ನುಡಿ ನಮನ
–ಗವಿಸಿದ್ದಪ್ಪ ವೀ ಕೊಪ್ಪಳ
ಗದುಗಿನ ತೋಂಟದಾರ್ಯ ಮಠದ ಪರಮ ಭಕ್ತರು, ವಾಣಿಜ್ಯೋದ್ಯಮಿಗಳು ಆಗಿದ್ದ ವಿಶ್ವನಾಥ ಬುಳ್ಳಾ ಅವರು ತೋಂಟದಾರ್ಯ ಮಠದ ಲಿಂಗಾಯತ ತರುಣ ಸಂಘದ ಅಧ್ಯಕ್ಷರಾಗಿ ಎಷ್ಟೋ ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ.
ತೋಂಟದಾರ್ಯ ಮಠದ ಇಂದಿನ ಬೆಳವಣಿಗೆಯಲ್ಲಿ ಇವರ ಶ್ರಮ ಮತ್ತು ದುಡಿಮೆಯೂ ಇದೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗದು.ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಗದುಗಿನ ತೋಂಟದಾರ್ಯ ಮಠದ ಇಂದಿನ ಶಿಸ್ತು ಮತ್ತು ಸುವ್ಯವಸ್ಥೆಯಲ್ಲಿ ವಿಶ್ವನಾಥ ಬುಳ್ಳಾ ಅವರ ಕೊಡುಗೆಯೂ ಇದೆ ಎನ್ನುವುದನ್ನು ಗದುಗಿನ ಶ್ರೀಮಠದ ಸದ್ಭಕ್ತರು ಸಂತಸದಿಂದ ಮಾತನಾಡಿಕೊಳ್ಳುತ್ತಿರುತ್ತಾರೆ.ವಿಶ್ವನಾಥ ಬುಳ್ಳಾ ಅವರು ತಮ್ಮ ವ್ಯಾಪಾರ ವಾಣಿಜ್ಯೋದ್ಯಮದ ಜೊತೆ ಜೊತೆಗೆ ತೋಂಟದಾರ್ಯ ಮಠದ ಎಲ್ಲ ಕಾರ್ಯಕ್ರಮಗಳಲ್ಲೂ ವಿಶ್ವನಾಥ ಬುಳ್ಳಾ ಇದ್ದೇ ಇರುತ್ತಿದ್ದರು.
ಶ್ರೀಮಠದಲ್ಲಿ ನಡೆಯುತ್ತಿರುವ ಶಿವಾನುಭವ ಕಾರ್ಯಕ್ರಮ ಇ೦ದು ಮೂರು ಸಾವಿರಕ್ಕೆ ತಲುಪುತ್ತಿದೆ.ಇಡೀ ನಾಡಿನಲ್ಲಿಯೇ ತೋಂಟದಾರ್ಯ ಮಠದಲ್ಲಿ ನಡೆಯುತ್ತಿರುವ ಪ್ರತಿ ವಾರದ ಶಿವಾನುಭವ ಕಾರ್ಯಕ್ರಮ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.ಈ ಕಾರ್ಯಕ್ರಮ ಇಷ್ಟು ದಿನ ಮುನ್ನಡೆದು ಪ್ರಸಿದ್ಧಿಗೆ ಬರುವಲ್ಲಿ ವಿಶ್ವನಾಥ ಬುಳ್ಳಾವರ ಬೆವರು ಮತ್ತು ಶ್ರಮ ಇದೆ ಎನ್ನುವುದನ್ನು ಗದಗ ಸುತ್ತಮುತ್ತಲ್ಲ ನಾಡಿನ ವರಿಗೆಲ್ಲ ತಿಳಿದಿದೆ.
ವಿಶ್ವನಾಥ ಬುಳ್ಳಾ ಅವರು ಕ್ರಿಯಾಶೀಲರು ಸದಾ ಒಂದಲ್ಲ ಒಂದು ಸಮಾಜೋಪಯೋಗಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜೀವ ಅವರದು. ಗದುಗಿನಲ್ಲಿ ಪ್ರತಿಷ್ಠಿತ ವ್ಯಾಪಾರ ವಾಣಿಜ್ಯೋದ್ಯಮಿಗಳು, ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ಇವರದು. ಸಮಾಜೋಪಯೋಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಳೆಯಬೇಕೆಂಬ ಯುವಕರ ಕನಸಿಗೆ ಕಿಚ್ಚು ಹಚ್ಚುವ ವ್ಯಕ್ತಿತ್ವ ವಿಶ್ವನಾಥ ಬುಳ್ಳಾ ಅವರದು.
ಅವರನ್ನು ಒಮ್ಮೆ ಮುಖಾಮುಖಿಯಾಗಿ ಭೆಟ್ಟಿಯಾಗಿ ಮಾತನಾಡಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿದು ಹೋಯಿತಲ್ಲ ಎನ್ನುವ ವಿಷಾದ ನನ್ನನ್ನು ಕಾಡುತ್ತಿದೆ.
ಸಾರ್ಥಕ ಬದುಕನ್ನು ಬದುಕಿದ ವಿಶ್ವನಾಥ ಬುಳ್ಳಾವರೇ ಮತ್ತೊಮ್ಮೆ ಹುಟ್ಟಿ ಬನ್ನಿ. ಮಹಾತ್ಮ ಬಸವೇಶ್ವರ ಹಾಗೂ ಎಡೆಯೂರು ಸಿದ್ಧಲಿಂಗೇಶ್ವರ ತಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ.
( ಗದುಗಿನ ವಿಶ್ವನಾಥ ಬುಳ್ಳಾ ಅವರು ಲಿಂಗಾಯತ ಬಣಜಿಗ ಸಮಾಜದ ಮುಖಂಡರು. ದಿನಾಂಕ ೧೧-೧೦-೨೦೨೦ ರಂದು ಲಿಂಗೈಕ್ಯರಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ನುಡಿ ನಮನ – ಸಂಪಾದಕ )