ಹೆಸರಿಲ್ಲದ ಸಂಬಂಧಗಳು
ಕಾರ್ಮೋಡ ಗುಡುಗು ಮಳೆ
ಮಿಂಚಿ ಮರೆಯಾಗುವವು
ಹೆಸರಿಲ್ಲದ ಸಂಬಂಧಗಳು
ಭೋರ್ಗರೆವ ಕಡಲು ಭಾವ
ಅಲೆಯಾಗಿ ಅಪ್ಪಳಿಸುವವು
ದಡವನ್ನೆ ಕೊಚ್ಚಿ ಹಾಕಿ
ತುಂಬಲಾಗದ ಕಂದರಗಳ
ಬಿಟ್ಟು ಹೊಗುವವು
ತಿಳಿ ಸುಳಿಗಾಳಿಯಂತೆ
ಸುತ್ತುತ್ತ ಮನವನಾವರಿಸಿ
ತಂಪು ನೀಡುವ ಸ್ನೇಹ
ಕತ್ತಲಾದ ಮನಕೆ
ಬೆಳಕಿನ ಭರವಸೆಯ ಕಿರಣ
ಮನದಲಿ ಬಿರುಗಾಳಿಯಾಗಿ
ತಾಂಡವ ಸೃಷ್ಟಿಸುವವು
ಲೈಕ್ ಕಮೆಂಟಗೆ ಸೀಮಿತ
ಮುಖವಿಲ್ಲದ ಸಂಬಂಧಗಳು
ಸುತ್ತಿ ಬಳಸಿ ಜೀವನದ
ಅವಿಭಾಜ್ಯ ಅಂಗಗಳಾಗುವ
ಹಿತ ನೀಡುವ ಮುದ ಕೊಡುವ
ಹೆಸರಿಲ್ಲದ ಈ ಸಂಬಂಧಗಳು
–ರಾಜನಂದಾ ಘಾರ್ಗಿ ಬೆಳಗಾವಿ