಾಗೂ ಚಂದ್ರ. ಆದರೆ ಬಸವಣ್ಣನವರು ಗುರು-ಲಿಂಗ-ಜಂಗಮ ಪಾದೋದಕ,ಪ್ರಸಾದ,ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳನ್ನು ನಮಗೆ ಕೊಟ್ಟಿದ್ದಾರೆ ಇವುಗಳು ನಮ್ಮ ಅಹಂಕಾರವನ್ನು ಕಳೆದು ಮಾಯಾ ದರ್ಶನದ ರೂಪವನ್ನು ಕೊಡುತ್ತವೆ ಲಿಂಗವಂತ ಧರ್ಮದ ಪರಶಿವನ ರೂಪಗಳು ಎಂದು ತಿಳಿಸಿ, ಶರಣ ಸಿದ್ಧಾಂತ ತತ್ವಗಳ ಪ್ರಕಾರ ಈ ಎಂಟು ಕೂಡ ಸಮಾನವಾದ ಹಾಗೂ ಶ್ರೇಷ್ಠ ತತ್ವಗಳಾಗಿವೆ ಎಂದು ತಿಳಿಸಿದರು ನಿರಾಕಾರ ತತ್ವಗಳಾಗಿವೆ, ಬಹಿರಂಗದ ಅಷ್ಟಾವರಣ ಗಳನ್ನು ಅಂತರಂಗದ ಒಳಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು…

*ಗುರು* :-
ಅರಿವನ್ನು ಕೊಡುವಾತನೆ ಗುರು.
ಅಜ್ಞಾನದ ಕೂಪದಿಂದ ಸುಜ್ಞಾನದತ್ತ ಒಯ್ಯುವನೇ ನಿಜವಾದ ಗುರು,ಬೇರೆ ಯಾರೂ ಗುರು ಅಲ್ಲ ಎಂದು ತಿಳಿಸಿ, ಅವನೇ ನಮಗೆ ಅರಿವನ್ನು ಕೊಟ್ಟು ನಿಜವಾದ ಮಾರ್ಗವನ್ನು ತೋರಿಸುತ್ತಾನೆ. ಪರವಸ್ತುವನ್ನು ನಮ್ಮ ಅಂತರಂಗದಲ್ಲಿ ಮೂಡಿಸುವಾತನೇ ಗುರು, ಕರಣದಲ್ಲಿ ಮಂತ್ರ ಹೇಳುವವನು ಗುರುವಲ್ಲ, ಗುರು ಮುಟ್ಟಿ ಗುರುವಾಗುವ ಧರ್ಮವೇ ಲಿಂಗಾಯತ ಧರ್ಮ ಗುರು-ಶಿಷ್ಯರ ಯಾವ ಭಿನ್ನ ಭಾವಗಳು ಇರುವುದಿಲ್ಲ ಗುರುವಿನ ಗುಲಾಮಗಿರಿಯು ಇರುವುದಿಲ್ಲ ಎಂದು ತಿಳಿಸಿದರು.

*ಲಿಂಗ* :-
ಲಿಂಗವೆಂಬುದು ಸರ್ವ ಕಾರಣವಾದ ಪರವಸ್ತು ವಾಗಿದೆ ಇದು ಜನ್ಮಜನ್ಮಾಂತರ ದಿಂದ ದುಃಖವನ್ನು ಪಾರುಮಾಡುವ ಸಾಧನವಾಗಿದೆ ,ಇಡೀ ವಿಶ್ವಕ್ಕೆ ಒಂದೇ ಅದೇ ಕೂಡಲಸಂಗಮದೇವ. ಬಸವಣ್ಣನವರು ಇಷ್ಟಲಿಂಗದ ರೂಪವಾಗಿ ಕರಸ್ಥಲಕ್ಕೆ ತಂದುಕೊಟ್ಟಿದ್ದಾರೆ ಎಂದು ತಿಳಿಸಿ, ಲಿಂಗವನ್ನು ತಿಳಿಯದೆ ಬೇರೆನನ್ನೂ ಅರಿತರೂ ಫಲವಿಲ್ಲ, ಲಿಂಗವನ್ನು ಅರಿತ ಮೇಲೆ ಮತ್ತೇನನ್ನು ಅರಿಯುವ ಅವಶ್ಯಕತೆ ಇಲ್ಲ, ಅಂತರಂಗದಲ್ಲಿ ಆವರಿಸಿದ ಇಷ್ಟಲಿಂಗವನ್ನು ಕರಸ್ಥಲಕ್ಕೆ ತಂದುಕೊಟ್ಟಿದ್ದಾರೆ. ಇಷ್ಟಲಿಂಗದ ಪೂಜೆ ಮಾಡಿದರೆ ಆಚಾರ-ವಿಚಾರ ನಡೆನುಡಿಗಳಲ್ಲಿ ಪಾವಿತ್ರತೆ ಬರುತ್ತದೆ ನಾನು ಎನ್ನುವ ಅಹಂಕಾರ ಇಲ್ಲವಾಗುತ್ತದೆ ಎಂದು ತಿಳಿಸಿದರು…

