ಶ್ರೀಶೈಲ ಜಗದ್ಗುರು ಪಂಡಿತರಾಧ್ಯ ಸೇವಾ ಸಮಿತಿ ಟ್ರಸ್ಟ್ ನಿಂದ ಅನ್ನ ದಾಸೋಹ
e-ಸುದ್ದಿ, ಮಸ್ಕಿ
ಶ್ರೀಶೈಲ ಪೀಠದ ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಪ್ಪಣೆಯ ಮೇರೆಗೆ ಶ್ರೀಶೈಲ ಪೀಠದ ಸೇವಾ ಸಮಿತಿ ವತಿಯಿಂದ ಬಡವರಿಗೆ, ಭೀಕ್ಷುಕರಿಗೆ, ಸಾಧು ಸಂತರಿಗೆ, ನಿರರ್ಗತಿಕರಿಗೆ, ಕೂಲಿ ಕಾರ್ಮಿಕರುಗೆ, ಅಡವಿ ಚಂಚರಿಗೆ ಸೋಮವಾರ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಅನ್ನದಾನ ಮಾಡಲಾಯಿತು.
500 ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು. ಕರೊನಾ ಆವರಿಸಿರುವ ಕಾರಣ ಬಡವರಿಗೆ, ಭೀಕ್ಷುಕರಿಗೆ ಊಟಕ್ಕೆ ತೊಂದರೆಯಾಗಿರುವದನ್ನು ಅರಿತುಕೊಂಡ ಜಗದ್ಗುರುಗಳು ಪೀಠದ ಸೇವಾ ಸಮಿತಿಯವರಿಗೆ ಉಪಹಾರ ಹಾಗೂ ಅನ್ನದಾನ ಮಾಡುವಂತೆ ಮಾರ್ಗದರ್ಶನ ಮಾಡಿದ್ದು ಅವರ ಅಣತೆಯಂತೆ ಅನ್ನದಾನ ಮಾಡಲಾಗಿದೆ ಎಂದು ಮಹಾಪೀಠದ ಏಜೆಂಟ್ ರಾದ ಎಂಎಸ್.ಬಸವರಾಜ ಸ್ವಾಮಿ ತಿಳಿಸಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಪೀಠದ ಸಲಹಾ ಸಮಿತಿಯ ಸದಸ್ಯರಾದ ವೇ.ಮೂ.ಭದ್ರಯ್ಯ ಸ್ವಾಮಿ, ಶ್ರೀಶೈಲ ಪೀಠದ ಮುಖ್ಯ ವ್ಯವಸ್ಥಾಪಕರಾದ ಎಂ.ಬಿ.ಮಂಜುನಾಥ ಸ್ವಾಮಿ ,
ಮತ್ತು ಸಂಪರ್ಕಾಧಿಕಾರಿ ಕೆ.ಶ್ರೀನಿವಾಸರಾವ್ ಅವರ ಉಪಸ್ಥಿತಿಯಲ್ಲಿ ಅನ್ನ ಪ್ರಸಾದ ಕಾರ್ಯಕ್ರಮ ಜರುಗಿತು.
ಅನ್ನದಾನದ ಜತೆಗೆ ಶ್ರೀಶೈಲ ದಲ್ಲಿರುವ ಭೀಕ್ಷುಕರು, ಬಡವರು ಕರೊನಾ ದಿಂದ ಎಚ್ಚರಿಕೆಯಿಂದ ಇರುವಂತೆ ನೋಡಿ ಕೊಳ್ಳುವದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಕರೊನ ಸಂದರ್ಭದಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ಭಕ್ತರು, ಯಾತ್ರಿಕರು ಬರುವದಕ್ಕೆ ನಿಷೇಧ ಇರುವದರಿಂದ ಬಡವರಿಗೆ, ಭೀಕ್ಷಕುರಿಗೆ ಊಟಕ್ಕೆ ತೊಂದರೆಯಾಗಿದೆ. ಬಡವರಿಗಾಗಿ ಮಿಡಿಯುವ ತಾಯಿ ಹೃದಯದ ಜಗದ್ಗುರುಗಳು ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಪೀಠದ ಸಲಹಾ ಸಮಿತಿಯವರಿಗೆ ಸೂಚನೆ ನೀಡಿದ್ದಾರೆ. ಜಗದ್ಗುರುಗಳ ಸೂಚನೆಯಂತೆ ನಡೆದುಕೊಳಲ್ಲಾಗಿದೆ ಎಂದು
ಎಂ.ಬಿ.ಮಂಜುನಾಥ ಸ್ವಾಮಿ ತಿಳಿಸಿದ್ದಾರೆ. ಹಾಗೆಯೇ ಕರೊನಾ ಕುರಿತು ತಿಳುವಳಿಕೆ ನೀಡಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