ಪರಿಸರ ಉಳಿವಿಗಾಗಿ ಮರ ಬೆಳಸಿ
ಶರಣರೆ ಇಂದು ಸರ್ವರೂ ನಮ್ಮ ಮಕ್ಕಳ ಕೈಯಿಂದ ಅಪ್ಪ ಬಸವಣ್ಣನವರ ಈ ಕೆಳಗಿನ ವಚನವನ್ನು ಪಠಿಸುತ್ತಾ ಕನಿಷ್ಟ ಒಂದು ಗಿಡ ನೆಟ್ಟು ಅದರ ಪೋಷಣೆ ಯನ್ನು ಮಾಡಲು ಈ ಮೂಲಕ ವಿನಂತಿ.
ವಚನ :
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !
ಭಾವಾರ್ಥ: ಧರ್ಮ ಗುರು ಬಸವಣ್ಣನವರು ೧೨ ಶತಮಾನದಲ್ಲೆ ತಮ್ಮ ಪರಿಸರ ಸ್ನೇಹಿ ಕಾಳಜಿಯನ್ನು ಹಾಗೂ ಮುಂದೆ ಮಾನವರು ತನ್ನ ದುರಾಸೆಗಾಗಿ ಪ್ರಕೃತಿಯ ಮೇಲೆ ಮಾಡಬಹುದಾದ ಅನಾಹುತದ ಬಗ್ಗೆ ಅಂದೆ ಅಪ್ಪ ಬಸವಣ್ಣನವರು ಈ ವಚನದ ಎಚ್ಚರಿಕೆ ನೀಡಿದ್ದಾರೆ ಅಲ್ಲವೆ?
ಒಲೆ ಹತ್ತಿ ಉರಿಯುತ್ತಿದ್ದರೆ ಅದನ್ನು ಒಂದೊ ಎರಡೊ ತಂಬಿಗೆ ನೀರಿನಿಂದ ಆರಿಸಬಹುದು, ಆದರೆ ಧರೆಯೆ (ಪೃಥ್ವಿ) ಹತ್ತಿ ಉರಿಯಲು ಶುರುಮಾಡಿದರೆ!! ಅಂದರೆ ಪರಿಸರ ನಾಶದಿಂದ ಮರ ಕಡಿದು ಮಳೆ(ಅಪ್ಪು) ವ್ಯತ್ಯಾಸ ದಿಂದ ಅತಿವೃಷ್ಠಿ, ಅನಾವೃಷ್ಠಿಯಾಗಿ ಭೂಮಿಯ ತಾಪಮಾನ (Global Worming ) ಹೆಚ್ಚಳವಾಗುವುದು.
ಇದರ ಪರಿಣಾಮ ಕರೆ, ಭಾವಿ, ಸಮುದ್ರದ ನೀರನ್ನು (ಅಪ್ಪು) ಅದರ ಏರಿಯೇ ಕುಡಿದರೆ(ಆವಿ), ಬೇಲಿಯೇ ಎದ್ದು ಹೊಲದ ಬೆಳೆಯನ್ನು ಮೇವಡೆ,
ಹಾಗೆ ನಾರಿ(ಹೆಂಡತಿ) ಯೆ ತನ್ನ ಮನೆಯಲ್ಲಿ ಕದ್ದರೆ ಸಂಸಾರ ಹಾಳಾದ ಹಾಗೆ,
ತಾಪಮಾನ ಹೆಚ್ಚಳದ ಕಾರಣ (ತಾಯ ಮೊಲೆವಾಲು ನಂಜಾಗಿ ಕೊಲುವಡೆ) ಅಂದರೆ ಭೂಗರ್ಭದಲ್ಲಿ ಜಲವು ಬತ್ತಿ (ಇಂದಿನ ಭೂವಿಜ್ಞಾನದ ಪ್ರಕಾರ೩೦೦ ಅಡಿ) ಆಳದಲ್ಲಿ ಹೋದಕಾರಣ ಅದರಲ್ಲಿ (ಲೆಡ್, ಕ್ಲೋರೈಡ್ ನಂತ) ಅಪಾಯಕಾರಿ ವಸ್ತುಗಳು ನೀರಿನೊಂದಿಗೆ ಬೆರೆತು ತಾಯ ಮೊಲೆಯಲ್ಲಿ ಸೇರಿ ಮಗುವ ಕೊಂದರೆ ಇನ್ನಾರ ದೂರಲಿ ಕೂಡಲಸಂಗಮ ದೇವ ಎಂದು ಅಪ್ಪ ಬಸವಣ್ಣನವರು ಈ ವಚನದಲ್ಲಿ ಪರಿಸರ ಪ್ರಜ್ಞೆ ಯನ್ನ ಮನೋಜ್ಞವಾಗಿ ವಿವರಿಸಿದ್ದಾರೆ ಅಲ್ಲವೆ!!
–ಶಂಭುಲಿಂಗಪ್ಪ ಎಸ್ ಜೆ, ನ್ಯಾಮತಿ
ಮೊ; 9164601640