ಬಡ ಕುಟುಂಬಗಳ ನೆರವಿಗೆ ಅಭಿನಂದನ್ ಶಿಕ್ಷಣ ಸಂಸ್ಥೆ ಮುಂದು


e-ಸುದ್ದಿ, ಮಸ್ಕಿ
ಕರೊನಾ ಎರಡನೇ ಅಲೇ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕರೊನಾ ಸರಪಣಿಯನ್ನು ಕಟ್ ಮಾಡಲು ಜಿಲ್ಲಾ ಆಡಳಿತ ಲಾಕ್ ಡೌನ್ ಮಾಡಿದೆ. ಇದರಿಂದ ಬಡವರಿಗೆ ತೊಂದರೆಯಾಗಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದ್ದಾರೆ.
ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದು ಆರ್ಥಿಕವಾಗಿ ಅನುಕೂಲವಾಗಿರುವವರಿಂದ ದೇಣಿಗೆ ರೂಪದಲ್ಲಿ ವಸ್ತುಗಳನ್ನು ಶೇಖರಿಸಿ ಬಡವರಿಗೆ ಹಂಚುವದಕ್ಕೆ ಮುಂದಾಗಿದೆ.
ಬುಧವಾರ ತಹಸೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹಾಗೂ ಅಭಿನಂದನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಬಡವರಿಗೆ ದವಸ, ಧಾನ್ಯಗಳ ಕಿಟ್ಟ್‍ಗಳನ್ನು ವಿತರಿಸಿದರು.
ಕಳೆದ ಬಾರಿ ಲಾಕ್ ಡೌನ್ ಆದಗೂ ಕೂಡ ಅಭಿನಂದನ್ ಶಿಕ್ಷಣ ಸಂಸ್ಥೆ ಬಡವರಿಗೆ ಆಹಾರ ಧಾನ್ಯಗಳ ಕಿಟ್ಟ್ ಮತ್ತು ಅನಾರೋಗ್ಯ ಪೀಡಿತರಿಗೆ ಔಷಧ ಗಳನ್ನು ವಿತರಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದರು.
ಈ ಬಾರಿ ಕೂಡ ಸಹಾಯ ಸಹಕಾರ ಮಾಡುಲು ಮುಂದಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಕಾರ್ಯದರ್ಶಿ ರಾಮಣ್ಣ ಹಂಪರಗುಂದಿ ಮನವಿ ಮಾಡಿದ್ದಾರೆ.

Don`t copy text!