e-ಸುದ್ದಿ, ಮಸ್ಕಿ
ತಾಲೂಕಿನ ಮಾರಲದಿನ್ನಿ ತಾಂಡದ ಗರ್ಭಿಣಿ ಮಹಿಳೆ ಸಾವಿತ್ರಿ ಕೆಳೂತ್ 108 ತುರ್ತು ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ಜರುಗಿದೆ.
ಮಾರಲದಿನ್ನಿ ಗ್ರಾಮದ ಸಾವಿತ್ರಿ ಕೆಳೂತ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬದವರು 108 ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಮುದಗಲ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆರಿಗೆ ನೋವು ಹೆಚ್ಚದಾಗ ಮಾರ್ಗ ಮಧ್ಯೆಯೇ ಆರೋಗ್ಯ ಸಹಾಯಕ ಎಂ.ಸಿ.ಚೇತನ, ವಾಹನ ಚಾಲಕ ಚಂದಾಲಿಂಗಪ್ಪ ಕರ್ತವ್ಯ ಹಾಗು ಸಮಯ ಪ್ರಜ್ಞೆಯಿಂದ ಹೆರಿಗೆ ಮಾಡಿಸಿದ್ದಾರೆ.
ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.