ದೇವಾಂಗ ಸಮಜದಿಂದ ಪಡಿತರ ವಿತರಣೆ


e- ಸುದ್ದಿ, ಮಸ್ಕಿ
ಪಟ್ಟಣದ ದೇವಾಂಗ ಸಮಾಜದವರು ಯಾವಗಲೂ ಸಮಾಜ ಮುಖಿ ಕಾರ್ಯಕ್ರಮ ಮಾಡುವದರ ಮೂಲಕ ಮುಂಚುಣಿಯಲ್ಲಿದ್ದಾರೆ.
ಮಸ್ಕಿ ಪಟ್ಟಣದಲ್ಲಿರುವ ಕಡು ಬಡವ ದೇವಾಂಗ ಕುಟುಂಬಗಳನ್ನು ಗುರುತಿಸಿ ಕರೊನಾ ಸಂದರ್ಭದಲ್ಲಿ ಅವರ ನೆರವಿಗೆ ಮುಂದಾಗಿದ್ದಾರೆ. ಸೋಮವಾರ ಸಮಾಜದ ಹಿರಿಯರು ಮತ್ತು ಯುವಕರು ಸೇರಿ 70 ಕುಟುಂಬಗಳಿಗೆ ಆಹಾರದ ಕಿಟ್ಟ್ ಗಳನ್ನು ವಿತರಿಸಿದರು.
ಜೋಳ, ಎಣ್ಣೆ, ತೊಗರಿ ಬೇಳೆ ಸಾಬೂನು ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ಮಾಡಿದ್ದಾರೆ. ಒಂದೊಂದು ಕಿಟ್‍ಗೆ 1000 ದಿಂದ 1100 ಖರ್ಚು ತಗುಲಿದ್ದು 70 ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ.
ಪಟ್ಟಣದಲ್ಲಿ ದೇವಾಂಗ ಸಮಾಜದ 160 ಕ್ಕೂ ಹೆಚ್ಚು ಕುಟುಂಬಗಳಿವೆ. ಕಳೆದ ಎರಡು ದಿನಗಳ ಹಿಂದೆ ಯುವಕರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಆಹಾರದ ಕಿಟ್ ಬೇಕಿರುವ ಕುಟುಂಬಗಳನ್ನು ಗುರುತಿಸಿ ಆಹಾರ ಪದಾರ್ಥಗಳನ್ನು ವಿತರಿಸಿದರು.
ಸುಮಾರು 30 ಜನರಿಂದ 57 ಸಾವಿರ ರೂ ದೇಣೀಗೆ ಸಂಗ್ರಹಿಸಿದ್ದು ಉಳಿದ ಮೊತ್ತವನ್ನು ಸಮಾಜದ ಟ್ರಸ್ಟ್‍ನಿಂದ ಪಡೆದು ಕಿಟ್ ತಯಾರಿಸಿದ್ದರು.
ದೇವಾಂಗ ಸಮಾಜದ ಅಧ್ಯಕ್ಷ ಎ.ಡಿ.ಕೊಪ್ಪರದ, ಹಿರಿಯ ಮುಖಂಡ ವೀರಭದ್ರಪ್ಪ ಮಾಳಗಿ, ಶಿವಶಂಕ್ರಪ್ಪ ಹಳ್ಳಿ, ಮಂಜುನಾಥ ಬಿಜ್ಜಳ, ಶಂಕ್ರಪ್ಪ ಜೋಗಿನ್, ಮಂಜುನಾಥ ಮಾಳ್ಗಿ, ಗುರುಲಿಂಗಪ್ಪ, ಮಲ್ಲಪ್ಪ ವಕೀಲ, ಅಮರಪ್ಪ ವನಕಿ, ಮಲ್ಲಿಕಾರ್ಜುನ ಸಿಂಗಡಿ, ಅಮರೇಶ ವಜ್ರದ ಹಾಗೂ ಇತರರು ಭಾಗವಹಿಸಿದ್ದರು.

Don`t copy text!