ಪುಸ್ತಕ ಪರಿಚಯ
ಕೃತಿ-.ದೇಶದ ಚಿತ್ತ ಯುವಜನರತ್ತ
ಲೇಖಕರು- ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ.
ಈ ಪುಸ್ತಕ ಓದುವಾಗ ನಿಜಕ್ಕೂ ಅದ್ಭುತ ಅನುಭವ ನೀಡುತ್ತದೆ.
ಇಂದಿನ ಯುವ ಜನಾಂಗ ಹೇಗೆ ಅವರ ಜೀವನ ಶೈಲಿ ಇರಬೇಕು ಹೇಗೆಲ್ಲಾ ಗುರಿಯನ್ನು ಸಾಧಿಸಲು ಸಾಧ್ಯ ಎಂಬುದನ್ನು ಈ ಕೃತಿಯಲ್ಲಿ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಪುಸ್ತಕ ಇದಾಗಿದ್ದು ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಈ ಪುಸ್ತಕ ಯಶಸ್ವಿ ಯಾಗಿದೆ.
ಲೇಖಕರು ತಮ್ಮ ಅನುಭವದ ಅಮೃತ ಇಲ್ಲಿ ಎಳೆಯ ಮನಸ್ಸುಗಳಿಗೆ ಉಣ ಬಡಿಸಿರುವರು. ಕಾರ್ಯಕ್ರಮ ಒಂದರಲ್ಲಿ ಪ್ರೊ. ಶಿವರಾಜ್ ಪಾಟೀಲ್ ಅವರಿಂದ ಈ ಪುಸ್ತಕ ಪಡೆದುಕೊಂಡು ಎರಡೇ ದಿನದಲ್ಲಿ ಪುಸ್ತಕ ಓದಿ ಆನಂದಿಸಿದೆ.
ಶ್ರೀ ಅರಳಿನಾಗರಾಜ ಅವರ ಬಗ್ಗೆ ಹೆಮ್ಮೆ ಇದೆ. ಈ ಪುಸ್ತಕ ಓದಿದ ಮೇಲೆ ಅದು ಇಮ್ಮಡಿಯಾಯಿತು. ತಮ್ಮಅನುಭವದ ಮಾತು ಹಾಗೂ ತಾವು ಮಾಡಿದ ಸಾಧನೆಯ ಮೂಲದ ಗುಟ್ಟು ಇಲ್ಲಿ ಹೇಳಿದ್ದಾರೆ.
ನನ್ನ ನುಡಿಯಿಂದ ಹುತಾತ್ಮ ಭಗತ್ ಸಿಂಗ್ ತನಕವೂ ಒಂದೊಂದು ಕ್ಷಣವೂ ಯುವ ಜನತೆಗೆ ಉತ್ಸಾಹ ತುಂಬುವ ಕೆಲಸ ಮಾಡಲು ಯತ್ನಿಸುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ನೋಡಿದವರಿಗೆ ಅಚ್ಚರಿಯ ಮೂಡಿಸುವ ಪುಸ್ತಕ ಇದಾಗಿದೆ.
ಸಾಲು ಸಾಲು ಇಲ್ಲಿ ಚೈತನ್ಯವನ್ನು ಅಷ್ಟೇ ಅಲ್ಲದೆ ಯೋಚನಾ ಲಹರಿ ಪೂರ್ತಿಯಾಗಿ ಬದಲು ಮಾಡುವ ಪ್ರಕ್ರಿಯೆ ಇಲ್ಲಿದೆ. ಹೊಸ ಬೆಳಕು ನೀಡುವ ಕುರಿತು ಚರ್ಚೆ ನಡೆಸಿ ಕಾಡುವ ಅನೇಕ ಬಗೆಯ ಸವಾಲುಗಳಿಗೆ ಉತ್ತರ ನೀಡುವ ಸಲುವಾಗಿ ಈ ರೀತಿಯ ಪುಸ್ತಕ ಹೊರ ಜಗತ್ತಿಗೆ ಬಂದಿದೆ ಎಂದರೆ ತಪ್ಪಲ್ಲ.
ಅದರಲ್ಲೂ ವಿಶೇಷವಾಗಿ ಯಶಸ್ವಿ ನಾಯಕ ಹೇಗಿರಬೇಕು ಎನ್ನುವುದು ಈ ಪುಸ್ತಕದಲ್ಲಿ ಕಾಣಬಹುದು. ಯುವಕರ ದಂಡು ಬದಲಾಯಿಸಿ ಹೊಸ ಕನಸು ಕಾಣಲು ಸಾಧ್ಯ ಎಂಬುದನ್ನು ಸೂಚಿಸುತ್ತದೆ.
*ನಡೆನುಡಿಗಲ್ಲಿ ಅಂತರ ಇಲ್ಲದೆ ಇರುವುದು
*ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೇ ಸ್ವಾತಂತ್ರ್ಯ ಕಾರ್ಯ ನಿರ್ವಹಣೆ .
