ಹಡಪದ ಅಪ್ಪಣ್ಣ

ಹಡಪದ ಅಪ್ಪಣ್ಣ

ದಿಟ್ಟ ಶರಣನ ಎಷ್ಟು ಸ್ಮರಿಸಿದರು ಸಾಲದು ನೋಡಣ್ಣ.
ಕಾಯಕದಲ್ಲಿ ದೇವರು ಕಂಡರು ನಿಜಸುಖಿ ಅಪ್ಪಣ್ಣ.

ಹನ್ನೆರಡನೇ ಶತಮಾನವು ಶರಣರ ಯುಗವು ನೋಡುತ್ತಾ.
ಕತ್ತಲೆ ಕಳೆದು ಬೆಳಕು ಹಚ್ಚಿದ ಜಗಜ್ಯೋತಿ ಬಸವಣ್ಣ.
ಅಲ್ಲಿ ಇಲ್ಲಿ ಎಲ್ಲಾ ಕಡೆಯಿಂದ ಶರಣರ ಆಗಮನಣ್ಣಾ
ಜಾತ್ಯತೀತ ಶರಣರ ಸಂಗಮದ ಜ್ಞಾನದ ಜಾತ್ರೆ ನೋಡಣ್ಣಾ.!!೧!!

ವೇದ‌ ಶಾಸ್ತ್ರಗಳ ಓದಿಕೊಂಡಿದ್ದ ಬಹಳ ನಿಪುಣನಣ್ಣಾ.
ನಿಜ ತತ್ವದಲ್ಲಿ ಮಾಡಿ ಹೋಗಿದ್ದರೂ ನಿಜಸುಖಿ ಅಪ್ಪಣ್ಣ
ಅಣ್ಣ ಬಸವಣ್ಣನಿಗೆ ಆಸ್ತಿಕ ಸೇವಕ ಭಕ್ತನು ನೋಡಣ್ಣಾ
ಜ್ಞಾನಿಯಲ್ಲಿ ಮಹಾಜ್ಞಾನಿಯಾಗಿದ್ದ ಹಡಪದ ಅಪ್ಪಣ್ಣ.!!

ಬಸವಣ್ಣನಿಗೆ ಅಚ್ಚುಮೆಚ್ಚಿನ ಶರಣನಾಗಿದ್ದ ಅಪ್ಪಣ್ಣ.
ಅನುಭವದಲ್ಲಿ ಮೇರು ಪರ್ವ ಗರ್ವವು ಇಲ್ಲಣ್ಣಾ.
ಮಹಾಮಂಟಪದಲ್ಲಿ ಸಲಹೆ ಸೂಚನೆ ನೀಡುತ್ತಿದ್ದನಣ್ಣಾ
ಸದಾಕಾಲ ಬಸವಣ್ಣನನ್ನು ಹಿಂಬಾಲಿಸುತ್ತಿದ್ದ ಅಪ್ಪಣ್ಣ.!!

ಕಾಯಕದಲ್ಲಿ ಭೇದ ಕಾಣಲಿಲ್ಲ ಎಂಥ ಶರಣನಣ್ಣ
ನಿಜ ಕಾಯಕದಲ್ಲಿ ತೃಪ್ತಿಪಡುತ್ತಿದ್ದ ಹಡಪದ ಅಪ್ಪಣ್ಣ
ಅಲ್ಲಮಪ್ರಭು ಎಲ್ಲ ಶರಣರಿಗೆ ಅಚ್ಚುಮೆಚ್ಚಿನ ಅಪ್ಪಣ್ಣ
ಬಸವ ಗಂಗಾ ನೀಲಾಂಬಿಕೆಗೆ ಪ್ರೀತಿಗೆ‌ ಈತ ಹಿರಿಯಣ್ಣ

ಶರಣರ ಜೊತೆಗೆ ಬೆರೆತು ಬರೆದನು ವಚನವು ನೋಡಣ್ಣಾ
ಪತಿಗೆ ತಕ್ಕಂತೆ ಸತಿ ಇದ್ದಳು ಶ್ರೇಷ್ಠ ಲಿಂಗಮ್ಮ
ಕೂಡಲ ಸಂಗನ ರೂಪದಿ ಕಂಡರು ಇವರನ್ನು ನೋಡಣ್ಣಾ
ಕಂದ ಪಂಪಯ್ಯನ ಕವನಕೆ ಸ್ಪೂರ್ತಿ ಹಡಪದ ಅಪ್ಪಣ್ಣ

ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು

2 thoughts on “ಹಡಪದ ಅಪ್ಪಣ್ಣ

  1. ಕ್ರಾಂತಿಕಾರಿ ಜಾತ್ಯತೀತ ಜಗಜ್ಯೋತಿ ಬಸವಣ್ಣರ ಅನುಯಾಯಿ ಹಡಪದ ಅಪ್ಪಣ್ಣ ನವರಿಗೆ ನಮಿಸುತ್ತಾ ನಿಮ್ಮ ಅರ್ಥಗರ್ಭಿತವಾದ ಕವನಕ್ಕೆ ಅಭಿನಂದನೆಗಳು.

    ಆರ್. ಪ್ರಕಾಶ್.

Comments are closed.

Don`t copy text!