ಕೊವಿಡ್ ಆರೈಕೆ ಕೇಂದ್ರಕ್ಕೆ ಶಾಸಕ ಆರ್. ಬಸನಗೌಡ ಭೇಟಿ
ಮಸ್ಕಿ : ಕಳಪೆ ಊಟ ನೀಡದಂತೆ ಅಧಿಕಾರಿಗಳಿಗೆ ತಾಕಿತು
e-ಸುದ್ದಿ, ಮಸ್ಕಿ
ಮಸ್ಕಿ : ಕೊರೊನಾ ಸೋಂಕಿನಿಂದ ಕೊವಿಡ್ ಆರೈಕೆ ಕೇಂದ್ರಕ್ಕೆ ದಾಖಲಾಗಿರುವ ರೋಗಿಗಳಿಗೆ ಗುಣಮಟ್ಟದ ಉಪಹಾರ ಮತ್ತು ಊಟ ನೀಡಬೇಕು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಆಧಿಕಾರಿಗಳು ಸೂಚಿಸಿದರು.
ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಅರಂಭಿಸಲಾಗಿರುವ ಕೊವಿಡ್ ಆರೈಕೆ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ನಂತರ ಆಧಿಕಾರಿಗಳೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಗುಣಮಟ್ಟದ ಉಪಹಾರ ಮತ್ತು ಊಟ ನೀಡುತ್ತಿಲ್ಲ ಎಂದು ಅನೇಕರು ದೂರಿದ್ದಾರೆ. ಕೊವಿಡ್ ಸೆಂಟರ್ ಗೆ ಯಾವುದೇ ಹಣಕಾಸಿನ ಕೊರತೆ ಇಲ್ಲಾ. ಆದರೂ ಕಳಪೆ ಊಟ ಯಾಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕೊವಿಡ್ ಆರೈಕೆ ಕೇಂದ್ರದಲ್ಲಿ ಅಡಿಗೆ ಮಾಡುವವರನ್ನು ನೇಮಿಸಿ, ಖಾನಾವಳಿ ಊಟ ತರಿಸೋದು ನಿಲ್ಲಿಸಿ ಎಂದು ಸೂಚಿಸಿದರು.
ಕೇಂದ್ರಸ ಸುತ್ತ ಸ್ಚಚ್ಚತೆ ಎಂಬುದು ಇಲ್ಲಾ , ಪುರಸಭೆ ಮುಖ್ಯಾಧಿಕಾರಿಗಳು ಗಮನ ಹರಿಸಿ ಸ್ವಚ್ಚತೆ ಹೆಚ್ಚಿನ ಒತ್ರು ನೀಡಿ ಎಂದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ವೈದ್ಯಾಧಿಕಾರಿಗಳಾದ ಡಾ.ಮೌನೇಶ ಡಾ. ಮಲ್ಲಿಕಾರ್ಜುನ ಇತ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹನುಮಂತಪ್ಪ ಮುದ್ದಾಪೂದ, ಶ್ರೀಶೈಲಪ್ಪ ಬ್ಯಾಳಿ, ಮೈಬುಸಾಬ ಮುದ್ದಾಪೂರ, ಶರಣಪ್ಪ ಎಲಿಗಾರ, ಶಿವು ಬ್ಯಾಳಿ ಇತರರು ಇದ್ದರು
ಆಸ್ಪತ್ರೆ ಬೇಟಿ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಆರ್. ಬಸನಗೌಡ ಆಸ್ಪತ್ರೆ ಸಮಸ್ಯೆಗಳ ಕುರಿತು ವೈದ್ಯರೊಂದಿಗೆ ಚರ್ಚಿಸಿದರು.
ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಮುಖಂಡರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು