ಮಸ್ಕಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಬೆಂಗಳೂರು ಅವರು ನಡೆಸಿದ ರಾಜ್ಯ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಮಸ್ಕಿಯ ಲಯನ್ ಶಾಲೆಯ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಮುಖ್ಯಗುರು ದೊಡ್ಡಪ್ಪ ತಿಳಿಸಿದ್ದಾರೆ.
ಮಸ್ಕಿ ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾದ ಜೀವನ್ ಅಂಗಡಿ ತಂದೆ ಸಿದ್ಧರಾಮೇಶ್ವರ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ತನ್ನ ಪ್ರತಿಭೆಯನ್ನು ತೊರಿಸಿದ್ದಾನೆ.
ವಿದ್ಯಾರ್ಥಿ ಯ ಸಾಧನೆಗೆ ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ ಹಾಗೂ ಪದಾಧಿಕಾರಿಗಳು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.