ಅರಿವಿನ ಗುರು ಗುರುಮಹಾಂತರು
ಅರಿವಿನಾ ಸದ್ಗುರು ಪೂಜ್ಯ ಗುರು ಮಹಾಂತರು
ಗುರುವಿನಾ ಸ್ಥಾನಕ್ಕೆ ಪೂಜ್ಯತೆಯ ತಂದವರು
ಗುರುವಿನಾ ಅನನ್ಯ ಭಕ್ತಿ ಸೇವೆ ಗೈದವರು
ಅಪ್ಪನನ್ನೆ ಮಗುವಂತೆ ಆರೈಕೆಗೈದವರು ||
ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಇವರು
ಅಗಾಧ ನೆನಪಿನ ಶಕ್ತಿಯ ಜ್ಞಾನದಾ ಖಣಿ ಇವರು
ವಿಶಿಷ್ಠ ಮಾತಿನಾ ಶೈಲಿಯ ಚತುರರಿವರು
ಸರಳ ಜೀವನ, ಉನ್ನತ ಚಿಂತನೆಯ ಜ್ಞಾನಿ ಇವರು||
ಸೇವೆಯಲಿ ದಣಿವರಿಯದ ಕಾಯಕ ನಿಷ್ಟರಿವರು
ಜನಸಾಮಾನ್ಯರ ಹೃದಯಕ್ಕೆ ಹತ್ತರವಾದವರು
ಅಜ್ಞಾನ ಅಳಿಸಿ ಸುಜ್ಞಾನ ಮಾರ್ತೋಗರುವವರು
ತಂದೆ ತಾಯಿಯಾ ಪುಣ್ಯದಾ ಪ್ರತಿರೂಪ ಇವರು||
ಎಲ್ಲ ಪೂಜ್ಯರ ಹೃದಯ ಗೆದ್ದ ಮಹಾಂತರಿವರು
ಅಪ್ಪನ ದಾರಿಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಿವರು
ಬಸವ ಬೇರಿಗೆ ಅರಿವು ಅನುಭಾವದ ನೀರೆರೆದವರು
ಆ ಹೆಮ್ಮರದ ನೆರಳಲ್ಲಿ ಸಮಾಜ ಬೆಳೆಸುವವರು||
ಬಸವತತ್ವದ ಬೆಳಕ ಹರಡುವಲ್ಲಿ ಸೀಮಾತೀತರು
ಆ ದಾರಿಯಲಿ ಭಕ್ತರನು ಮುನ್ನಡೆಸುವವರು
ಭಕ್ತರಿಗೆ ಮುಕ್ತಿ ಮಾರ್ಗವಾ ತೋರುವವರು||
ಸಾಗರದಷ್ಟು ಸದ್ಗುಣದ ಕರುಣೆಯುಳ್ಳವರು
ಅಗೆದಷ್ಟು ಆಳದ ಬಹುಮುಖ ಪ್ರತಿಭೆಯವರು
ವಿಸ್ತರಿಸಿದಷ್ಟು ವಿಶಾಲ ದಯಾ ಹೃದಯದವರು
ಮೃದು ಮನಸ್ಸಿನ ಮಗುವಿನ ನಗುವಿನವರು ||
ಇಲಕಲ್ಲ ಮಠಕ್ಕೆ ವರವಾಗಿ ಬಂದ ಸದ್ಗುರು ಇವರು
ಇವರೆ ನಮ್ಮ ಪರಮ ಪೂಜ್ಯ ಗುರುಮಹಾಂತರು
ಮಹಾಂತ ಚೇತನದ ಸಾಕಾರ ಮೂರ್ತಿ ಇವರು.
ಇವರು ನೂರ್ಕಾಲ ಬಾಳಲೆಂದು ಬಯಸುವವರು
ನಾವೆಲ್ಲಾ ಅಕ್ಕನ ಬಳಗದ ಸದಸ್ಯರು ||
–ಸವಿತಾ ಎಮ್ ಮಾಟೂರು, ಇಲಕಲ್ಲ