ಜನರ ಸೇವೆಯೇ ಜನಾರ್ದನ ಸೇವೆ

ಜನರ ಸೇವೆಯೇ ಜನಾರ್ದನ ಸೇವೆ

ಸಿಂಹದ ಮರಿ
ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತದೆ ಎನ್ನುವ ಜನವಾಣಿಯಂತೆ ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ ಬ್ರಿಟಿಷ್ ಸರ್ಕಾರದಿಂದ ಜನಸೇವೆಗಾಗಿ “” ರಾವ್ ಬಹಾದ್ದೂರ್” ಪ್ರಶಸ್ತಿ ಪಡೆದ ಮನೆತನವೇ ಡಾ:: ಚವಡಿಯವರದು

ಡಾ::ಚವಡಿಯವರ ಅಜ್ಜನವರು ಗದುಗಿನ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಅವಿಸ್ಮರಣೀಯ ಕಾರ್ಯ ಮಾಡಿದ್ದಾರೆ.ಆ ಯುಗ ಪುರುಷರೇ *ಶ್ರೀಮಂತ,ರಾವ್ ಬಹದ್ದೂರ್ ವೀರಪ್ಪನವರು* ಅವರ ಮೊಮ್ಮಗ *ಡಾ:: ಎಸ್.ಸಿ.ಚವಡಿ* ಮುಳಗುಂದ ಪಾಲಿಗೆ *ಸಂಚಾರಿ ವೈದ್ಯಾಲಯ* ಎಂಬ ಖ್ಯಾತಿಯನ್ನು ಪಡೆದವರಾಗಿದ್ದಾರೆ.ಕೆಲವರಂತೂ ಅವರನ್ನು ನಮ್ಮ ಪಾಲಿನ *ದೇವರು* ಎಂದು ಹೇಳುತ್ತಾರೆ.
ಇಷ್ಟೆಲ್ಲ ಉಪಮೇಯ ನಾನು ಯಾಕೆ ಹೇಳುತ್ತಿರುವೆನೆಂದರೆ, ಮಹಾ ಹೆಮ್ಮಾರಿ ಕೊರೋನಾ ಸಂದರ್ಭದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು,ಕದ ಮುಚ್ಚಿ ಕೊಂಡೆವು,ಕೆಲವು ಮುಚ್ಚಿದ್ದ ಕದವನ್ನು ತೆರೆದವು.ಇಲ್ಲಿ ಎರಡೂ ಬಗೆಯವು ಸ್ವಾರ್ಥಕ್ಕಾಗಿ.1)ಖಾಯಿಲೆಗೆ ಅಂಜಿ
2)ಹಣ ಸಂಪಾದನೆಗೆ. ಈ ತೆರನಾದ ವೈದ್ಯಲೋಕವಿರುವಾಗ, ಅಪರೂಪದಲ್ಲಿ ಅಪರೂಪ ಎನಿಸುವ ವೈದ್ಯರಲ್ಲಿ ನಮ್ಮೂರಿನ ಅತ್ಯಂತ ಜನಪ್ರಿಯ ವೈದ್ಯರು ಎಂದರೆ *ಡಾ::ಚವಡಿ.ಎಸ್.ಸಿ.*
ಹಗಲಿರುಳು ಈ ಕೊರೋನಾ ಸಂದರ್ಭದಲ್ಲಿ ರೋಗಿಗಳಿಗೆ ಅದರಲ್ಲೂ ಬಡರೋಗಿಗಳಿಗೆ ಪ್ರಾಣ ವಾಯು ಆಗಿದ್ದಾರೆ.ಕರೊನಾ ಗೊಂದಲದ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನ ಬರುವರು, ಗಣ್ಯಾತಿಗಣ್ಯರಿಗೆ ಇವರ ಮಾತೆ ವೇದವಾಕ್ಯ ಡಾಕ್ಟರ್ ಜವಡಿ ಇವರನ್ನು ಕೇಳಿಯೇ ಅಥವಾ ವೈದ್ಯಕೀಯ ಸಲಹೆಯನ್ನು ಪಡೆದುಕೊಂಡು ಬೇರೆ ಆಸ್ಪತ್ರೆಗಳಿಗೆ ಹೋಗುತ್ತಾರೆ.ಗದಗ ಶಹರದಲ್ಲಿ ಆಸ್ಪತ್ರೆಗಳ ಪ್ರವೇಶ ಶುಲ್ಕ ಇನ್ನೂ ರಿಂದ ಐದನೂರರವರೆಗೆ ಇರುವಾಗ, ಡಾಕ್ಟರ್ ಚವಡಿಯವರು ಕಡುಬಡವರಿಗೆ ಪುಕ್ಕಟೆ
ಸುಶ್ರೂಷೆ ಜೊತೆಗೆ ಪುಕ್ಕಟೆಯಾಗಿ ಔಷಧಿ ನೀಡುವ ನಿತ್ಯ ಸಂಜೀವಿನಿಯಾಗಿದ್ದಾರೆ.ಇವರಿಗೆ *ಮುಳಗುಂದದಲ್ಲಿ ಹಣ ಗಳಿಸಲು ಆಗಲಿಲ್ಲ, ಆದರೆ ಜನರನ್ನು ಅಪಾರ ಪ್ರಮಾಣದಲ್ಲಿ ಗಳಿಸಿದ್ದಾರೆ.* ಈ ಸಂಪತ್ತಿನ ಮುಂದೆ ಯಾವ ಸಂಪತ್ತು ಸರಿ ಸಾಟಿಯಾಗಿ ಲಾರದು.ಇವರು ತಮ್ಮ ವೈಯುಕ್ತಿಕ ಕೆಲಸದ ನಿಮಿತ್ಯ ಬೇರೆ ಊರಿಗೆ ಹೋದರೆ ರೋಗಗ್ರಸ್ಥರು ಇವರನ್ನು ಬೈಯುವವರೂ ಇದ್ದಾರೆ.ಇದಕ್ಕೆ ಕಾರಣ ಇವರು ಮುಳಗುಂದ ಊರು ಮನೆಯ ಮಗನಾಗಿರುವುದರಿಂದ.

