ಮಸ್ಕಿ: ತಾಲೂಕಿನ ಮಾರಲದಿನ್ನಿ ಸಮೀಪವಿರುವ ಮಸ್ಕಿ ನಾಲಾ (ಘನಮಠದೇಶ್ವರ) ಜಲಾಶಯದ ಮೇಲ್ಬಾದ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಗೆ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ 2500 ಕ್ಯೂಸೆಕ್ ನೀರು ಹರಿದು ಬಂದಿರುವುದರಿಂದ ಜಲಾಶಯದಿಂದ 1600 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಎಂದು ಮಸ್ಕಿ ನಾಲಾ ಜಲಾಶಯದ ಎಇಇ ದಾವುದ್ ತಿಳಿಸಿದ್ದಾರೆ.
ಮಸ್ಕಿ ನಾಲಾ ಜಲಾಶಯಕ್ಕೆ 29 ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಸತತವಾಗಿ ಜಲಾಶಯದ ಮೇಲ್ಬಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚಾಗುತ್ತಿದೆ. ಡ್ಯಾಂ ತುಂಬುವ ಅಪಾಯದ ಮಟ್ಟದಲ್ಲಿರುವದರಿಂದ ಹಳ್ಳಕ್ಕೆ ಹೆಚ್ಚು ನೀರು ಬಿಡಲಾಗುತ್ತದೆ.
ಜಲಾಶಯದಿಂದ ನಾಲ್ಕು ಗೇಟ್‍ಗಳ ಮೂಲಕ 1600 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಆದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಸಾರ್ವಜನಿಕರು ಹಳ್ಳಕ್ಕೆ ನೀರು ಹರಿದು ಬರುತ್ತಿರುವುದರಿಂದ ಮುಂಜಾಗೃತೆ ಕ್ರಮವಾಗಿ ಜಾನುವಾರು ಹಾಗೂ ಮಕ್ಕಳು ಸೇರಿದಂತೆ ಯಾರು ಕೂಡ ಹಳ್ಳಕ್ಕೆ ಇಳಿಯಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.