*ಜಂಗಮ* :-
ಜನನ ಗಮನ ಮರಣ ಇವುಗಳನ್ನು ಮೀರದಿರುವ ಪರವಸ್ತು ಜಂಗಮ. ಜಂಗಮದಲ್ಲಿ ಕ್ರಿಯಾಶೀಲ ಜಂಗಮ ಚಲನಶೀಲ ಜಂಗಮ ಎಂದು ಇವೆ.ಇವು ಸ್ವಾನುಭಾವದ ಪರಿಪೂರ್ಣತೆಯನ್ನು ತಂದುಕೊಡುತ್ತವೆ , ಅರಿವು ಆಚಾರವಲ್ಲ ಬದ್ಧತೆಯೇ ಜಂಗಮ. ಜಾತಿ ಪೂರ್ವಶ್ರಮ ವನ್ನು ಬಿಡಿಸಿ ಅರಿವು ಆಚಾರ ಅನುಭವವನ್ನು ತನ್ನಲ್ಲಿ ತಾನು ತುಂಬಿಕೊಂಡು ಜನರಿಗೆ ಮುಟ್ಟಿಸುವವನೇ ನಿಜವಾದ ಜಂಗಮ, ಒಬ್ಬರು ಕಲಿತು ಇನ್ನೊಬ್ಬರಿಗೆ ಕಲಿಸಿ ತತ್ವ ಪ್ರಸಾರದಲ್ಲಿ ತೊಡಗಬೇಕು ಎಂದು ತಿಳಿಸಿದರು….

*ವಿಭೂತಿ*:-
ಆಕಳ ಸಗಣಿಯಿಂದ ಸುಟ್ಟ ಬಸ್ಮ ವೇ ವಿಭೂತಿ. ತಮ್ಮ ಒಳಗಿರುವ ದುರ್ಗುಣ ಅಜ್ಞಾನ ಅಂಧಕಾರ ದುರ್ವಿಚಾರಗಳನ್ನು ಸಂಪೂರ್ಣವಾಗಿ ನಾಶಮಾಡಿ ವಿಭೂತಿಯನ್ನು ಧರಿಸಿಕೊಳ್ಳಬೇಕು. ವಿಭೂತಿ ಎಂದರೆ ಪರಶಿವನ ದಿವ್ಯ ಬೆಳಕು ಹಾಗೂ ಶುದ್ಧತೆ, ಅದು ನಮ್ಮ ಅಂತರಂಗವನ್ನು ಬೆಳಗುತ್ತದೆ ಎಂದು ತಿಳಿಸಿ, ವಿಭೂತಿಯನ್ನು ಮೂರು ಬೆರಳುಗಳಿಂದ ಹಚ್ಚುತ್ತೇವೆ ಅವೇ ಬಸವಾಕ್ಷರಗಳು. ಇವುಗಳು ಅಂತರಂಗದ ಮತ್ತು ಬಹಿರಂಗದ ಕತ್ತಲೆಯನ್ನು ಕಳೆಯುತ್ತವೆ ಎಂದು ತಿಳಿಸಿದರು..