*ಕಾರ್ಯಗಳನ್ನು ಅಚ್ಚುಕಟ್ಟಾಗಿ ಆಯೋಜಿಸವದು
*ಸದಾ ಒಂದಿಲ್ಲೊಂದು ರೀತಿಯಲ್ಲಿ ಅಧ್ಯಾಯಶೀಲನಾಗಿರುವುದು
*ನೈತಿಕತೆಯ ಬದ್ದವಾಗಿರುವುದು
*ಮತ್ತೊಬ್ಬರ ಅಭಿಪ್ರಾಯ ಗೌರವದಿಂದ ಪರಿಶೀಲಿಸುವುದು
*ತಾಳ್ಮೆಯಿಂದ ವರ್ತಿಸುವದು
*ಜವಾಬ್ದಾರಿಯಿಂದ ವರ್ತಿಸುವದು.
*ಅಪಾಯವನ್ನು ಎದುರಿಸುವ ಸಾಮರ್ಥ್ಯ ಹೊಂದುವುದು
*ಕ್ರಿಯಾಶೀಲತೆ ಹೊಂದಿರುವುದು
*ಅಚಲ ನಂಬಿಕೆ ವಿಶ್ವಾಸ
*ಸರಳ ಜೀವನ ಶೈಲಿ
ಹೀಗೆ ಹಲವಾರು ರೀತಿಯ ಮಾಹಿತಿಗಳ ಸಮೇತ ಯುವಕರಿಗೆ ಆದರ್ಶವಾಗುವ ನಿಟ್ಟಿನಲ್ಲಿ ಕೃತಿ ರಚನೆ ಅಮೋಘವಾಗಿದೆ.
ಯಾರೂಆದರ್ಶ ನಮಗೆ.. ಎಂಬ ಲೇಖನದ ಮೂಲಕ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿದ ಕನ್ನಡಿ ಇದ್ದಂತೆ ಇರುವ ಅನೇಕರನ್ನು ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿದ್ದಾರೆ. ಸಿನಿಮಾದ ನಾಯಕ ನಟ ನಟಿಯರ ಬದಲು ದೇಶ ಕಂಡ ಅಮೋಘ ವ್ಯಕ್ತಿತ್ವ ಹೊಂದಿರುವ ಹೆಗ್ಗಳಿಕೆಗೆ ಪಾತ್ರ ಆದಂತಹ ಅನೇಕರ ಕುರಿತು ಮಾಹಿತಿ ನೀಡಿದ್ದಾರೆ
*ನಾನಾ ಸಾಹೇಬ್ ಪೇಶ್ವೆ ಟೋಪೆ
*ಝಾನ್ಸಿ ರಾಣಿ ಲಕ್ಷ್ಮೀಬಾಯಿ
*ಲಾಲಾ ರಾಜಪಾತರಾಯ
*ಬಾಲಗಂಗಾಧರ ತಿಲಕ್
*ಭಪಿನ್ ಚಂದ್ರ ಪಾಲ್
*ದಾದಬಾಯಿ ನವರೋಜಿ
*ಶ್ರೀ ಅರವಿಂದರು
*ಮಹಾತ್ಮ ಗಾಂಧೀಜಿ
*ಚಂದ್ರಶೇಖರ್ ಅಜಾದ್
ಹೀಗೆ ಹಲವಾರು ಮನ ಮೆಚ್ಚಿದ ನಾಯಕರ ಪರಿಚಯ ಮಾಡಿಕೊಡುವ ಈ ಪುಸ್ತಕ ನಿಜಕ್ಕೂ ಅತ್ಯಂತ ಜನಪ್ರಿಯ.
ನಿವೃತ್ತಿಯ ನಂತರವೂ ಸಮಾಜ
ಪರಿವರ್ತನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸ ಬೆಳಕು ನೀಡುವ ನಿಟ್ಟಿನಲ್ಲಿ ಶ್ರೀ ಅರಳಿ ನಾಗರಾಜ ಸರ್ ಇರುವರು.
ಅನೇಕ ಹಿರಿಯ ನಾಗರಿಕರಿಗೆ ಉತ್ಸಾಹ ತುಂಬುವ ಕೆಲಸ ಮಾಡಲು ಸಿದ್ದರು. ಈ ಸಂದರ್ಭದಲ್ಲಿ ಹುಟ್ಟಿದ ಮತ್ತೊಂದು ವಿಶೇಷ ಕೃತಿ “ಪುನಶ್ಚೇತನ”ಅದ್ಭುತ ಅನುಭವ ನೀಡುತ್ತದೆ. ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ಕರ್ನಾಟಕ ಸರ್ಕಾರ *ಹಿರಿಯ ನಾಗರಿಕ* ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
– ಕವಿತಾ ಮಳಗಿ ಕಲಬುರ್ಗಿ