ಆಯ್ದಕ್ಕಿ ಮಾರಯ್ಯ
ಶರಣರಲ್ಲೊಬ್ಬ
ಶರಣ
ಶ್ರಮ ಸಂಸ್ಕ್ರತಿ ಗಟ್ಟಿಗ
ದುಡಿದು ಹಂಚುವ ದಾಂಡಿಗ
ಸತ್ಯ ಸಮತೆಯ ಯೋಧ
ಅಂದಂದಿನ ಕಾಯಕ ಅಂದಂದು
ಶುದ್ಧರಾಗಬೇಕೆಂದ
ಶರಣ ;
ಲಿಂಗ ಜಂಗಮ ನಿಷ್ಠೆ
ತೋರಿದ ಶರಣ ;
ಅಮರೇಶ್ವರಲಿಂಗ
ನಾಮವ ಹೊಂದಿದ
ಶರಣ ;
ಕಾಯಕದಲ್ಲಿ ನಿರತನಾದರೆ
ಗುರುದರ್ಶನವಾದರೂ
ಮರೆಯಬೇಕೆಂದ ;
ಜಂಗಮ ಮುಂದಿದ್ದರೂ
ಹಂಗು ಹರೆಯ ಬೇಕೆಂದ;
ಕಾಯಕನಿಷ್ಠೆಯ ಜಗಕೆ
ತೋರಿದ ಶರಣ;
ಬೇರಾರೂ ಅಲ್ಲ
ಆತ
ಆಯ್ದಕ್ಕಿ ಮಾರಯ್ಯ
ಶರಣರಲ್ಲೊಬ್ಬ
ಶರಣ
–ಮಂಜುಳಾ ಅಂಗಡಿ ಬಾಗಲಕೋಟೆ