*ರುದ್ರಾಕ್ಷಿ* :-
ಪರಮಾತ್ಮನ ದಿವ್ಯತೇಜಸ್ಸಿನ ರೂಪವೇ ರುದ್ರಾಕ್ಷಿ ಇವುಗಳು ತತ್ವ ಚಿಂತಾಮಣಿಗಳು ಎಂದು ತಿಳಿಸಿ, ಇವುಗಳನ್ನು ಭಕ್ತಿ ಎನ್ನುವ ದಾರದಲ್ಲಿ ಸರಗಳು ರೂಪದಲ್ಲಿ ಕಾಣುತ್ತೇವೆ,ನಮ್ಮೊಳಗಿರುವ ಪರಶಿವ ಕಾಣಬೇಕಾದರೆ ಅಜ್ಞಾನವನ್ನು ದಹಿಸಿ ಪರಿಪೂರ್ಣವಾದ ಜ್ಯೋತಿಯನ್ನು ಹೊತ್ತಿಸಬೇಕು, ಪರಧನ, ಪರಸತಿ, ಪರ ನಿಂದನೆಯಿಂದ ಜಾಗೃತವಾಗಿರಬೇಕು ಪರಮಾತ್ಮನ ತತ್ವಗಳನ್ನು ನೋಡಿ ಗ್ರಹಿಸಲು ರುದ್ರಾಕ್ಷಿಯನ್ನು ಧರಿಸಬೇಕು ಎಂದು ತಿಳಿಸಿದರು…

*ಮಂತ್ರ* :-
ಓಂ ನಮಃ ಶಿವಾಯ ಎಂಬುದೇ ಮಂತ್ರ ಹಾಗೂ ಕೂಡಲಸಂಗಮದೇವನ ನೆನೆಯುವುದೇ ಮಂತ್ರ ಮತ್ತು ಪರಮಾತ್ಮನ ನಿಜ ಸ್ಮರಣೆ ಮಾಡುವುದೇ ಮಂತ್ರ ಎಂದು ತಿಳಿಸಿ, ಪ್ರಣವದ ಮೇಲೆ ಪರಮಾತ್ಮನಿದ್ದಾನೆ, ಪರಮಾತ್ಮನ ಸಾಕಾರವೇ ತಾನಾಗಿರುವ ಪ್ರಣವ ತತ್ವವನ್ನು ಸೂಚಿಸುತ್ತದೆ ಈ ತತ್ವಗಳಲ್ಲಿ ಪರಮಾತ್ಮ ಇದ್ದಾನೆ ಎಂದು ತಿಳಿಸಿ, ವೇದ ಶಾಸ್ತ್ರ ತರ್ಕ ಇವುಗಳಿಗೆಲ್ಲ ತಾಯಿ ಮಂತ್ರವೇ ಓಂನಮಶಿವಾಯ ಎಂದು ತಿಳಿಸಿ, ಇವು ನಮ್ಮ ಮನೋ ನಿಯಂತ್ರಣವನ್ನು ನಿಗ್ರಹಿಸುತ್ತವೆ ಎಂದು ತಿಳಿಸಿದರು…

*ಪಾದೋದಕ* :-
ಸ್ವಾಮೀಜಿಗಳ ಪಾದ ತೊಳೆಯುವುದು ಬಾಧಕವಲ್ಲ ಹಾಗಂತ ನಮ್ಮ ಶರಣರು ಎಲ್ಲೂ ಹೇಳಿಲ್ಲ ಎಂದು ತಿಳಿಸಿ, ಕರಣ, ವಿನಯ ಸಮತಾ ಜಲ ಎನ್ನುವ ಮೂರು ಗುಣಗಳಿವೆ, ಈ ಮೂರು ಕೂಡ ಏಕೀಕರಣಗೊಂಡಾಗ,ಕರುಣಾರಸ,ವಿನಯ ಜಲ ಹಾಗೂ ಸುಖ ದುಃಖದಲ್ಲಿ ಏಕತೆಯನ್ನು ಕಾಣಬಹುದು ಅದು ಕೂಡ ಶಿವ ಎನ್ನುವ ಭಾವನೆಯನ್ನು ಮೂಡಿಸುತ್ತದೆ ಎಂದು ತಿಳಿಸಿ, ಅಂತರಂಗದ ಕರುಣೆಯೇ ಕರುಣಾರಸ, ಇದನ್ನು ಸ್ವೀಕರಿಸುವಾಗ ಕರುಣಾರಸವನ್ನು ಉತ್ಪತ್ತಿ ಮಾಡುತ್ತದೆ,ದಯವೇ ಧರ್ಮದ ಮೂಲ ಎಂದು ತಿಳಿಯುತ್ತದೆ, ಎಂದು ತಿಳಿಸಿದರು…

