ಚನ್ನಬಸವನನ್ನು ಹುಡುಕಿ ಕೊಡಿ, ಕುಟುಂಬಕ್ಕೆ ಪರಿಹಾರ ಕೊಡಿ

ಮಸ್ಕಿ : ಪ್ರವಾಹಕ್ಕೆ ಸಿಕ್ಕ ಚನ್ನಬಸವನನ್ನು ರಕ್ಷಣೆ ವಾಡುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರ ಮಸ್ಕಿಯ ಅಶೋಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರವಾಹಕ್ಕೆ ಸಿಲುಕಿದ್ದ ಚನ್ನಬಸವನನ್ನು ರಕ್ಷಣೆ ಮಾಡುವಲ್ಲಿ ಸರಿಯಾದ ಮುಂಜಾಗೃತಾ ಕ್ರಮ ಕೈಗೊಳ್ಳಲಿಲ್ಲ. ರಕ್ಷಣೆ ಹೋಗಿದ್ದ ಇಬ್ಬರಿಗೆ ಮಾತ್ರ ಜಾಕೇಟ್ ನೀಡಲಾಗಿತ್ತು. ಚನ್ನಬಸವನಿಗೆ ಜಾಕೇಟ್, ಟ್ಯೂಬ್ ಸೇರಿದಂತೆ ಯಾವುದೇ ಜೀವ ರಕ್ಷಕಾ ಸಲಕರಣೆಗಳು ಒದಗಿಸದೆ ಇರುವುದು ತಾಲ್ಲೂಕು ಆಡಳಿತದ ವೈಫಲ್ಯಕ್ಕೆ ಉಧಾರಣೆ ಎಂದರು.
ಚನ್ನಬಸವ ಪ್ರವಾಹಕ್ಕೆ ಕೊಚ್ಚಿ‌ ಹೋಗಿ 24 ಗಂಟೆಯಾದರೂ ಇನ್ನೂ ಆತನ ಪತ್ತೆಯಾಗಿಲ್ಲ‌. ಇಲ್ಲಿಯೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಶೀಘ್ರ ಚನ್ನಬಸವನ ಪತ್ತೆ ಮಾಡಬೇಕು ಹಾಗೂ ಪ್ರವಾಹಕ್ಕೆ ಕೊಚ್ಚಿಹೋದ ಚನ್ನಬಸವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಘಟನೆಗಳ‌‌ ಮುಖಂಡ ಅಶೋಕ ಮುರಾರಿ, ದುರ್ಗರಾಜ್ ವಟಗಲ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಜಯ ಬಡಿಗೇರ್, ಬಸವರಾಜ ಉದ್ಬಾಳ,‌ ಅನೀಲಕುಮಾರ, ಮಲ್ಲಪ್ಪ ಗೋನಾಳ, ಸಂತೋಷದಿನ್ನಿ ದೇವರಾಜ ಮಡಿವಾಳರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು

Don`t copy text!