ಚನ್ನಬಸವ ಕುಟುಂಬಕ್ಕೆ ಕಾಂಗ್ರೆಸ್ ನಿಂದ ಸಹಾಯಧನ ವಿತರಣೆ

ಮಸ್ಕಿ : ಹಳ್ಳಕ್ಕೆ ಕೊಚ್ಚಿಹೊದ ಚನ್ನಬಸವ ಮಡಿವಾಳ ಕುಟುಂಬಕ್ಕೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು 50 ಸಾವಿರ ರೂಪಾಯಿಗಳ ಸಹಾಯ ಧನವನ್ನು ಬುಧವಾರ ವಿತರಿಸಿದರು.

ಪಟ್ಟಣದ ಚನ್ನಬಸವನ ಮನೆಗೆ ತೆರಳಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ  ಅವರು ಚನ್ನಬಸವನ  ಪತ್ನಿ ನೇತ್ರ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಪಕ್ಷದಿಂದ ಸಹಾಯ ಮಾಡಿ ನಿಮ್ಮ ಕುಟುಂಬದವರ ದುಖಃದಲ್ಲಿ ನಾವಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸದಾ ನಿಮ್ಮ ಜೊತೆಗಿರುತ್ತೇವೆ ಎಂದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಪಾಟೀಲ್ ತಾಲುಕು ಆಡಳಿತ ಚನ್ನಬಸವನನ್ನು ರಕ್ಷಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ತಾಂತ್ರಿಕ ಪರಿಣಿತರನ್ನು ಕಳಿಸದೆ ವಿಫಲಕ್ಕೆ ಕಾರಣ ಎಂದು ದೂರಿದರು.

ಸರ್ಕಾರ  ಕೂಡಲೇ ಚನ್ನಬಸವನನ್ನು ಹುಡುಕಿಕೊಡಬೇಕು. ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿಯನ್ನು ಕಳಕೊಂಡ ಪತ್ನಿಗೆ ೨೫ ಲಕ್ಷ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ತಾ.ಪಂ.ಸದಸ್ಯ ಬಸಪ್ಪ ಜಂಗಮರಹಳ್ಳಿ, ಶ್ರೀಶೈಲಪ್ಪ ಬ್ಯಾಳಿ, ರಾಘವೇಂದ್ರ ನಾಯಕ, ತಿಮ್ಮಯ್ಯ ನಾಯಕ , ಶರಣಪ್ಪ ಎಲಿಗಾರ, ಬಸನಗೌಡ ಮುದಬಾಳ,ಆನಂದ ವೀರಾಪುರ, ಶೇಖರಗೌಡ ಬಳಗಾನೂರು ಇದ್ದರು.

Don`t copy text!