ಬಸವಣ್ಣ
ನೀ ಎಂದೂ
ಮರೆಯಾಗುವನಲ್ಲ
ಬಸವಣ್ಣ….
ರೈತರ ಉಸಿರು
ಉಸಿರಾಗ ಬೆರೆತಿದಿ….
ಗರತಿಯರ ಹಾಡಾಗಿ
ಉಲಿದಿದಿ…
ಮಕ್ಕಳ ಹೆಸರಾಗಿ
ಉಳದಿದಿ….
ಊರಮುಂದಿನ
ತೇರಾಗ ಕುಂತಿದಿ….
ಹಳ್ಳಿಮಂದಿ ಎದಿಯೊಳಗ
ಹಚ್ಚ ಹಸಿರಾಗಿದಿ..
ಸ್ವಚ್ಚ ಹರಿವ ನೀರಾಗಿದಿ…..
ಕುಂತ್ರ ನಿಂತ್ರ ಬಸವಾ…, ಬಸವಾ…
ಎನ್ನುತ ಕಾಯಕ
ಮಾಡುವವರಿಗಿ ಆಸರಾಗಿದಿ……
ಹಂಚಿಕೊಂಡು ತಿನ್ನುವ
ಬುತ್ತಿ ಗಂಟಿನೋಳಗ
ದಾಸೋಹ ಆಗಿದಿ….
ನೀ ಎಂದೂ
ಮರೆಯಾಗುವವನಲ್ಲ
ಬಸವಣ್ಣಾ
ಜನಮಾನಸದೊಳಗ
ಬೆರೆತು ಒಂದಾಗಿರುವವನು…..!!
–ಡಾ.ನಿರ್ಮಲಾ ಬಟ್ಟಲ