ಷಣ್ಮುಖ ಶಿವಯೋಗಿಗಳು ಹೇಳಿದಂತೆ
ಸುಖ ಬಂದಲ್ಲಿ ನಿಮ್ಮ ಹಾಡಿ ಹರಸುವೆನಯ್ಯ. ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ. ಅದೇನು ಕಾರಣವೆಂದೊಡೆ ಎನ್ನ ಸುಖ-ದುಃಖಗಳಿಗೆ ನೀವೇ ಆಧಾರವಾದ ಕಾರಣ ನಿಮ್ಮನ್ನೇ ಹಾಡುವೆನಯ್ಯ; ನಿಮ್ಮನೆ ಹೋಗಳುವೆನಯ್ಯ ನಿಮ್ಮ ಮುಂದೆ ಎನ್ನ ಒಡಲ ಕಡು ದುಃಖವ ನೀಡಾಡುವೆನಯ್ಯ ಅಖಂಡೇಶ್ವರಾ.
ಈ ವೈದ್ಯಕೀಯ ವೃತ್ತಿಯೊಂದಿಗೆ ಸಾಮಾಜಿಕ, ಆಧ್ಯಾತ್ಮಿಕ, ಸಾಹಿತಿಕ, ಸಾಂಸ್ಕೃತಿಕ, ಮುಂತಾದ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇವರ ಮನೆಯಲ್ಲಿ ಒಂದು ಉತ್ತಮವಾದ ಪುಸ್ತಕಗಳನ್ನು ಹೊಂದಿದ ಅದ್ಭುತವಾದ ಗ್ರಂಥಾಲಯಿದೆ.

*ಸತಿ–ಪತಿಗಳಲ್ಲಿ ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಶರಣರಂಗೆ* ಎನ್ನುವಂತೆ ಇವರು ಧರ್ಮಪತ್ನಿ *ಶರಣೆ ಶ್ರೀಮತಿ ಸುಮನ್. ಎಸ್.ಚವಡಿ* ಇವರು ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ಡಾಕ್ಟರ್ ಜವಡಿಯವರು ಕಾಲು ಮುರಿದುಕೊಂಡು ಮನೆಯಲ್ಲಿದ್ದಾಗ ಆಸ್ಪತ್ರೆಯನ್ನು ಮನೆಗೆ ವರ್ಗಾಯಿಸಿಕೊಂಡು, ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.ಅವರು ದನಿವರಿಯದ ವೈದ್ಯರಾಗಿದ್ದಾರೆ.ಅವರ ಧರ್ಮಪತ್ನಿಯವರ ತಾಳ್ಮೆಗುಣ ಮೆಚ್ಚಲೇಬೇಕು.ಶರಣ ದಂಪತಿಗಳು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ.ಎಂತಹ ಕಠಿಣ ಪ್ರಸಂಗದಲ್ಲಿಯೂ ಕಾಯಕ ದಾಸೋಹ ನಿಲ್ಲಿಸಿಲ್ಲ.ಈ ಇಳಿವಯಸ್ಸಿನಲ್ಲೂ ಪಾದರಸದಂತೆ ಚುರುಕಾಗಿದ್ದಾರೆ.ಅವರ ಭೌತಿಕ ಶರೀರಕ್ಕೆ ವಯಸ್ಸಾಗಿದೆ,ಹೊರತು ಮಾನಸ ಸ್ಥೂಲ ಶರೀರಕ್ಕೆ ಅಲ್ಲಾ. ಜಗತ್ತಿನಲ್ಲಿ ನಾನು ಕಂಡುಕೊಂಡಂತೆ *ವೈದ್ಯರಿಗೆ, ಶಿಕ್ಷಕರಿಗೆ, ವಕೀಲರಿಗೆ* ವೃತ್ತಿಯಿಂದ ನಿವೃತ್ತಿ ಇರುವುದಿಲ್ಲ. ಡಾಕ್ಟರ್ ಚವಡಿಯವರ ವ್ಯಕ್ತಿತ್ವ ಬಹಳ ದೊಡ್ಡದು. ಆಸ್ಪತ್ರೆಗೆ ಬಂದವರು ಯಾರೇಯಾಗಿರಲಿ ಮೊದಲು ಅವರ ಸುಶ್ರೂಶೆ ಮುಖ್ಯ.ಇವರು ಅಪರೂಪರಲ್ಲಿ ಅಪರೂಪ.ಸದಾ ಹಸನ್ಮುಖಿಯಾಗಿರುತ್ತಾರೆ.