*ಪ್ರಸಾದ* :-
ಪ್ರಸನ್ನತೆಗೆ ಪ್ರಸಾದ, ಪ್ರಸಾದವೇ ಪರಮಜ್ಞಾನ ಈ ಶರೀರವನ್ನು ಸತ್ಯ ಶುದ್ಧವಾದ ಕಾಯಕ ದಿಂದ ಪ್ರಸಾದ ಗೊಳಿಸಬೇಕು ಅಂಗ,ಮನ ಭಾವಗಳನ್ನು ನಿರಂತರವಾಗಿ ಪ್ರಸಾದ ಗೊಳಿಸಬೇಕು, ಇಷ್ಟಲಿಂಗಕ್ಕೆ ಪ್ರಸಾದ ಮಾಡುವುದೇ ಭಾವ ಎಂದು ತಿಳಿಸಿ, ಓಂಕಾರ ಎನ್ನುವುದು ವೈದಿಕ ಅಲ್ಲ ಅದು ಪ್ರಾಣತತ್ವ ಸೃಷ್ಟಿ ಲಯ ಸ್ಥಿತಿಗಳನ್ನು ಸೂಚಿಸುವುದೇ ಓಂಕಾರ, ಗುರು ಜಂಗಮದ ವ್ಯತ್ಯಾಸವೆಂದರೆ ಅರಿವನ್ನು ಕೊಡುವುದೇ ಗುರು, ಅರಿವು ಆಚಾರ ಎಲ್ಲಿ ನಡೆಯುವುದೋ ಅದೇ ಜಂಗಮ, ಅರಿವಿನಲ್ಲಿ ಗುರುವಿದೆ ಅನುಭಾವದಲ್ಲಿ ಜಂಗಮವಿದೆ ಹಾಗಾಗಿ ಕಣ್ಣುಗಳೆರಡು ನೋಟವೊಂದೆ ಎಂದು ತಿಳಿಸಿದರು.
ಇಷ್ಟಲಿಂಗವನ್ನು ಕನ್ನಡಿ ಎಂದು ಏಕೆ ಕರೆದಿದ್ದಾರೆ..? ಎನ್ನುವ ಪ್ರಶ್ನೆಗೆ ನಿನ್ನಲ್ಲಿ ನೀನು ನೋಡುವುದು ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದು ತಿಳಿಸಿದರು…

*ಡಾ.ಶಶಿಕಾಂತ ಪಟ್ಟಣ*
ರುದ್ರಾಕ್ಷಿಯ ನಾನಾ ರೂಪಗಳನ್ನು ತಿಳಿಸಿ ರುದ್ರಾಕ್ಷಿಗಳು ವ್ಯಾಪಾರಿಕಣಗೊಳ್ಳುತ್ತಿದೆ ಎಂದು ಪ್ರಶ್ನೆ ಮಾಡಿದರು ಅದಕ್ಕೆ ತಕ್ಕ ಉತ್ತರ ಕೊಟ್ಟ ಶಶಿಧರ್ ಅವರು ಏಕಮುಖ ರುದ್ರಾಕ್ಷಿಯು ಅಪರೂಪವಾಗಿ ಗಿಡದಲ್ಲಿ ಬೆಳೆಯುತ್ತದೆ ಹಾಗಾಗಿ ಅವುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ,ಎಲ್ಲ ರುದ್ರಾಕ್ಷಿಗಳು ಒಂದೇ ಎಂದು ತಿಳಿಸಿದರು…

