e-ಸುದ್ದಿ, ಮಸ್ಕಿ
ಪಟ್ಟಣದ ವಿವೇಕಾನಂದ ಮತ್ತು ರಾಮಕೃಷ್ಣ ಆಶ್ರಮದ ಸಂಚಾಲಕರಾದ ಸಿದ್ದು ಬಳಗಾನೂರು ಅವರು ಮಸ್ಕಿ ಪಟ್ಟಣದಲ್ಲಿ ವಿವಿಧ ಬೀದಿ ಮುತ್ತು ಮುಖ್ಯ ರಸ್ತೆಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡಿಸಿದರು.
ಭಾನುವಾರ ಮಸ್ಕಿ ನಗರದಲ್ಲಿರುವ ಅನೇಕ ಕಡೆ ಟ್ರ್ಯಾಕ್ಟರ್‍ನಿಂದ ಸ್ಯಾನಿಟೈಸರ್ ಸಿಂಪರಣೆ ಮಾಡುವ ಮೂಲಕ ಆಶ್ರಮ ಕೂಡ ಸಾಮಾಜಿಕ ಕಳಕಳಿ ಹೊಂದಿದೆ ಎಂದು ಸಾಭೀತು ಮಾಡಿದರು. ಕಳೆದ 11 ದಿನಗಳಿಂದ ಪ್ರತಿನಿತ್ಯ 150 ಜನರಿಗೆ ಸಿದ್ಧ ಪಡಿಸಿದ ಆಹಾರದ ಪೊಟ್ಟಣಗಳನ್ನು ಹಂಚುತ್ತಿದ್ದಾರೆ.
ಮಸ್ಕಿಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಂದಿರುವ ರೋಗಿಗಳಿಗೆ, ಲಾರಿ ಚಾಲಕರಿಗೆ, ಅನಾಥರಿಗೆ ಭೀಕ್ಷುಕರಿಗೆ ಅನ್ನ ಸಂತರ್ಪಣೆ ಮಾಡಿದರು.
ಆಶ್ರಮದ ಮುಖ್ಯಸ್ಥ ಸಿದ್ದು ಬಳಗಾನೂರು ಅವರಿಗೆ ಮಸ್ಕಿ ಪಟ್ಟಣದ ಅನೇಕ ಯುವಕರು ಕೈ ಜೋಡಿಸಿದ್ದು ಕರೊನಾ ಸಂಕಷ್ಟ ಕಾಲದಲ್ಲಿ ಸಹಾಯ ಹಸ್ತ ಚಾಚುವಲ್ಲಿ ಮುಂದೆ ಬಂದಿದ್ದಾರೆ.