ಬೆಳಕು

ಬೆಳಕು

ಜಗಮಗಿಸುವ ಅರಮನೆ
ಬೆಳಕೆಲ್ಲಾ ಕತ್ತಲೆಂದು ಬ್ರಮಿಸಿ
ಬೆಳಕನರಸಿ ಹೊರಟನವ…. !

“ನಿಲ್ಲು….!
ನನ್ನೇರಡೂ ಕಣ್ಣುಗಳು
ಪ್ರೇಮದ ದೀಪಗಳು….!
ಕಣ್ಣಲ್ಲಿ ಕಣ್ಣಿಟ್ಟು ನೊಡು…
ಜೀವನದ ಬೆಳಕು ನಾನು….”
ಅವಳೆಂದಳು.

“ನೀನು ಬೆಳಕಲ್ಲಾ ಬರಿ ಭ್ರಮೆ….!”
ಅವನೆಂದ.

“ತಡೆಯಲಾರೆ…! ಬೆಂಬತ್ತಿ ಬರಲಾರೆ…!
ನಿಜದ ಬೆಳಕ ಕಂಡೆನಾನು….!!
ನನಗಿಷ್ಟು ಸಾಕು ಈ ಬದುಕು
ಸವೆಸುವುದಕೆ”

“ನಿಲ್ಲು…ಕತ್ತಲೆಯ ರಾತ್ರಿಗೆ ಬೆಳಕಿನೊಡೆಯ ನಾನು..!
ಬೆಳಕು ನಾನು…!”

“ನೀನು ಬೆಳಕಲ್ಲಾ ಬರಿ ಭ್ರಮೆ…..!!”

“ನಿನ್ನ ದಾರಿಯಲಿ ಕಂದೀಲವಾಗಿ ನಾನು ಬರುವೆ “ಎಂದು ಜೊತೆಯಾದ
ನಗುತಾ ಚಂದ್ರ ಅವನೀಗೂಬೆಳಕು ಕಾಣುವ ಆತುರ…..!!

ಮೂಡಣದಿ ಅವಸರಿಸಿ
ಬಂದ ಸೂರ್ಯ …
“ಇಗೋ… ಜಗಕೆ ಬೆಳಕಿನೊಡೆಯ ನಾನು ….!”

“ನೀನು …. ಬರಿ ಭ್ರಮೆ….!!”

“ನಡೆ ನಿನ್ನೊಡನೆ ನಾನು ಬರುವೆ
ನಿಜ ಬೆಳಕು ನನಗೂ ಕಾಣುವುದಿದೆ…!”
ಮುನಿಸಿಕೊಂಡು ಅವನ ಹಿಂಬಾಲಿಸಿದ ಸೂರ್ಯ…..!

“ಬೆಳಕು ….! ಬೆಳಕು….!”
ಬೆಳಕನರಸಿ ಹೊರಟವನ…..
ಆತ್ಮ ದಲ್ಲಿ ಬೆಳಕು….!!
ಜ್ಞಾನದ ಬೆಳಕು…!!

ಮಂದಸ್ಮಿತ ನಗುವಲಿ ಆತ್ಮ ಬೆಳಕನು
ತೊರಿದವನ ಕಂಡು
ಸಾರ್ಥಕ ವಾಯಿತು ನಮ್ಮನಡೆ
ನಿನ್ನೊಡನೆ ಎಂದು ನಸುನಕ್ಕರು
ಸೂರ್ಯ ಚಂದ್ರರು….!!

ನಿಂತಿಲ್ಲಾ… ಬೆಳಕನರಸುವ ಆಟ.!
ಕತ್ತಲೆಯನೆ ಬೆಳಕೆಂದು ಭ್ರಮಿಸುವ
ಕೂಟ….!
ಆಸೆಗಳ ಒಡನಾಟ….!
ಭ್ರಮನಿರಸಗೊಂಡಾಗ ನೆನಪಾಗುವೆ ನೀನು …..!
ಬೆಳಕಾಗುವೆ ನೀನು…!!
ನಿನಲ್ಲವೆ ನಿಜ ಬೆಳಕು….!!


✒️ಡಾ. ನಿರ್ಮಲಾ ಬಟ್ಟಲ
ಬುದ್ದ ಪೂರ್ಣೀಮಾ ಶುಭಾಶಯಗಳು

Don`t copy text!