ಖರೀದಿಗಾಗಿ ಮುಗಿಬಿದ್ದ ಜನ, ಕರೊನಾ ನಿಯಮ ಗಾಳಿಗೆ

e-ಸುದ್ದಿ, ಮಸ್ಕಿ

ಕರೊನಾ ವೈರಸನ್ನು ಕಟ್ಟಿ ಹಾಕುವುದಕ್ಕಾಗಿ ಜಿಲ್ಲಾಡಳಿತ ಒಂದು ವಾರಗಳ ಕಾಲ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿ ಅಗತ್ಯ ವಸ್ತುಗಳ ಖರೀದಿಗಾಗಿ ಬುಧವಾರ ಬೆಳಿಗ್ಗೆ 6ರಿಂದ 12ರವರೆಗೆ ಮಾತ್ರ ಅವಕಾಶ ನೀಡಿದ್ದರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಮಾರುಕಟ್ಟೆಯಲ್ಲಿ ಕರೊನಾ ಭಯವನ್ನು ಮರೆತು ಮುಗಿಬಿದ್ದರಿಂದ ಇದರಿಂದ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ಮಸ್ಕಿ ಪಟ್ಟಣದ ಹಳೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಜನರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ ಲಾಕ್ ಡೌನ್ ಸಡಿಲಗೊಳಿಸಿ ಸಮಯ ನಿಗದಿ ಮಾಡಿ ಅನೂಲಕೂ ಮಾಡಿದೆ. ಆದರೆ ಜನರು ಸಾಮಾಜಿಕ ಅಂತರವನ್ನೇ ಮರೆತು ಕರೊನಾ ಭಯವಿಲ್ಲದೇ ತರಕಾರಿ, ದಿನಸಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ನಾಮುಂದು ತಾಮುಂದು ಎನ್ನುವಂತೆ ಖರೀದಿಯಲ್ಲಿ ತಲ್ಲೀನರಾಗಿದ್ದರು.
ಸರ್ಕಾರ ಕೋವಿಡ್ ಕಟ್ಟಿಹಾಕಲು ಕಠಿಣ ಲಾಕ್ಡೌನ್ ಅಸ್ತ್ರ ಪ್ರಯೋಗಿಸಿ ಒಂದು ವಾರಗಳ ಕಾಲ ಅನಗತ್ಯವಾಗಿ ಮನೆ ಬಿಟ್ಟು ಹೊರಬರದಂತೆ ಕ್ರಮ ಕೈಗೊಂಡಿದೆ. ಆದರೆ ಅಗತ್ಯ ವಸ್ತುಗಳ ಖರೀದಿಗಾಗಿ ಮೂರು ದಿನಕ್ಕೊಮ್ಮೆ 6 ಗಂಟೆಗಳ ಕಾಲ ಅವಕಾಶ ನೀಡಿದೆ. ಆದರೆ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಮಾರುಕಟ್ಟೆಯಲ್ಲಿ ಜಮಾಯಿಸುತ್ತಿರುವುದರಿಂದ ಯಾವುದೇ ಸಾಮಾಜಿಕ ಅಂತರವಿಲ್ಲದೆ ಜನರು ತಮ್ಮ ಜವಾಬ್ದಾರಿಯನ್ನು ಮರೆತು ಮಾರುಕಟ್ಟೆ ತುಂಬಿ ತುಳುಕುವಂತೆ ಆಗಿತ್ತು ಇದರಿಂದ ಕರೊನಾ ಇನ್ನಷ್ಟು ಹೆಚ್ಚಾದರೂ ಆಗಬಹುದು ಎನ್ನುವ ಆತಂಕ ಸಾರ್ವಜನಿಕರಲ್ಲಿ ಕಾಡತೊಡಗಿದೆ.
ಕಳೆದ ವರ್ಷ ಕರೊನಾ ಮೊದಲನೇ ಅಲೆಯಲ್ಲಿ ಸರ್ಕಾರ ಕೋವಿಡ್ ತಡೆಗಟ್ಟಲು ಅಚ್ಚುಕಟ್ಟಾಗಿ ನಿಯಮಗಳನ್ನು ರೂಪಿಸಿತ್ತು. ಆದರೆ ಈ ಬಾರಿ ಸರ್ಕಾರ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ

 

Don`t copy text!