e-ಸುದ್ದಿ, ಮಸ್ಕಿ
ರೈತರಿಗೆ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಬೀಜ ಮಾರಾಟ ಮಾಡಿದ್ದು ಕಂಡು ಬಂದರೆ ಅಂತಹ ಬೀಜ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಂದು ಕೃಷಿ ಇಲಾಖೆಯ ಉಪ ನಿರ್ದೆಶಕಿ ಮಂಜುಳಾ ಬಸರಡ್ಡಿ ಎಚ್ಚರಿಸಿದರು.
ಪಟ್ಟಣದ ವಿವಿಧಡೆ ಮಂಗಳವಾರ ಬೀಝ ಮಾರಾಟಗಾರರ ಅಂಗಂಡಿಗಳ ಮೇಲೆ ದಾಳಿ ನಡೆಸಿದ ಅವರು ಅಂಗಡಿಯ ಬಿಲ್ಲ ಹಾಗೂ ತೂಕದ ಯಂತ್ರಗಳನ್ನು ಪರಿಶೀಲಿಸಿದರು. ರೈತರು ಪಡೆಯುವ ಬೀಜಕ್ಕೆ ಕಡ್ಡಾಯವಾಗಿ ಬಿಲ್ ನೀಡಬೇಕು. ತೂಕದಲ್ಲಿ ಹಾಗೂ ದರದಲ್ಲಿ ವ್ಯತ್ಯಾಸ ಕಂಡುಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸುವದರ ಜತೆಗೆ ಅಂಗಡಿಯ ಲೈಸನ್ಸ್ ರದ್ದು ಮಾಡಲಾಗುವದು ಎಂದರು.
ಪಟ್ಟಣದಲ್ಲಿ ಹತ್ತು ಅಂಗಡಿಗಳಿಗೆ ನೋಟಿಸು ನೀಡಿದರು. ತಾಲೂಕು ಕೃಷಿ ಅಧಿಕಾರಿ ಮಹಾಂತೇಶ ಹವಲ್ದಾರ ಹಾಗೂ ಇತರರು ಇದ್ದರು.