ಸರಕಾರ ಪ್ಯಾಕೇಜ್ ಪೋಷಣೆಯಲ್ಲಿ ತಾರತಮ್ಯ :- ಆನಂದ್ ವೀರಾಪುರ್ ಆರೋಪ
e-ಸುದ್ದಿ, ಮಸ್ಕಿ
ಲಾಕ್ ಡೌನ ಸಂದರ್ಭದಲ್ಲಿ ದುಡಿಯುವ ವರ್ಗಕ್ಕೆ ಆರ್ಥಿಕ ಸಹಾಯವನ್ನು ಸರ್ಕಾರ ಘೋಷಿಸಿದ್ದುನ್ನು ಸ್ವಾಗತಿಸುತ್ತೇವೆ. ಆದರೆ ಎಲ್ಲಾ ದುಡಿಯುವ ಸಮುದಾಯಕ್ಕೆ ಕಟ್ಟಕಡೆಯ ವ್ಯಕ್ತಿಗೂ ವಿಸ್ತರಿಸ ಬೇಕಿತ್ತು ಆದರೆ ಮುಖ್ಯಮಂತ್ರಿಗಳು ಘೋಷಿಸಿದ ಪ್ಯಾಕೇಜಿನಲ್ಲಿ ನೇಕಾರ ಸಮುದಾಯ ಹಾಗೂ ಕುರು ಗಾಯಿಗಳು, ಕಾಡು ಕುರುಬರು, ಜೇನು ಕುರುಬರು, ಆಶಾ ಕಾರ್ಯಕರ್ತೆಯರು, ಹಾಗೂ ಇನ್ನಿತರ ದುಡಿಯುವ ಕೈಗಳಿಗೆ ಆರ್ಥಿಕ ನೆರವನ್ನು ಘೋಷಿಸಲು ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆನಂದ ವೀರಾಪುರ ತಿಳಿಸಿದ್ದಾರೆ.
ಎರಡನೇ ಅಲೆಯ ಆರ್ಥಿಕ ಪ್ಯಾಕೇಜಿನಲ್ಲಿ ಎಲ್ಲಾ ದುಡಿಯುವಸ ಮುದಾಯಗಳಿಗೆ ಆರ್ಥಿಕ ನೆರವನ್ನು ಘೋಷಿಸುವಂತೆ ಆಗ್ರಹಿಸಿದರು.
ಸರಕಾರ ಪ್ಯಾಕೇಜ್ ಘೋಷಣೆ ಮಾಡಿದ 7 ದಿನಗಳು ಕಳೆದರು ಸೇವಾ ಸಿಂಧು ತಂತ್ರಾಂಶದಲ್ಲಿ ಅಳವಡಿಸಲಾಗಿಲ್ಲ ಇದರ ಅರ್ಥ ಸರ್ಕಾರದ ಆದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಅಥವಾ ಸರ್ಕಾರವೇ ನಿರ್ಲಕ್ಷಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.