ಮಸ್ಕಿ: ಮಸ್ಕಿ ಜಲಾಶಯಕ್ಕೆ ಮತ್ತೆ ಒಳ ಹರಿವು ಹೆಚ್ಚಾಗುತ್ತಿದೆ. ಕುಷ್ಟಗಿ ಭಾಗದಲ್ಲಿ ಅಧಿಕ ಮಳೆಯಾಗುತ್ತಿರುವ ಪರಿಣಾಮ ಮಸ್ಕಿ ಜಲಾಶಯಕ್ಕೆ ಹೆಚ್ಚು ನೀರು ಬರತೊಡಗಿದೆ.
ಮಂಗಳವಾರ ಮದ್ಯರಾತ್ರಿಯಿಂದ ಮಸ್ಕಿ ಹಳ್ಳಕ್ಕೆ ಒಂದು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿ ಎಂದು ಇಂಜಿನಿಯರ ದಾವುದ ತಿಳಿಸಿದ್ದದಾರೆ
ಮಸ್ಕಿ ಹಳ್ಳದಲ್ಲಿ ಮತ್ತೆ ಹೆಚ್ವಿದ ಪ್ರವಾಹ ಭೀತಿ
ಜಲಾಶಯಕ್ಕೆ ಹೊರ ಹರಿವು ಎರಡು ಸಾವಿರ ಕ್ಯೂಸೆಕ್ ಗೆ ಹೆಚ್ವುವ ಸಾದ್ಯತೆ ಇದೆ. ಇದರಿಂದ ಹಳ್ಳಕ್ಕೆ ನೀರು ಬಿಡಲಾಗುತ್ತದೆ.
ಹಳ್ಳದಲ್ಲಿ ಪ್ರವಾಹ ಹೆಚ್ಚುತ್ತಿರುವ ಕಾರಣ ಎರಡು ದಿನಗಳ ಹಿಂದೆ ಪ್ರವಾಹಕ್ಕೆ ಕೊಚ್ವಿ ಹೋಗಿದ್ದ ಚನ್ನ ಬಸವನ ಶೋಧ ಕಾರ್ಯಕ್ಕೆ ಅಡ್ಡಿಯಾಗಲಿದೆ.
ಮಸ್ಕಿ ಹಳ್ಳಕ್ಕೆ ಹೆಚ್ಚಿನ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ತಾಲ್ಕೂಕಿನ ಹಿರೇಕಡಬೂರು ಹಾಗೂ ಚಿಕ್ಕ ಕಡಬೂರ ಗ್ರಾಮಕ್ಕೆ ಸಂಪರ್ಕ ಕಲ್ಲಿಸುವ ಸೇತುವೆ ಮುಳಗಡೆ ಆಗುವ ಸಾಧ್ಯತೆ ಇದೆ.
ಮಸ್ಕಿ ಜಲಾಶಯದಿಂದ ಹೊರ ಹರಿವು ಹೆಚ್ವುತ್ತಿದ್ದರಿಂದ ಹಳ್ಳದ ದಂಡೆಯ ಅಕ್ಕ ಪಕ್ಕದ ಗ್ರಾಮಸ್ಥರು ಹಳ್ಳದಲ್ಲಿ ಇಳಿಯದಂತೆ ತಾಲ್ಲೂಕು ಆಡಳಿತ ಮನವಿ ಮಾಡಿದರು.
ಪತ್ತೆಯಾಗದ ಚನ್ನಬಸವ : ಎರಡು ದಿನಗಳ ಹಿಂದೆ ಮಸ್ಕಿ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಚನ್ನಬಸವ ಇನ್ನೂ ಪತ್ತೆಯಾಗಿಲ್ಲ
ತಾಲ್ಲೂಕು ಆಡಳಿತ ಮೂರು ತೆಪ್ಪಗಳ ಹಾಗೂ ಈಜು ತಜ್ಞರೊಂದಿಗೆ ಶೋಧ ನಡೆಸಿದ್ದಾರೆ.