*ಸರಸ್ವತಿ ರಾಮಣ್ಣ* :-
ಗಂಜಲವನ್ನು ಶುದ್ಧ ಮಾಡಲು ಉಪಯೋಗಿಸುತ್ತಾರೆ ಇದು ಸರಿಯೋ ತಪ್ಪೋ ಎಂದು ಕೇಳಿದರು…
ಅದಕ್ಕೆ ಪಟ್ಟಣ ಸರ್ ರವರು ಇದು ಶುದ್ಧ ತಪ್ಪು ಹಾಗೆ ಮಾಡಬಾರದು ಎಂದು ತಿಳಿಸಿದರು…
ಎಲ್ಲಾ ಶರಣ-ಶರಣೆಯರ ಪ್ರಶ್ನೆಗೆ ಶಶಿಧರ ಕರವೀರರು ಸಮಾಧಾನದಿಂದ ಉತ್ತರ ಕೊಟ್ಟರು . ಕಡೆಗೆ ವಿದ್ಯಾಮುಗ್ದ ಮ್ ರವರು ಅಂತರಂಗದಲ್ಲಿ ಅರಿವಾದಡೇನು ಬಹಿರಂಗದಲ್ಲಿ ಕ್ರಿಯೆ ಇಲ್ಲದನ್ನಕ್ಕ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು..
ಪಟ್ಟಣ ಸರ್ ಎಲ್ಲರನ್ನೂ ವಂದಿಸಿದರು…
100 ಕ್ಕೂ ಹೆಚ್ಚು ಶರಣ ಶರಣೆಯರು ಭಾಗವಹಿಸಿ ಇಂದಿನ ಅದ್ಭುತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣಕರ್ತರಾದರು…

ವರದಿ ಮಂಡನೆಗೀತಾ ಜಿ ಎಸ್*
ಹರಮಘಟ್ಟ ಶಿವಮೊಗ್ಗ

2 thoughts on “ಅಷ್ಟಾವರಣ ಅನುಭಾವ

  1. ಅಷ್ಟಾವರಣದ ತತ್ವಗಳು ವ್ಯಕ್ತಿಯಲ್ಲಾ, ಸ್ಥಾವರಗಳಲ್ಲಾ, ಉಪಾದಿ ವಸ್ತುಗಳಲ್ಲಾ.

    ಅರಿವೆ ಗುರು

    ಆಚಾರವೇ ಲಿಂಗ

    ಸಮಷ್ಠಿ ಪ್ರಜ್ಞೆಯೇ ಜಂಗಮ

    ಭಕ್ತಿ ಕಳೆಯೇ ವಿಭೂತಿ

    ಗಣಾಚಾರದ ಸಂಕೇತವೇ ರುದ್ರಾಕ್ಷಿ

    ಅಂತರಂಗದ ನಿರಾಕಾರ ಶಿವಾನುಭೂತಿಯೇ ಮಂತ್ರ

    ಭಕ್ತಿ ಮೂಲಕ ಪ್ರವಹಿಸುವ ನಿರ್ಮಲ ಅರಿವಿನ ರೂಪ ಪಾದೋದಕ

    ಅನುಭಾವದ ಅನುಭೂತಿಯ ಆನಂದವೇ ಪ್ರಸಾದ.

    ಧನ್ಯವಾದಗಳು.

  2. ಅಧ್ಬುತ 💐🙏🙏🙏💐ಇಂದಿನ ದಿನಗಳಲ್ಲಿ ಇಂತಹ ವಿಷಯಗಳು ಪಠ್ಯಕ್ರಮದಲ್ಲಿ ಬಂದರೆ ಸಮಾಜವು ಭಕ್ತಿಯ ಪಥದಲ್ಲಿ ಸಾಗುವುದೆಂಬುದು ನನ್ನ ಅಭಿಮತ 💐🙏💐ಶರಣು ಶರಣಾರ್ಥಿಗಳು💐🙏💐

Comments are closed.

Don`t copy text!