ಮಸ್ಕಿ ಬಳಿ ಕಾರು ಅಪಘಾತ ಒಬ್ಬರ ಸಾವು

ಮಸ್ಕಿ : ಲಿಂಗಸಗೂರು ಕಡೆಯಿದ ಸಿಂಧನೂರು ಕಡೆ ಹೊರಟಿದ್ದ ಕಾರ್ ಗೆ ಹಿಂದುಗಡೆಯಿಂದ ಬರುತ್ತಿದ್ದ ಮತ್ತೊಂದು ಕಾರ್ ಹಿಂಬದಿ ಡಿಕ್ಕಿ ಹೊಡೆದಿದ್ದರಿಂದ‌ ಒರ್ವ ವ್ಯಕ್ತಿ ಮೃತಪಟ್ಟ ಘಟ‌ನೆ ಮಂಗಳವಾರ ನಡೆದಿದೆ.

ಪಟ್ಟಣದ ಲಿಂಗಸುಗೂರು ರಸ್ತೆಯ ಈಶಾನ್ಯ ಸಾರಿಗೆ ಡಿಪೋ ಬಳಿ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿ ಸದಾನಂದಪ್ಪ (55) ಲಿಂಗಸುಗೂರು ನಿವಾಸಿ ಎಂದು ಗುರುತಿಸಲಾಗಿದೆ. ಮೂಲತಹಃ ಸುರುಪರ ತಾಲೂಕಿನ ಕಾಮನಟಗಿ ಗ್ರಾಮದವರು.

ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಸದಾನಂದಪ್ಪ ಲಿಂಗಸುಗೂರಿನಲ್ಲಿ ಕಳೆದ ಬುಧವಾರ ಅವರ ತಾಯಿ‌ ಸಾವನ್ನಪಿದ್ದರಿಂದ ಲಿಂಗಸುಗೂರಿಗೆ ಬಂದಿದ್ದರು.

ತಾಯಿಯ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ಪತ್ನಿ ಜೊತೆ ವಾಪಾಸು ಬೆಂಗಳೂರಿಗೆ ಹೋಗುವಾಗ ಈ ಘಟನೆ ನಡೆದಿದೆ.108 ವಾಹನ ತರಿಸಿ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದಾನೆ‌.

ಸ್ಥಳಕ್ಕೆ ಸಬ್ ಇನ್ ಸ್ಪೆಕ್ಟರ್ ಸಣ್ಣ ವೀರೇಶ ಬೇಟಿ ನೀಡಿ ಪರಿಶೀಲನೆ ನಡೆಸಿದರು.

 

Don`t copy text!