ಬಸವನ ನಂಬಿ ನಿಜ ನುಡಿ
ನೀ ಗಡಿಬಿಡಿ ಮಾಡಬ್ಯಾಡ ಕೊಡಿ
ನೀ ನಡಬರಕ ಹೋಗತೀದಿ ಓಡಿ
ಸತ್ಯ ಅರಿತು ಕೂಡಬೇಕು ನೋಡಿ
ಕೂಡಿಚಾಡಿ ಹೇಳಬ್ಯಾಡ ಮಾನಗೇಡಿ,!!
ಸಂಗ ಸೇರಬೇಕು ಶರಣರ ಜೋಡಿ
ಅನುಭವ ಮಾಡಬೇಕು ಅವರ ಕೂಡಿ
ಹಾಲು ಜೇನು ಸವಿದಂಗ ಜ್ಞಾನದ ನುಡಿ
ಮರೆತರೆ ಸುಖಶಾಂತಿ ನಿನಗಿಲ್ಲೋ ಕೊಡಿ
ದೃಷ್ಟ ದುರುಳರ ಸಂಗವೇ ನೀ ಮಾಡಿ
ನಿನಗೆ ಬುದ್ಧಿ ಬರಲಿಲ್ಲೋ ತಿಳಿ ಕೊಡಿ
ವ್ಯರ್ಥ ತಿರುಗುತಿ ಮಾಯವ ಕೂಡಿ
ಸುಖ ನಿನಗೆಲ್ಲಿ ಸಿಗತೈತೋ ಅರುಗೇಡಿ,!!
ನಿನ್ನ ಕರಕೋಂಡು ಊಂಡಾರ ಕೂಡಿ
ಅವರ ಖೂನ ಮರೆತೆಲ್ಲೋ ಖೂನಗೇಡಿ
ಹೋಗಿ ಬರುತೀದಿ ಸುಳ್ಳ ಕಳ್ಳರ ಜೋಡಿ
ಮತ್ತೆ ಸಿಗುವುದಿಲ್ಲೋ ಈ ಜನ್ಮ ಕೊಡಿ,!!
ಮೋಸ ಮಾಡಬ್ಯಾಡ ನೀ ತಿರುಗ್ಯಾಡಿ
ಕೊನೆಗೆ ಬಿದ್ದು ನರಳುತೀದಿ ಕೊಡಿ
ಯಮ ಕರಿಲಾಕ ಬರುತಾನ ಓಡೋಡಿ
ಆಗ ಸುಮ್ಮನೆ ಹೋಗಬೇಕು ಜೋಡಿ,!!
ನಿಜ ಧರ್ಮದಿಂದ ನಡೆದು ಹಿಡಿ ಉಡಿ
ಉಡಿ ತುಂಬಿ ಹರಸುತಾನ ನಿನ್ನ ನೋಡಿ
ಗುರು ಬಸವನ ನಂಬಿ ನಿಜಪಾದ ಹಿಡಿ
ಕಂದಪಂಪಯ್ಯ ಹೇಳತಾನ ಹಿತ ನುಡಿ,!
-ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಸಿಂಧನೂರು
ಕವನ ಚೆನ್ನಾಗಿದೆ.
ವಚನವು ಹಿತವಾಗಿದೆ
ಮುತ್ತಿನಂಥ ನುಡಿ ಗಳಿಂದ ಕೂಡಿದ ಹಿತವಚನ.
ಗುರು ಗಳಿಗೆ ಶರಣು ಶರಣಾರ್ಥಿ.
ಆರ್.ಪ್ರಕಾಶ್.
ಅರ್ಥಪೂರ್ಣ ಸರ್