e-ಸುದ್ದಿ, ಮಸ್ಕಿ
ಹಳ್ಳಿಗಳಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸರ್ಕಾರ ಲಾಕ್ ಡೌನ್ ಘೋಷಿಸಿದರು ಸರ್ಕಾರದ ನಿಯಮಗಳು ಹಳ್ಳಿಯಲ್ಲಿ ಕಟ್ಟು ನಿಟ್ಟಾಗಿ ಪಾಲನೆ ಯಾಗದಿರುವದಕ್ಕೆ ದಿನೇ ದಿನೇ ಕರೊನಾ ಹೆಚ್ಚಾಗಾತೊಡಗಿವೆ.
ತಾಲೂಕಿನ ಹಿರೇದಿನ್ನಿ ಕ್ಯಾಂಪ್‍ನಲ್ಲಿ ಕಳೆದ ಎರಡು ದಿನಗಳ ಹಿಂದೆ 12 ಜನಕ್ಕೆ ಕರೊನಾ ಕಾಣಿಸಿಕೊಂಡ ಕಾರಣಕ್ಕೆ ತಾಲೂಕು ಆಡಳಿತ ಹಿರೇದಿನ್ನಿಯನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಈ ಗ್ರಾಮದೊಳಗೆ ಯಾರು ಹೋಗಬಾರದು ಮತ್ತು ಅಲ್ಲಿಂದ ಯಾರು ಹೊರಗಡೆ ಬರಬಾರದು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ತಾಕೀತು ಮಾಡಿದ್ದಾರೆ.
ಈಗಾಗಲೇ ಕರೊನಾ ಕಾಣಿಸಿಕೊಂಡ 12 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅವರೆಲ್ಲರನ್ನು ಮಸ್ಕಿಯ ಕರೊನಾ ಆರೈಕೆ ಕೇಂದ್ರದಲ್ಲಿ ಇರಲು ಅವಕಾಶ ನೀಡಿದ್ದಾರೆ.
ಹಿರೇದಿನ್ನಿ ಕ್ಯಾಂಪ್ ಮೇಲೆ ನಿಗಾವಹಿಸಲು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಬಸಲಿಂಗಪ್ಪ ಹೊಸಗೌಡರ್ ಕಾಂiÀರ್iದರ್ಶಿ ಶರಣಯ್ಯಸ್ವಾಮಿ ಅವರಿಗೆ ಜವಬ್ದಾರಿ ವಹಿಸಿದ್ದಾರೆ.