ಮಸ್ಕಿ : ಕಳೆದ ಮೂರು ದಿನಗಳ ಹಿಂದೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಚನ್ನಬಸವನ ದುರಂತ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ತಹಸೀಲ್ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ಮಾಡಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶಿರಸ್ತೆದಾರ ಸೈಯದ್ ಅಕ್ತರ್ ಅಲಿ ಅವರಿಗೆ ಸಲ್ಲಿಸಿದರು
_————-_——————————————————
R.k ಕನ್ಸ್ ಟ್ರಕ್ಷನ್ ಬಳಗಾನೂರು
ಖಾದರ ಸಾಬು ಮೇಸ್ತ್ರಿ- 9148913773
ನೂರ ಮಹ್ಮದ ಪೋನ- 7411936617
ಮಹ್ಮದ ಈಸಾಕ -9845643478
ಕಟ್ಟಡ ಸಾಮಾನುಗಳು ಹಾಗೂ ಮನೆಯ ಸಾಮಾನುಗಳು ಮಾರಾಟ ಹಾಗೂ ಬಾಡಿಗೆ ಸಾಮಾನುಗಳು ದೊರೆಯುತ್ತವೆ
——————-_———————–_—————————_
ಬಸವರಾಜ ಎಕ್ಕಿ ಮಾತನಾಡಿ ತಾಲೂಕು ಆಡಳಿತ ಚನ್ನಬಸವನನ್ನು ರಕ್ಷಿಸುವಲ್ಲಿ ಎಡವಿದೆ. ಸರಿಯಾಗಿ ಮುಂಜಾಗ್ರತೆ ವಹಿಸದೆ ಜೀವದ ಜತೆ ಚಲ್ಲಾಟವಾಡಿದರು ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಚನ್ನಬಸವನ ಕುಟುಂಬಕ್ಕೆ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರ ಉದ್ಯೋಗ ಕೊಡಬೇಕು. ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಬೇಕೆಂದು ಆಗ್ರಹಿಸಿದರು.
ಅಶೋಕ ಮುರಾರಿ, ದುರ್ಗರಾಜ ವಟಗಲ್, ವಿಜಯ ಬಡಿಗೇರ, ಬಸವರಾಜ ಉದ್ಬಾಳ, ಸಂತೋಷ ದಿನ್ನಿ, ಅನೀಲಕುಮಾರ, ಮಲ್ಲಪ್ಪ ಗೋನಾಳ, ದೇವರಾಜ ಮಡಿವಾಳ, ಮಾರುತಿ ಜಿನ್ನಾಪುರ, ಹುಚ್ಚರಡ್ಡಿ, ವಸಂತಕುಮಾರ, ರಾಜುಗೌಡ. ಮಹಿಬೂಬ ಕುಷ್ಟಗಿ ಪ್ರತಿಭಟನೆಯ ಲ್ಲಿ ಭಾಗವಹಿಸಿದ್ದರು.