e-ಸುದ್ದಿ, ಮಸ್ಕಿ
ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಶಾಲ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಬುಧವಾರ ವಿತರಿಸಿದರು.
ಶಾಲೆಗೆ ಭೇಟಿ ನೀಡಿದ ಶಾಸಕ ಬಸನಗೌಡ ತುರ್ವಿಹಾಳ ಶಾಲೆಯ ಕಟ್ಟಡ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರೆಡ್ಡಪ್ಪ ದೇವರಮನಿ ಶಾಸಕರಿಗೆ ಬುದ್ದಿನ್ನಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಿಸುವಂತೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಶಾಲೆಯ ಶಿಕ್ಷಕರು ಹಾಗೂ ಅಭಿವೃದ್ದಿ ಸಮಿತಿ ಸದಸ್ಯರು ಶಾಸಕರನ್ನು ಸತ್ಕರಿಸಿದರು.
ಶಾಲ ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಹನುಮಂತ ಬುದ್ದಿನ್ನಿ, ಸದಸ್ಯರಾದ ಮೌನೇಶ ದೇವರಮನಿ, ರಮೇಶ ಭಜಂತ್ರಿ, ಶಾಲೆಯ ಮುಖ್ಯ ಶಿಕ್ಷಕ ದುರುಗಣ್ಣ ಹೂವಿನಬಾವಿ, ಶಿಕ್ಷಕರಾದ ಕಳಕಪ್ಪ ಹಾದಿಮನಿ, ಆದೇಶ ಸಾನಬಾಳ, ಮಲ್ಲನಗೌಡ ಗುಂಡಗಿ ಹಾಗೂ ಇತರರು ಭಾಗವಹಿಸಿದ್ದರು.