*ಚಂದನವ ಕಡಿದು ಕೊರೆದು ತೇದಡೆ, ನೊಂದೆನೆಂದು ಕಂಪ ಬಿಟ್ಟಿತ್ತೆ ? ತಂದು ಸುವರ್ಣವ ಕಡಿದೊರೆದೊಡೆ, ಬೆಂದು ಕಳಂಕ ಹಿಡಿದಿತ್ತೇ?ಸಂದು ಸಂದನು ಕಡಿದ ಕಬ್ಬನು ತಂದು ಗಾಣದಲ್ಲಿ ಅರೆದಡೆ, ಬೆಂದು ಪಾಕಗೂಳ ಸಕ್ಕರೆಯಾಗಿ, ನೊಂದೆನೆಂದು ಸಿಹಿಯ ಬಿಟ್ಟಿತ್ತೆ? ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು ನಿಮಗೆ ಹಾನಿ, ಎನ್ನ ತಂದೆ ಚೆನ್ನಮಲ್ಲಿಕಾರ್ಜುನದೇವಯ್ಯ, ಕೊಂದಡೆ ಶರಣೆಂಬುದ ಮಾಣೆ.

ಅಕ್ಕನ ವಚನದಂತೆ ಹಲವು ಕಷ್ಟಗಳಿದ್ರೂ ಕೂಡಾ ಎಲ್ಲರೊಂದಿಗೆ ನಗುನಗುತ್ತಲೇ ಮಾತನಾಡುವ ಕಲೆಗಾರ.ಪ್ರತಿಯೊಬ್ಬ ಸಹೋದರರು ಉನ್ನತ ವ್ಯಾಸಂಗ ಮಾಡಿದ್ದಾರೆ.ಆದರೂ ಯಾರಲ್ಲಿಯೂ ಅಹಂ ಎಂಬುದಿಲ್ಲ.
ಸಾತ್ವಿಕ ಜೀವನಕ್ಕೆ ಇವರ ಕುಟುಂಬವೇ ಉತ್ತಮ ಉದಾಹರಣೆಯಾಗಿದೆ

ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯ. ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯ; ದಾಸಯ್ಯ ಶಿವದಾನವ ನೆರೆಯ ನೋಡಯ್ಯ; ಮನೆಯ ಚೆನ್ನಯ್ಯನನ್ನು ಮನ್ನಣೆಯ ಚೆನ್ನಯ್ಯನೆನ್ನುವ ಉನ್ನತ ಮಹಿಮಾ ಕೂಡಲಸಂಗಮದೇವ ಶಿವಧೋ! ಶಿವಧೋ!! ಆಡಂಬರದ ಜೀವನ ನಡೆಸಿದೆ,ಮುಂದಿನ ಜನಾಂಗಕ್ಕೆ ಮಾರ್ಗದರ್ಶಿಗಳಾಗಿದ್ದಾರೆ.
ನಾನು *ಸಿಂಹದ ಮರಿ* ಎಂದು ಕರೆಯಲು ಕಾರಣ….. ಹುಲಿ ತನ್ನ ಹೊಟ್ಟೆ ತುಂಬಿದ್ದರೂ ಬೇಟೆಯಾಡುವುದನ್ನು ಬಿಡುವುದಿಲ್ಲ.ಆದರೆ ಸಿಂಹ ತನ್ನ ಹೊಟ್ಟೆ ತುಂಬಿದ ಮೇಲೆ ಮತ್ತೆ ಬೇಟೆಯಾಡುವುದಿಲ್ಲ.ಹಾಗೇ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಆಶೀರ್ವಾದದಿಂದ ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ.

ರವೀಂದ್ರ .ರುದ್ರಪ್ಪ. ಪಟ್ಟಣ
ಮುಳಗುಂದ—–ರಾಮದುರ್ಗ

Don`t copy text!