ಅಘೋರಿಸಬೇಡ..

ಅಘೋರಿಸಬೇಡ..

ನನ್ನೊಳಗೊಂದು ಬೆಂಕಿಯ
ಸದಾ ಕಳ್ಳೆ ಮಳ್ಳ
ಆಟ
ನನ್ನ ಆಳುವ
ನಿನ್ನ ಪ್ರೀತಿಯ
ವ್ಯಾಮೋಹ
ನನ್ನ ತಬ್ಬಿ ರುವ
ನಿನ್ನ ನೆನಪು
ಮತ್ಯಾವುದೋ
ನೆರಳಿನ ಭಯ
ಪ್ರೇಮವೆಂಬ
ನಿಷ್ಕಳಂಕ ದೀಪ
ಆರಾಧನೆ
ಜಾಜ್ವಲ್ಯಮಾನ
ಹೋಮಕುಂಡ
ಮನ
ಬಿದ್ದು ನಾಶವಾಗಲು
ಈಗಲೇ ಸಿದ್ಧ
ನಾನಿರುವೆ ನಿನಗೆ
ಎಂದೂ ಬದ್ಧ
ಕಟ್ಟಬೇಡ
ನಿರಾಸೆಗಳ
ಸರ ಮಾಲೆಯನ್ನ
ಅಘೋರಿಸಬೇಡ
ಕಾಡುವ ನೆನಪುಗಳಿಂದ
ರೇಗಬೇಡ ದೂರಬೇಡ
ಸೊರಗಿ ಹೋಗುವೆ ನಾನು..
ಕೊರಗಿ ನೀಗುವೆ
ತಿರುಗಿ ಮತ್ತೆ
ಸುರಿಯುವೆ
ನಂತರ ಅನುನಯ
ಅನುಸಂಧಾನ
ಅನುಪಮ ಭಾವ
ನನ್ನೊಳಗೆ
ಕಾಡಿಸು ಕತೆಯಾಗಿ
ಭೋರ್ಗರೆ ಕಡಲಾಗಿ
ವಿಷದವಾಗಿ ವಿಹರಿಸು
ಸಂತಾಪವಾಗಿ ಸಡಿಲಿಸು ಸಂಗಾತಿಯಾಗಿ ಕದಲು
ನಾನೊಂದು
ಸುಂದರ ಅಧ್ಯಾಯ
ಓದು ಪ್ರೀತಿಯಿಂದ
ಪುಟ
ಮುಗುಚದೇ..

ಪ್ರೊ ವಿಜಯಲಕ್ಷ್ಮಿ ಪುಟ್ಟಿ

Don`t copy text!