ಭ್ರಮರಾಂಬ ಸಹಕಾರಿಯಿಂದ ಪತ್ರಿಕೆ ಹಂಚುವ ಹುಡಗರಿಗೆ ಕಿಟ್ ವಿತರಣೆ


e-ಸುದ್ದಿ, ಮಸ್ಕಿ
ಕರೊನಾ ಹಿನ್ನಲೆಯಲ್ಲಿ ಹಲವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಪತ್ರಿಕೆಯನ್ನು ಮನೆ ಮನೆಗೆ ಹಂಚುವ ಹುಡಗರು ಬಡವರಿದ್ದು ಅವರಿಗೆ ಪಟ್ಟಣದ ಭ್ರಮರಾಂಬ ಸಹಕಾರಿ ಸಂಸ್ಥೆ ಆಹಾರ ಧಾನ್ಯದ ಕಿಟ್‍ಗಳನ್ನು ಮಂಗಳವಾರ ಹಂಚಿದರು.
ಭ್ರಮರಾಂಬ ಸಹಕಾರಿ ಸಂಸ್ಥೆಯ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಕಿಟ್ ವಿತರಿಸಿದ ನಂತರ ಮಾತನಾಡಿದರು. ಪ್ರತಿದಿನ ಚಾಚು ತಪ್ಪದೆ ಬೆಳಿಗ್ಗೆ ಪತ್ರಿಕೆ ಹಂಚುವ ಹುಡಗರ ಶ್ರಮ ತಪ್ಪಿಸಿನಂತದು. ಅಂತಹ ಪುಣ್ಯದ ಕೆಲಸ ಮಾಡುವ ಹುಡಗರು ಬಡವರಾಗಿದ್ದು ಕರೊನಾ ಕಾರಣಕ್ಕೆ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ನೆರವು ನೀಡಲು ಭ್ರಮರಾಂಬ ಸಹಕಾರಿ ಸದಾ ಜತೆಗಿರುತ್ತದೆ ಎಂದರು.
ಪತ್ರಕರ್ತ ಅಬ್ದುಲ್ ಅಜೀಜ್ ಮಾತನಾಡಿ ಕರೊನಾದಂತ ಸಂಕಷ್ಟದಲ್ಲಿಯೂ ಪತ್ರಿಕೆ ವಿತರಿಸುವ ಕೆಲಸವನ್ನು ಹುಡಗರು ಸೈನಿಕರಂತೆ ಮಾಡುತ್ತಿದ್ದಾರೆ. ಬಡ ಹುಡಗರಿಗೆ ಭ್ರಮರಾಂಬ ಸಹಕಾರಿ ಸಾಹಾಯ ಮಾಡಿರುವದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಕಾರಿಯ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ನಿದೇರ್ಶಕರಾದ ಮಲ್ಲಪ್ಪ ಕುಡತನಿ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಪಂಪಣ್ಣ ಕೊಡಿಹಾಳ, ಪಾಶ್ರ್ವಾನಾಥ ಕೊಲ್ಹಾರ, ದಯಾನಂದ ಜೋಗಿನ್, ಮಾಹಂತೇಶ ಮಸ್ಕಿ, ಕಸ್ತೂರಿ ಇತ್ಲಿ, ಶಿವರಾಜ ಇತ್ಲಿ, ಸಿಇಒ ವೀರೇಶ ಹಿರೇಮಠ, ಕಲ್ಲಪ್ಪ ಗುಡದೂರು, ಖಾಜಹುಸೇನ್ ಹಾಗೂ ಇತರರು ಇದ್ದರು.

Don`t copy text!